ಎಂಎಸ್‌ಐಎಲ್‌ಗೆ ವಿರೋಧ ! ನಮ್ಮೂರಿಗೆ ಸರಾಯಿ ಮಳಿಗೆ ಬೇಡ !

0
23
loading...

ಪಾಲಭಾವಿ:-ರಾಯಬಾಗ ತಾಲೂಕಿನ ಗಡಿಯಲ್ಲಿರುವ ಹಂದಿಗುಂದ ಗ್ರಾಮಕ್ಕೆ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಮಳಿಗೆ ಮಂಜೂರಾಗಿದೆ ಎಂಬ ಮಾಹಿತಿ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿಯಿಂದ ತಿಳಿದು ಬಂದಿದ್ದು, ಸ್ಥಾಪನೆಯಾಗುವ ಮುನ್ನವೆ ಅದಕ್ಕೆ ಗ್ರಾಮದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಊರಲ್ಲಿ ಸಾರಾಯಿ ಅಂಗಡಿ ಇಲ್ಲವೆಂದರೂ ನೆರೆಯ ಸೈದಾಪೂರ ಮತ್ತು ಮಹಾಲಿಂಗಪುರ ಪಟ್ಟಣಕ್ಕೆ ಹೋಗಿ ಕುಡಿದು ಬರುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಈಗಲೇ ವೃತ್ತಿನಿರತ ಕುಡುಕರ ಸಾರ್ವಜನಿಕ ಉಪಟಳ ಮತ್ತು ಹವ್ಯಾಸಿ ಕುಡುಕರ ಕೌಟುಂಬಿಕ ಕಲಹ ಜಾಸ್ತಿ ಆಗಿದೆ. ಇನ್ನೂ ಸ್ವ ಗ್ರಾಮದಲ್ಲೇ ಸಾರಾಯಿ ಮಳಿಗೆಯಾದರೆ ? ಎಷ್ಟು ಸಂಸಾರ ಬೀದಿಗೆ ಬರುತ್ತವೆಯೋ ಗೊತ್ತಿಲ್ಲ.

ಸರಕಾರ ತೆರಿಗೆ ಲಾಭಕ್ಕಾಗಿ ಗ್ರಾಮೀಣ ಭಾಗದÀ ಸಂಸಾರಗಳನ್ನು ಬೀದಿಗೆ ತರುವುದು ಸರಿಯಲ್ಲ. ಮಾಡುವುದಾದರೆ ಸರಕಾರಿ ಆಸ್ಪತ್ರೆ ಸುಧಾರಣೆ ಮಾಡಲಿ, ಕುಡಿವ ನೀರು ಸಮರ್ಪಕ ಪೂರೈಕೆ ಮಾಡಲಿ, ಆರೋಗ್ಯಕರ ಜೀವನಕ್ಕೆ ಬೇಕಾದ ಅಗತ್ಯಗಳನ್ನು ಪೂರೈಕೆ ಮಾಡಲಿ. ಆದರೆ, ಸಂಸ್ಕೃತಿ ಹಾಳು ಮಾಡುವ ಸಾರಾಯಿ ಅಂಗಡಿ ನಮ್ಮೂರಿಗೆ ಬೇಡವೇ ಬೇಡ. ಶಾಸಕರು ಈ ವಿಷಯ ಗಂಭೀರವಾಗಿ ಪರಿಗಣಿಸಿ ಗ್ರಾಮದ ಪರಿಸರ ಹದಗೆಡುವ ಈ ಕ್ರಮವನ್ನು ತಡೆಯಬೇಕು ಎಂದು ಮಹಿಳಾ ಸಂಘಟನೆಗಳು, ಎಬಿವಿಪಿ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾಕ್ಸ್‌—- ಹಂದಿಗುಂದ ಗ್ರಾಮ ಕೃಷಿ, ಹೈನುಗಾರಿಕೆ ಫಲವಾಗಿ ಸಮೃದ್ಧವಾಗಿದ್ದರೂ ಸಾರ್ವಜನಿಕ ವಲಯದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಏನಾದರೂ ಪ್ರಗತಿದಾಯಕ ಯೋಜನೆ ಬರಲಿ ಎಂದು ಸಾರ್ವಜನಿಕರು ಎದುರು ನೋಡುತ್ತಿದ್ದರೆ, ಸರಕಾರ ಮಾತ್ರ ಎಂಎಸ್‌ಐಎಲ್‌ ಎಂಬ ಸಾರಾಯಿ ಮಳಿಗೆಯನ್ನು ಮಂಜೂರು ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹಳ್ಳಿಗಳು ಸಾಂಸ್ಕೃತಿಕ ತೊಟ್ಟಿಲುಗಳು. ಇದ್ದುದರಲ್ಲೇ ಸಾಂಸ್ಕೃತಿಕ ಪರಂಪರೆ ಗ್ರಾಮಗಳಲ್ಲಿ ಜೀವಂತವಾಗಿದೆ. ಪಟ್ಟಣಗಳಂತೂ ಹಾಳಾಗುತ್ತಿವೆ. ಇನ್ನು ಸಾರಾಯಿ ಅಂಗಡಿ ಸ್ಥಾಪಿಸುವ ಮೂಲಕ ಈ ಹಳ್ಳಿಗಳನ್ನೂ ನಿರ್ಣಾಮ ಮಾಡುವುದು ಬೇಡ. ಹಾಗೊಂದು ವೇಳೆ ಎಂಎಸ್‌ಐಎಲ್‌ ಆರಂಭವಾದರೆ ಸತ್ಯಾಗ್ರಹ, ಪ್ರತಿಭಟನೆ ನಡೆಯುವುದು ಶತಸಿದ್ಧ. ****ಶ್ರೀ ಶಿವಾನಂದ ಸ್ವಾಮೀಜಿ ಸಿದ್ದೇಶ್ವರ ಮಠ ಹಂದಿಗುಂದ****

loading...

LEAVE A REPLY

Please enter your comment!
Please enter your name here