ಈದ ಮಿಲಾದ ಪ್ರಯುಕ್ತ ವಿವಿಧ ರೂಪಕಗಳ ಮೆರವಣಿಗೆ

0
28
loading...

ಘಟಪ್ರಭಾ: ಇಲ್ಲಿಯ ಅಹಲೆ ಸುನ್ನತ್‌ ಜಮಾತದ ವತಿಯಿಂದ ಪ್ರವಾದಿ ಮಹಮದ್‌ ಪೈಗಂಬರ ಜನ್ಮದಿನ (ಈದ ಮೀಲಾದ ) ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ರೂಪಕಗಳ ಭವ್ಯ ಮೆರವಣಿಗೆ ಸೋಮವಾರದಂದು ಶ್ರದ್ಧಾ ಭಕ್ತಿಯಿಂದ ಜರುಗಿತು.
ಸಂಜೆ 4 ಗಂಟೆಗೆ ಸುನ್ನಿ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರವಾದಿ ಮಹ್ಮದ ಪೈಗಂಬರರ ಕುರಿತಾದ ಹಾಡುಗಳು (ನಾತ್‌) ಹಾಗೂ ಜೈ ಘೋಷಗಳನ್ನು ಕೂಗುತ್ತಾ ವಾಹನಗಳಿಗೆ ಮಕ್ಕಾ ಮದೀನಾ ಮಾದರಿ ಅಲಂಕೃತ ರೂಪಕದ ದೃಶ್ಯ ಜನರನ್ನು ಆಕರ್ಷಿಸಿತು. ಮನೆ, ಅಂಗಡಿ, ಓಣಿಗಳು ದೀಪ ಅಲಂಕಾರದಿಂದ ಶೃಂಗಾರಗೊಂಡಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ತಂಪು ಪಾನಿಯ ಶರ್ಬತ್‌ ಹಾಗೂ ಸಹಿ ಹಂಚಲಾಯಿತು. ನಂತರ ಜಾಮಿಯಾ ಮಸೀದಿಗೆ ತಲುಪಿ ಪ್ರಾರ್ಥನೆಯೊಂದಿಗೆ ಮೆರವಣಿಗೆ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಧುಪದಾಳ ಶ್ರೀ ಸಿದ್ಧಾರೂಢ ಮಠದ ಭೀಮಾನಂದ ಸ್ವಾಮಿಗಳು, ಹೊಸಮಠದ ವೀರೂಪಾಕ್ಷ ದೇವರು. ಮೂಡಲಗಿ ಪಿಎಸ್‌ಐ ಬಾಳಪ್ಪಾ ಬಾಲದಂಡಿ, ಹಿರಿಯರಾದ ಡಿ.ಎಂ.ದಳವಾಯಿ, ರಾಮಣ್ಣಾ ಹುಕ್ಕೇರಿ, ಸುರೇಶ ಪಾಟೀಲ, ಅಹಲೆ ಸುನ್ನತ್‌ ಜಮಾತದ ಹಿರಿಯರಾದ ಹಾಜಿ ಅಬ್ದುಲಗಣಿ ಮೋಮಿನ, ಸುಲ್ತಾನಸಾಬ ಕಬ್ಬೂರ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಸುರೇಶ ಪೂಜಾರಿ, ನೂರ ಪೀರಜಾದೆ, ಅಹ್ಮದಹುಸೇನ ಬಾಗವಾನ, ಗೌಸ ಬಾಗವಾನ, ಮೌಲಾಲಿ ಬಾಗವಾನ, ಮೊಹ್ಮದ ಮೋಮಿನ, ಅಸ್ಗರ ಮಕಾನದಾರ, ಇಮಾಮಹುಸೇನ ಮುಲ್ಲಾ, ಸಾಧೀಕ ಮೋಮಿನ, ಫಾರುಕ್‌ ಅತ್ತಾರ, ಇರ್ಶಾದ ವಾರಿಮನಿ, ಜಹಾಂಗೀರ ಬಾಗವಾನ, ಅಬುಫಜಲ್‌ ಬಳ್ಳಾರಿ, ದಿಲಾವರ ಬಾಳೇಕುಂದ್ರಿ, ರಹೀಮಖಾನ ಪಠಾಣ, ದೌಲತ ದೇಸಾಯಿ, ದಿಲಾವರ ನದಾಪ, ಮೆಹಬೂಬ ಸಯ್ಯದ, ದಾದು ಬೇಪಾರಿ, ರಶೀದ ಚೌಧರಿ, ರಪೀಕ ಪೀರಜಾದೆ, ರಾಜೇಸಾಬ ಮುಲ್ಲಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here