ಎಚ್‌ಐವಿ ಪೀಡಿತರಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ

0
21
loading...

ಚಿಕ್ಕೋಡಿ: ಏಡ್ಸ-ಎಚ್‌ಐವಿ ಪೀಡಿತರಿಗೆ ಸಮಾಜದಲ್ಲಿ ಅನುಕಂಪಕ್ಕಿಂತ ಅವಕಾಶ ನೀಡುವುದು ಮುಖ್ಯವಾಗಿದೆ ಎಂದು ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹಾಂತಪ್ಪ ಎ.ಡಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಹೆಚ್‌.ಐ.ವಿ ನಿಯಂತ್ರಣಕ್ಕೆ ಕೈ ಜೋಡಿಸಿ ಜಾಗೃತಿ ಜಾಥಾಗೆ ಆರ್‌.ಡಿ. ಕಾಲೇಜಿನಿಂದ ಹೊರಟ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಅವರು, ಎಚ್‌ಐವಿ ಪೀಡಿತರನ್ನು ಸಮಾಜದಲ್ಲಿ ಸಾಮಾನ್ಯ ಜನರಂತೆ ನೋಡಿದಾಗ ಅವರಲ್ಲಿಯೂ ಆತ್ಮಸ್ಥೈರ್ಯ ಬೆಳೆಯಲು ಸಾಧ್ಯವೆಂದರು.

ಪುರಸಭೆ, ಆರೋಗ್ಯ ಇಲಾಖೆ, ನ್ಯಾಯವಾದಿಗಳ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಾದಲ್ಲಿ ಪಟ್ಟಣದ ಎಲ್ಲ ಶಾಲಾ ಬಾಲಕರು ಆಶಾ ಕಾರ್ಯಕರ್ತೆಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿತು.

ಪುರಸಭೆ ಅಧ್ಯಕ್ಷ ಆರತಿ ಮುಂಡೆÀ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಿಗೆಜ್ಜಿ, 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಹಿರೇಮಠ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ವ್ಹಿ.ಮುನ್ಯಾಳ, ತಾಲೂಕಾ ವೈಧ್ಯಾಧಿಕಾರಿ ವ್ಹಿ.ವ್ಹಿ.ಶಿಂಧೆ, ಪಿಎಸ್‌ಐ ಸಂಗಮೇಶ ದಿಡಗಿನಾಳ, ನ್ಯಾಯವಾದಿ ಎಂ.ಬಿ.ಪಾಟೀಲ, ಶೇಖರ ಮುಂಡೆ, ಜಿ.ಎಸ್‌.ಕುಲಕರ್ಣಿ, ಡಾ.ಎಸ್‌.ಎಸ್‌.ಗಡೇದ,ಡಾ.ವಿವೇಕ ಹೊನ್ನಳ್ಳಿ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here