ಇಂದು ಏಕೀಕರಣ ಹೋರಾಟಗಾರರ ಉಪನ್ಯಾಸಮಾಲೆ

0
19
loading...

ಸುರೇಬಾನ: ಸಮೀಪದ ಕಲಹಾಳ ಗ್ರಾಮದಲ್ಲಿ ಇದೇ ಡಿ.8 ರಂದು ಗುರುವಾರ ಮಧ್ಯಾಹ್ನ 3.ಕ್ಕೆ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಭೈರನಹÀಟ್ಟಿಯ ದೊರೆಸ್ವಾಮಿ ವೀರಕ್ತಮಠ ಇವರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ (ನೋಂ), ಕರ್ನಾಟಕ ಏಕೀಕರಣಕ್ಕೆ ಷಷ್ಠಿಪೂರ್ತಿ ಸಮಾರಂಭದ ನಿಮಿತ್ಯ 60 ಏಕೀಕರಣ ಹೋರಾಟಗಾರರ ಉಪನ್ಯಾಸಮಾಲೆ 18 ಕಾರ್ಯಕ್ರಮ ನಡೆಯಲಿದೆ. ಇದರ ಜೋತೆಗೆ ಏಕೀಕರಣ ಹೋರಾಟಗಾರರಾದ ನಾಗನೂರ ರುದ್ರಾಕ್ಷಿಮಠದ ಶಿವಬಸವ ಸ್ವಾಮಿಗಳ 127 ನೇ ಜಯಂತಿ ಆಚರಿಸಲಾಗುತ್ತದೆ.

ಕಾರ್ಯಕ್ರಮದ ಸಾನಿಧ್ಯವನ್ನು ಭೈರನಟ್ಟಿಯ ದೊರೆಸ್ವಾಮಿ ವೀರಕ್ತಮಠ ಶಾಂತಲಿಂಗ ಸ್ವಾಮಿಗಳು ವಹಿಸುವರು, ಅಧ್ಯಕ್ಷತೆಯನ್ನು ಜಿ ಆಯ್‌ ಹಕಾಟೆ ಪ್ರ. ಗು ಸರಕಾರಿ ಪ್ರೌಢ ಶಾಲೆ ಕ¯ಹಾಳ ವಹಿಸುವರು. ಉಪನ್ಯಾಸವನ್ನು ಪ್ರೊ. ಆರ್‌ ಬಿ ಚಿನಿವಾಲರ ಇವರು ಏಕೀಕರಣ ಹೋರಾಟಗಾರರಾದ ನಾಗನೂರ ರುದ್ರಾಕ್ಷಿಮಠದ ಶಿವಬಸವ ಸ್ವಾಮಿಗಳ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here