ಎಲ್ಲ ಧರ್ಮದವರು ಜಾತಿ, ಬೇದ ಮರೆತು ಬದುಕಿ: ಸಂಸದ ಅಂಗಡಿ

0
56
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಲ್ಲ ಧರ್ಮದವರು ಜಾತಿ ಬೇದ ಮಾಡದೆ, ನಾಡುನುಡಿ ಸರ್ವಜನಾಂಗ ಶಾಂತಿಯಿಂದ ನೆಲೆಸೋಣ ಎಂಬುದು ರಾಷ್ಟ್ರಕವಿ ಕುವೆಂಪು ಅವರ ಬರವಣಿಗೆ ಮುಖಾಂತರ ತಿಳಿಸಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಗುರುವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ರಾಷ್ಟ್ರ ಕವಿ ಕುವೆಂಪು ಜನ್ಮ ದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.
12 ನೇ ಶತಮಾನದಲ್ಲಿ ಬಸವಣ್ಣನವರು ವಿಚಾರದಾರೆಗೆ ತಕ್ಕಂತೆ ಯಾವುದೇ ಜಾತಿ, ಧರ್ಮ ಅಧಿಕಾರಗಳಿಗೆ ಬಲಿಯಾಗದೆ ತಮ್ಮದೆ ಸ್ವಂತ ವಿಚಾರಗಳಿಗೆ ಬೆಲೆ ನೀಡಿದಂತ ವ್ಯಕ್ತಿ ಎಂದರೆ ಕುವೆಂಪು ಮಾತ್ರ ಎಂದರು. ಇನ್ನು ಇವರು ಬರೆದ ನಾಡಗೀತೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ತಿಳಿಸುತ್ತದೆ ಹಾಗಾಗಿ ಅವರಿಗೆ ಏಷ್ಟು ಗೌರವಸಲ್ಲಿಸಿದರು. ಕಡಿಮಿಯೇ ಎಂದರು.
ನಾಗನೂರು ರುದ್ರಾಕ್ಷಿಮಠ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಕುವೆಂಪು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸಲಿಕ್ಕೆ ಶ್ರಮಪಟ್ಟವರು. ಇವರು ಉತ್ಕೃಷ್ಟ ಸಾಹಿತ್ಯವನ್ನು ಅರಿತು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ವ್ಯಕ್ತಿ. ಅಲ್ಲದೇ ಮಾನವ ಹುಟ್ಟವಾಗ ವಿಶುಮಾನವ, ಹುಟ್ಟಿ ಬೆಳೆದಂತೆ ಅಲ್ಪಮಾನವನಾಗಿ ಬೆಳೆಯುತ್ತಾನೆ ವ್ಯಕ್ತಿಯಲ್ಲಿ ನಾನು ಎಂಬ ಅಹಂ ಭಾವಮೂಡಿ, ನಾನು ಮಾಡಿದ್ದೆ ಸರಿ ಎಂಬ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾನೆ ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ವೈಚಾರಿಕತೆಯ ಪ್ರಜ್ಞೆಗಳನ್ನು ಮೂಡಿಸಿಕೊಂಡು ಸಾಮಾಜಿಕ ಕಳಕಳಿ ಮೂಡುವಂತ ಕೃತಿಗಳನ್ನು ಓದಿ ತಿಳಿದುಕೊಳ್ಳಬೇಕು ಅಂದಾಗ ನಾವುಗಳು ಬದಲಾಗಲು ಸಾಧ್ಯ ಎಂದರು. ಅಲ್ಲದೇ ವ್ಯಕ್ತಿ ಬುದ್ದಿಯ ಗುಲಾಮ ಮನಸ್ಸಾಗಬೇಕು ಮನಸಿನ ಗುಲಾಮ ಬುದ್ದಿಯಾಗಬಾರದು ಎಂದು ಹೇಳಿದರು.
ಜಿಲ್ಲಾಧಿಕಾರಿ ಎನ್‌ ಜಯರಾಮ್‌ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಜಾತಿ-ಕುಟುಂಬಕ್ಕೆ ಸೀಮಿತಗೊಂಡು ಸಂಕುಚಿತ ಮನೋಭಾವ ಬೆಳೆಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವತೆ ಸಂದೇಶ ಪ್ರಸ್ತುತವಾಗುತ್ತದೆ ಎಂದರು. ಜಗತ್ತಿನಲ್ಲಿ ಅನೇಕ ಸಾಹಿತಿಗಳು, ಪ್ರಾಧ್ಯಾಪಕರು ಇದ್ದಾರೆ. ಆದರೆ ಜಾತಿ-ಭಾಷೆ-ಗಡಿ ಮೀರಿ ವಿಶ್ವಮಾನವತೆ ಸಾರಿದ ಕೀರ್ತಿ ಕುವೆಂಪು ಅವರಿಗೆ ಮಾತ್ರ ಸಲ್ಲುತ್ತದೆ ಎಂದು ಹೇಳಿದರು. ತೊಟ್ಟಿಲಿನಿಂದ ಸಮಾಧಿಯವರೆಗೆ ಧಾರ್ಮಿಕ ಆಚರಣೆಗಳು ಜಾರಿಯಲ್ಲಿರುವ ಈ ನೆಲದಲ್ಲಿ ಕುವೆಂಪು ಅವರು ವೈಚಾರಿಕತೆಯ ಬೀಜ ಬಿತ್ತಿದ್ದಾರೆ ಎಂದರು.
ಜೈನ್‌ ಕಾಲೇಜಿನ ಪ್ರಾದ್ಯಾಪಕ ಕೆ ಎಮ್‌. ದೊಡಮನಿ ಕುವೆಂಪು ಅವರ ಜೀವನದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು. ಕುವೆಂಪು ಯಾವುದೇ ಅಧಿಕಾರ, ಹಣಕ್ಕಾಗಿ ಹಿಂದೆ ಬಿದ್ದವರಲ್ಲ ಅವರಿಗೆ ಅವರದೇ ಆದ ವೃತ್ತಿಪರತೆ ಇತ್ತು ಆ ನಿಟ್ಟಿನಲ್ಲಿ ವಿಶ್ವಮಾನವನಾಗಲಿಕ್ಕೆ ಸಾಧ್ಯವಾಯಿತು. ಪ್ರಸ್ತುತ ದಿನದಲ್ಲಿ ಪ್ರತಿ ಕ್ಷೇತ್ರದಲ್ಲಿಯು ಅನಾಚಾರ ತೆಲೆದೂಗುತ್ತಿದೆ ಅದನ್ನು ಸಾಮಾನ್ಯ ಜನರಿಗೆ ತಿಳಿಹೇಳಿ ಸತ್ಯದ ಕಡೆ ಮಾರ್ಗದರ್ಶನ ಮಾಡುವಂತವರು ಎಲ್ಲ ಧಾರ್ಮಿಕ ಗುರುಗಳು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಕಿರು ಪುಸ್ತಕ ಬಿಡುಗಡೆಗೊಳಸಿದರು. ಕುವೆಂಪು ಅವರ ವಿಶ್ವಮಾನವ ಗೀತೆಯಾದ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಗೀತೆಯನ್ನು ಸುರೇಶ ಚಂದ್ರಗಿ ತಂಡದಿಂದ ಹಾಡಿದರು.
ಈ ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್‌ ಡಯಾಸಿಸ್‌ ಬಿಶಪ್‌ ಪಿಟರ್‌ ಮಚಾಡೋ, ಮುಪ್ತಿ ಅಬ್ದುಲ್‌ ಅಜಿ ಖಾಜಿ, ಭಂತೆ ಮಾತ ಮೈತ್ರಿಮ ಪರಮಪೂಜ್ಯ 105 ಧರ್ಮ ಸೇನಾ ಭಟ್ಟಾಚಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಗುರ್ಪಿತ್‌ ಸಿಂಗ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಆರ್‌.ರವಿಕಾಂತೇಗೌಡ, ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ, ಕನ್ನಡ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ, ತಾಲ್ಲೂಕು ಕಸಾಪ ಅಧ್ಯಕ್ಷ ಸಸಾಲಟ್ಟಿ, ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪುರ, ತಹಶೀಲ್ದಾರ ಗಿರೀಶ ಸ್ವಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ನೂರಾರು ಶಾಲಾ ವಿದ್ಯಾರ್ಥಿಗಳು ಇದ್ದರು

loading...

LEAVE A REPLY

Please enter your comment!
Please enter your name here