ಅಕ್ರಮ ಮದ್ಯ ಸಾಗಾಟ-ವಾಹನ ಸಹಿತ ಆರೋಪಿಯ ಬಂಧನ

0
23
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಾಹನ ಸಮೇತ ಬಂಧಿಸಿದ ಘಟನೆ ಜೊಯಿಡಾ ತಾಲೂಕಿನ ಅನಮೋಡ ತನಿಖಾ ಠಾಣೆಯಲ್ಲಿ ಮಂಗಳವಾರ ನಡೆದಿದೆ.

ಗೋವಾ ರಾಜ್ಯದಲ್ಲಿ ತಯಾರಿಸಿದ ಮದ್ಯವನ್ನು ಟಾಟಾ ಟರ್ಬೋ 1109 ಮಿನಿ ಲಾರಿ (ಕೆಎ-28, ಬಿ-0992) ರ ಮೂಲಕ ಅಕ್ರಮವಾಗಿ ಕರ್ನಾಟಕಕ್ಕೆ ಸಾಗಿಸುತ್ತಿರುವ ಖಚಿತ ಮಾಹಿತಿಯಡಿ ಅನಮೋಡ ತನಿಖಾ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿ ರೂ: 7,00,000 ಲಕ್ಷ ಅಂದಾಜು ಬೆಲೆಯ ಮದ್ಯ, ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ವಶಪಡಿಸಿಕೊಂಡು ಆರೋಪಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋನಾಳ ಗ್ರಾಮದ ನಾಗರಾಜ ರಾಮಣ್ಣ ಗುಳಬಾಳ (ವ:25) ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಬಕಾರಿ ಜಂಟಿ ಆಯುಕ್ತ ರಾಜೇಂದ್ರ ಪ್ರಸಾದ, ಅಬಕಾರಿ ಉಪ ಆಯುಕ್ತ ಆರ್.ನಾಗಶಯನ, ಪ್ರಭಾರಿ ಉಪ ಅಧೀಕ್ಷಕರುಗಳಾದ ಮಂಜುನಾಥ ಅರೆಗುಳಿ, ಗಣೇಶ.ಎಸ್.ನಾಯ್ಕ ಇವರುಗಳ ಮಾರ್ಗದರ್ಶನದಲ್ಲಿ ಅಬಕಾರಿ ತನಿಖಾ ಠಾಣೆಯ ಉಪ ನಿರೀಕ್ಷಕ ಶ್ರೀಕಾಂತ.ಬಿ.ಅಸೋದೆ ಹಾಗೂ ಸಿಬ್ಬಂದಿ ಆನಂದ.ಎಚ್.ಹರಿಜನ, ಅಬಕಾರಿ ರಕ್ಷಕರುಗಳಾದ ಬಾಲಕೃಷ್ಣ.ಎಸ್.ಕೆ, ನಿರ್ಮಲಾ.ಎಂ.ನಾಯ್ಕ ದಾಳಿ ನಡೆಸಿದರು.

loading...