58 ಕೆಜಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

0
19
loading...

ಕನ್ನಡಮ್ಮ ಸುದ್ದಿ-ಶಿರಸಂಗಿ
ಕ್ರೀಡೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಪ್ರತಿಯೊಬ್ಬ ಯುವಕರು ಕ್ರೀಡಾ ಮನೊಭಾವ ಬೆಳಸಿಕೊಳ್ಳಬೇಕು ಎಂದು ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಹಾಗೂ ಕಾಂಗ್ರೇಸ್‌ ಮುಖಂಡ ಆನಂದ ಚೋಪ್ರಾ ಹೇಳಿದರು. ಸಮೀಪದ ಕಲ್ಲಾಪುರ ಗ್ರಾಮದ ರಂಗ ಮಂದಿರದ ಆವರಣದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಶ್ರೀ ರೇಣುಕಾ ದೇವಿ ಸಂಘದವರು ಆಯೋಜಿಸಿದ್ದ 58 ಕೆಜಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ದುಷ್ಟಚಟಗಳಿಂದ ದೂರವಿರಬೇಕು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡ ಹೊಂದಬೇಕು. ಅಂದಾಗ ಮಾತ್ರ ಕ್ರೀಡೆಗಳನ್ನು ಉಳಿಸಿ-ಬೆಳಸಲು ಸಾಧ್ಯ. ಗ್ರಾಮದಲ್ಲಿ ನಿರಂತರ ಸಾಮೂಹಿಕ ವಿವಾಹ, ಜಾತ್ರೆ, ಪ್ರವಚನ ಸೇರಿದಂತೆ ನಾಡು-ನುಡಿ ಕಟ್ಟುವ ಕಾರ್ಯಕ್ರಮ ನೆಡೆಯಬೇಕು.
ರೈತ ಬರಗಾಲದಿಂದ ಬೇಸರ ಹೊಗಿದ್ದಾನೆ ನಾವೆಲ್ಲರು ಜಾತಿ, ಮತ, ಪಂಥವನ್ನು ದೂರುಮಾಡಿ ಪರಮಾತ್ಮನಲ್ಲಿ ರೈತನ ಏಳ್ಗೆಗಾಗಿ ಸದಾ ಪ್ರಾರ್ಥಿಸಬೇಕು ಎಂದರು.
ಈ ಸಂದರ್ಭದಲ್ಲಿ ರೇಣುಕಾ ದೇವಿ ಸಂಘದ ಯುವಕರಿಂದ ಆನಂದ ಚೋಪ್ರಾ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬಸಲಿಂಗಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ತಾಪಂ ಸದಸ್ಯ ಮಹಾರಾಜ ಕಣವಿ, ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಗೋಡಿ, ಶಿವಾಂದ ಹಾಲೋಳ್ಳಿ, ವೀರಭಧ್ರಪ್ಪ ಜೋಕಾಲಿ, ಮುಸ್ತಾಕ ರಾಮದುರ್ಗ, ಶಿವಪ್ಪ ಮಾಸ್ತಿ, ಚಂದ್ರು ಲಿಂಗರಡ್ಡಿ, ಸಿದ್ದು ಕಣವಿ, ಮೈಲಾರಿ ಬುದಿಹಾಳ ಸೇರಿದಂತೆ ಮತ್ತಿತರು ಅತಿಥಿಗಳಾಗಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here