ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಸಾಹಿತ್ಯೀಕ ಸ್ಪರ್ಧೆ

0
11
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಅಂಜುಮನ್ ಹಾಮಿಯ ಮುಸ್ಲಿಮೀನ್ ಶಿಕ್ಷಣ ಸಂಸ್ಥಯ ಇಸ್ಲಾಮಿಯಾಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ವಾರ್ಷೀಕ ಸಾಹಿತ್ಯೀಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮುಖ್ಯಅತಿಥಿಯಾಗಿ ಉಪಸ್ಥಿತಿದ್ದ ಜಾಮೀಯಾ ಮಸೀದಿ (ಚಿನ್ನದಪಳ್ಳಿ)ಯಖತೀಬ್ ಮೌಲಾನ್‍ಅಬ್ದುಲ್‍ಅಲೀಮ್, ಶ್ರಮವು ನಮ್ಮನ್ನುಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲದು, ನಾವು ಆಲಸಿಗಳಾಗಿ ಜೀವಿಸಿದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮ ಶ್ರಮವೇ ನಿಮ್ಮ ಸಮುದಾಯವನ್ನು ಸಮಾಜದಲ್ಲಿಇತಲೆಎತ್ತಿತಿರುಗುವಂತೆ ಮಾಡುವಂತೆ, ಸಮುದಾಯದಅಭಿವೃದ್ಧಿಗಾಗಿಜೀವನದಲ್ಲಿ ಮುಂದೇ ಬರಬೇಕೆಂದುಕರೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯಉಪಾಧ್ಯಕ್ಷ ಸೈಯ್ಯದ್‍ಅಬ್ದುಲ್‍ರಹ್ಮಾನ್ ಬಾತಿನ್, ಶಿಕ್ಷಕರು ನಮಗಾಗಿ ಬಹಳಷ್ಟು ಶ್ರಮವಹಿಸಿದ್ದರು.ಆ ಕಾರಣದಿಂದಲೇ ನಾವು ಸಾಹಿತ್ಯೀಕವಾಗಿಇಷ್ಟೊಂದು ಮುಂದೆ ಬಂದಿರುವುದು.ಈಗ ನಿಮ್ಮ ಶಿಕ್ಷಕರು ನಿಮ್ಮ ಮೇಲೆ ಇಷ್ಟೊಂದು ಶ್ರಮ ವಹಿಸುತ್ತಿರುವುದು ನೀವು ಕೂಡ ಸಮಾಜಕ್ಕೆ ಸಾಹಿತ್ಯೀಕವಾಗಿಕೊಡುಗಯನ್ನು ನೀಡಬೇಕುಎಂದರು.
ವೇದಿಕಯಲ್ಲಿ ಹೈಸ್ಕೂಲ್ ಬೋರ್ಡ್ ಕಾರ್ಯದರ್ಶಿ ಅಬ್ದುಲ್ ವಾಜೀದ್ ಕೋಲಾ, ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕ ಶಬ್ಬಿರ್‍ಆಹ್ಮದ್‍ದಫೆದಾರ್ ಸ್ವಾಗತಿಸಿದರು.ಮೌಲಾನ ಶಾಹೀನ್‍ಖಮರ್ ಪರಿಚಯಿಸಿದರು.ಶಿಕ್ಷಕರಾದ ಅಬ್ದುಲ್‍ರಷೀದ್ ಮಿರ್ಜಾನಿ ಹಾಘೂ ಮೌಲಾನಅಬ್ದುಲ್ ಹಫೀಝ್‍ಖಾನ್‍ಕಾರ್ಯಕ್ರಮ ನಿರೂಪಿಸಿದರು.ಮೌಲಾನ ಮುಹಮ್ಮದ್‍ಅಶ್ರಫ್ ಮುಅಲ್ಲಿಮ್‍ಧನ್ಯವಾದ ಅರ್ಪಿಸಿದರು.

loading...