ಹೊರಗುತ್ತಿಗೆ ನೌಕರರಿಗೆ ಸಿಗದ ವೇತನ: ಜಿಲ್ಲಾಡಳಿತಕ್ಕೆ ಮನವಿ

0
52
loading...

ಕನ್ನಡ್ಮಮ ಸುದ್ದಿ-ಕಾರವಾರ : ಕಂದಾಯ ಇಲಾಖೆಯಲ್ಲಿ ದುಡಿಯುವ ಹೊರಗುತ್ತಿಗೆ ನೌಕರರಿಗೆ ಕಳೆದ ಕೆಲವು ದಿನಗಳಿಂದ ವೇತನವಿಲ್ಲದ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದ್ದು ಟೆಂಡರ್ ಪಡೆದವರು ಸೂಕ್ತ ಸಮಯಕ್ಕೆ ವೇತನ ಸಂದಾಯ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳುಳ್ಳ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ರಾಜ್ಯ ಕಂದಾಯ ಇಲಾಖೆಯಲ್ಲಿ 10,450 ಗ್ರಾಮ ಸಹಾಯಕರ ಹುದ್ದೆಯನ್ನು 1077-78ರಲ್ಲಿ ಸೃಷ್ಠಿ ಮಾಡಿ ಕಳೆದ 35 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಪ್ರಾರಂಭದ ಅವಧಿಯಲ್ಲಿ 100 ರೂ. ಇದ್ದ ಮಾಸಿಕ ವೇತನ ಕ್ರಮೇಣವಾಗಿ 10ಸಾವಿರಕ್ಕೆ ತಲುಪಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದುವರೆಗೆ ಗ್ರಾಮ ಸಹಾಯಕರಾದ ನಮ್ಮನ್ನು ಡಿ. ದರ್ಜೆ ನೌಕರರು ಎಂದು ಪರಿಗಣಿಸುವಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಗ್ರಾಮ ಸಹಾಯಕರ ಸೇವೆಯು ಅವಶ್ಯಕತೆಯನ್ನು ಗಣನೆಗೆ ತೆಗೆದುಕೊಂಡು 2007ರ ಜುಲೈ 10ರಂದು ಗ್ರಾಮ ಸಹಾಯಕರ 10,450 ಹುದ್ದೆಯನ್ನು ಖಾಯಂಗೊಳಿಸಿತು. ಆದರೆ ಹುದ್ದೆಗೆ ತಕ್ಕಂತೆ ಮೂಲ ವೇತನ ನಿಗದಿಯಾಗಿಲ್ಲ. ಅಲ್ಲದೆ ವೇತನ ಪರಿಷ್ಕರಣೆಯೂ ಮಾಡಿಲ್ಲ. ಸರಕಾರಗಳು ಬದವಾವಳಿಯಾದಂತೆ ಹಲವು ಭಾರೀ ಕೇಂದ್ರ ಸಂಘವು ಗ್ರಾಮ ಸಹಾಯಕರನ್ನು ಡಿ. ದರ್ಜೆ ನೌಕರರು ಎಂದು ಪರಿಗಣಿಸಿ ಸೇವಾ ನಿಯಮಾವಳಿ ರೂಪಿಸಬೇಕು ಎಂದು ಬೇಡಿಕೆ ಇಟ್ಟು ಸರಕಾರವನ್ನು ಒತ್ತಾಯಿಸಿ ಹೋರಾಟ ನಡೆಸಿದರೂ ಸರಕಾರ ಗ್ರಾಮ ಸಹಾಯಕರಿಗೆ ಡಿ. ದರ್ಜೆ ನೌಕರರೆಂದು ಪರಿಗಣಿಸಿ, ಸೇವಾ ಭದ್ರತೆ ನೀಡಿಲ್ಲ.
ಅನೇಕ ಗ್ರಾಮ ಸಹಾಯಕರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡಿ ಜೀವನ ನಿರ್ವಹಿಸುತ್ತಿದ್ದು ಮಾಸಿಕ ಹತ್ತು ಸಾವಿರ ವೇತನ ಪಡೆಯುತ್ತಿದ್ದು ಇಂದಿನ ದುಬಾರಿ ದಿನದಲ್ಲಿ ಜೀವನ ನಿರ್ವಹಿಸುವುದು ಮಕ್ಕಳ ವಿದ್ಯಾಭ್ಯಾಸ, ವೃದ್ಧರ ಆರೋಗ್ಯ ಸುಧಾರಣೆ ಮುಂತಾದ ಸಮಸ್ಯೆಗಳಿಗೆ ವೇತನ ಸಾಲುತ್ತಿಲ್ಲ.
2014ರಜ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ ಹಾಗೂ ಸಮಾಜ ಕಲ್ಯಾಣ ಸಚಿವರಾದ ಎಸ್. ಆಂಜನೇಯ ಅವರ ಮುಂದೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಮತ್ತು ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಸೇರಿದಂತೆ ಕೇಂದ್ರ ಸಂಘದ ಪದಾಧಿಕಾರಿಗಳ ಮುಂದೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.
ಬೇಡಿಕೆಗಳು:ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರು ಎಂದು ಪರಿಗಣಿಸಬೇಕು. 10ವರ್ಷ ಮೇಲ್ಪಟ್ಟ ಸೇವೆ ಸಲ್ಲಿಸಿದವರಿಗೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಕಲ್ಪಿಸಬೇಕು. ಮಾಸಿಕ ನಿವೃತ್ತಿ ವೇತನ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ನಿಯೋಗದಲ್ಲಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ, ಕಾರ್ಯದರ್ಶಿ ನಾಗೇಶ ನಾಯ್ಕ, ಉಪಾಧ್ಯಕ್ಷೆ ಸಂಗೀತಾ ನಾಯ್ಕ ಪದಾಧಿಕಾರಿಗಳಾದ ರಾಮಕೃಷ್ಣ ನಾಯ್ಕ, ಗುರುದಾಸ ನಾಯ್ಕ, ಸಂಜೀವಿ ಪೋಂಡೆಕರ್, ರಾಜೇಂದ್ರ ಬಾಂದೇಕರ್, ಮೋಹನ, ಮನೋಜ ಬಾಂದೇಕರ್, ದಿನೇಶ ಅಂಚೇರಕರ್ ಹಾಗೂ ಇನ್ನಿತರರು ಇದ್ದರು.

loading...

LEAVE A REPLY

Please enter your comment!
Please enter your name here