ಎಟಿಎಂಗಳಲ್ಲಿ ಹಣ ಪೂರೈಸುವಂತೆ ರೈತ ಸಂಘದಿಂದ ಮನವಿ

0
20
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪಟ್ಟಣ ಹಾಗೂ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕಿನ ಎಟಿಎಂಗಳಲ್ಲಿ ಹಣ ಪೂರೈಸಿ ಜನರ ತೊಂದರೆ ನಿವಾರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಶ್ರೀಕಾಂತ ಶಿರಹಟ್ಟಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಮರ್ಪಕವಾಗಿ ಗ್ರಾಹಕರಿಗೆ ಹಣ ದೊರಕುತ್ತಿಲ್ಲ. ಗ್ರಾಹಕರು ದಿನಂಪತ್ರಿ ನಿತ್ಯದ ವ್ಯವಹಾರಗಳಿಗೆ ಹಣದ ತೊಂದರೆಯಾಗುತ್ತಿದ್ದು, ದಿನನಿತ್ಯ ಜನತೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಬ್ಯಾಂಕುಗಳ ಮುಂದೆ ನಿಂತು ಪರದಾಡಿದರೂ ಬ್ಯಾಂಕಿನವರು ಎಟಿಎಂ ತೆರೆದು ಜನಕ್ಕೆ ಹಣ ನೀಡಿ ಸಹಕರಿಸಬೇಕೆಂಬ ವ್ಯವದಾನವನ್ನು ತೋರಿಸುತ್ತಿಲ್ಲ ಎಂದು ಆರೋಪಿಸಿದರು. ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಒಂದೇ ಎಟಿಎಂ ತೆರೆದಿದ್ದು, ಅದರಲ್ಲಿ ತೆಗೆದುಕೊಳ್ಳಲು ಜನರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಪಟ್ಟಣದ ಯುನಿಯನ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ ಅಲ್ಲದೆ ತಾಲೂಕಿನ ಇನ್ನಿತರ ಬ್ಯಾಂಕ್‌ಗಳ ಎಟಿಎಂ ಮುಚ್ಚಿರುವದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಬ್ಯಾಂಕ್‌ಗಳಲ್ಲಿ ಒಂದು ವಾರದಲ್ಲಿ ಹಣ ತುಂಬಿ ಎಟಿಎಂಗಳನ್ನು ತೆರೆಯಬೇಕು. ಕೂಡಲೇ ಸಂಬಂದಿಸಿದ ಅಧಿಕಾರಿಗಳು ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚನೆ ನೀಡಿ ಎಟಿಎಂಗಳಲ್ಲಿ ಹಣ ಒದಗಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ತಾಲೂಕಾ ಅಧ್ಯಕ್ಷ ಎಂ.ವಾಯ್‌. ಸೋಮನ್ನವರ, ಆರ್‌.ಬಿ.ಹೊಸಮನಿ, ಸಂತೋಷ ಅನಿಗೋಳ, ನಿಂಗಪ್ಪ ರಾಜಗೋಳಿ, ಮಂಜುನಾಥ ಮಾಲಬನ್ನವರ, ದೀಲಾವರ ಮುಲ್ಲಾ, ರಮೇಶ ಮಿಂಡೋಳ್ಳಿ, ಪರವಯ್ಯ ಸಿಮಿಕೇರಿಮಠ, ಮಲ್ಲಿಕಾರ್ಜುನ ಸಾಣಗಿ, ಈಶ್ವರಗೌಡಾ ಪಾಟೀಲ, ಕಬೀರಸಾಬ ವಕ್ಕುಂದ, ಬಸವಂತಪ್ಪ ದೊಡಗೌಡ್ರ,.ಮೊದಲಾದವರು ಇದ್ದರು.

loading...

LEAVE A REPLY

Please enter your comment!
Please enter your name here