ಆನ್‌ಲೈನ್‌ ಮೂಲಕ ಕಂದಾಯ ಪ್ರಕರಣ ವಿಲೇವಾರಿ : ರುದ್ರೇಶ

0
22
loading...

ಬಾಗಲಕೋಟೆ: ಸರಕಾರದ ನಿರ್ದೇಶನದಂತೆ ಕಂದಾಯ ನ್ಯಾಯಾಲಯದ ಪ್ರಕರಣಗಳನ್ನು ಜನವರಿ ಮಾಹೆಯಿಂದ ಕಂದಾಯ ನ್ಯಾಯಾಲಯ ಪ್ರಕರಣಗಳ ಮಾನಿಟರಿಂಗ್‌ ಸಿಸ್ಟಮ್‌ (ಆರ್‌ಸಿಸಿಎಂಎಸ್‌) ತಂತ್ರಾಂಶದ ಮೂಲಕ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಎಸ್‌.ಎನ್‌.ರುದ್ರೇಶ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ವಿಡಿಯೋ ಸಂವಾದ ಹಾಲ್‌ನಲ್ಲಿ ಈ ಕುರಿತು ಜಿಲ್ಲೆಯ ಉಪವಿಭಾಗಾಧಿಕಾರಿಗಳ ಹಾಗೂ ತಹಶೀಲ್ದಾರ ಕಾರ್ಯಾಲಯಗಳ ಸಿಬ್ಬಂದಿಗಳಿಗೆ ಪ್ರಾತ್ಯಕ್ಷತೆ ತರಬೇತಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ವ್ಯವಸ್ಥೆಯಿಂದ ಪ್ರಕರಣ ದಾಖಲಾತಿಯಿಂದ ಹಿಡಿದು ವಿಚಾರಣೆ, ಪ್ರಕರಣ ಹಂತ, ತೀರ್ಪುಗಳು ಹಾಗೂ ವರ್ಷವಾರು ಕೋಢೀಕೃತ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಿಂದ ಕಕ್ಷಿದಾರರಿಗೆ ಪ್ರಕರಣಗಳ ಹಂತವನ್ನು ತಿಳಿಯಲು ಅನುಕೂಲವಾಗಲಿದೆ ಎಂದರು.

ಈ ಕುರಿತು ಎನ್‌ಐಸಿಯ ಅಧಿಕಾರಿಗಳಾದ ಗಿರಿಆಚಾರ ಅವರು ಪ್ರಾತ್ಯಕ್ಷತೆಯ ಮೂಲಕ ತರಬೇತಿ ನೀಡಿದರು. ತರಬೇತಿಯಲ್ಲಿ ಎಸ್‌.ಎಂ.ಕುಗಾಟೆ, ಮಹೇಶ ಪತ್ತಾರ, ಎಂ.ಬಿ.ಗುಡೂರ, ಬಿರಡಿ, ಚಲವಾದಿ, ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here