ಇಂದು ಮಾಸಿಕ ಚಿಂತನ ಗೋಷ್ಠಿ

0
12
loading...

ಘಟಪ್ರಭಾ: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಮಾಸಿಕ ಚಿಂತನ ಗೋಷ್ಠಿಯ 77ನೇ ಮಾಸಿಕ ಸುವಿಚಾರ, ಶ್ರೀಗಳ ಕಿರೀಟ ಪೂಜಾ ಸಮಾರಂಭವು ದಿ.29ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.

ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು ವಹಿಸುವರು. ಅಧ್ಯಕ್ಷತೆಯನ್ನು ಹೂನ್ಯಾಳ ವೇದಮೂರ್ತಿ ಕುಮಾರಮಠದ ವಹಿಸುವರು.

ಘಟಪ್ರಭಾದ ಮಹಾಂತೇಶ ಶಾಸ್ತ್ರೀ ಇವರಿಂದ ಅನುಭವ ಚಿಂತನ. ಶರಣ ಮಲ್ಲಪ್ಪ ಲಕ್ಷ್ಮೇಶ್ವರ ಇವರಿಂದ ಅನ್ನದಾಸೋಹ, ಕೇದಾರಿ ಮಂಜೋಜಿ ಇವರಿಂದ ಚಿಂತನ ಸೇವೆ ಜರುಗಲಿದೆ. ಹಣಮಂತ ಪಾದಗಟ್ಟಿ, ಗಂಗಾಧರ ಕುಂಬಾರ, ಮಹಾದೇವ ಹೂಗಾರ ಇವರಿಂದ ಸಂಗೀತ ಸೇವೆ ಜರುಗಲಿದೆ. ನಂತರ ಶ್ರೀ ಸಿದ್ಧಲಿಂಗೇಶ್ವರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

loading...

LEAVE A REPLY

Please enter your comment!
Please enter your name here