ಏಡ್ಸ್‌ ಜಾಗೃತಿಗೆ ಎನ್‌ಎಸ್‌ಎಸ್‌ ಶಿಬಿರಾರ್ಥಿಗಳ ಪಾತ್ರ ಮಹತ್ವದ್ದು

0
33
loading...

ಕನ್ನಡಮ್ಮ ಸುದ್ದಿ-ನಾಲತವಾಡ : ಸಮುದಾಯದ ಸಹಭಾಗಿತ್ವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಯ ನಾನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಾದರಿಯಲ್ಲೇ ಎನ್‌ಎಎಸ್‌ಎಸ್‌ ಶಿಬಿರಾರ್ಥಿಗಳು ಆರೋಗ್ಯ ಜಾಗೃತಿಯಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಆರೋಗ್ಯದ ಕುರಿತು ಅರಿವು ಮೂಡಿಸಬೇಕು ಎಂದು ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳಾದ ಡಾ.ಡಿ.ಕೆ.ಮಳಖೇಡ ಹೇಳಿದರು.
ಇಲ್ಲಿಯ ಶ್ರೀ ವೀರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಯೋಗದಡಿ ವಿಶ್ವ ಏಡ್ಸ ದಿನಾಚರಣೆ ನಿಮತ್ಯ ಹಮ್ಮಿಕೊಂಡಿದ್ದ ಜಾಥಾ ವೇಳೆಯಲ್ಲಿ ಅವರು ಮಾತನಾಡಿನ ಚಾಲನೆ ನೀಡಿದರು.
ಏಡ್ಸ ಕುರಿತು ಮಾತನಾಡಿದ ಅವರು ಏಡ್ಸ ರೋಗದ ನಿಯಂತ್ರಣದಲ್ಲಿ ನೈತಿಕತೆ ಹಾಗೂ ಬದ್ದತೆಯ ಅವಶ್ಯಕತೆ ಇದ್ದು, ಹ್ಯೂಮನ್‌ ಇಮ್ಯುನೊ ಡಿಫಿಸಿಯನ್ಸಿ ವೈರಸ್‌ನ ಲಕ್ಷಣದಿಂದ ಏಡ್ಸ ಪತ್ತೆಯಾಗುತ್ತದೆ, ಇದು ಅನಾರೋಗ್ಯದ ಲಕ್ಷಣಗಳನ್ನು ಬದಲಿಸುತ್ತದೆ, ಹೆಚ್ಚು ದುರ್ಬಲ ಸೊಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ ಸಿಂಡ್ರೋಮ್‌ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ ಎಂದರು.
ಹೆಚ್‌ಐವಿ ಸೊಂಕಿಗೆ ಒಳಗಾದ 2-4 ವಾರಗಳ ನಂತರ ಬಹಳ ವ್ಯಕ್ತಿಗಳಲ್ಲಿ ಪ್ಲೂನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಕೆಲ ದಿನಗಳಲ್ಲಿ ಅಥವಾ ವಾರಗಳಲ್ಲಿ ಅವುಗಳು ಗುಣವಾಗುತ್ತವೆ. ನಂತರ ಆ ಲಕ್ಷಣಗಳು ಸಾಮಾನ್ಯವಾಗಿ ಜ್ವರ, ತಲೆನೋವು, ಕೀಲು ನೋವು, ಆಯಾಸ, ಬಾಯಿ ಮತ್ತು ಗಂಟಲಲ್ಲಿ ಹುಣ್ಣುಗಳು, ಚರ್ಮದ ತುರಿಕೆ ಈ ಬಗೆಯ ಲಕ್ಷಣಗಳು ರೋಗಿಗಳಲ್ಲಿ ಕಂಡು ಬರುತ್ತವೆ ಎಂದರು. ಈ ವೇಳೆ ಪ್ರಾಚಾರ್ಯರಾದ ಜಿ.ಬಿ.ಹಂಚಿನಾಳಮಠ, ಉಪನ್ಯಾಸಕರಾದ ಬಿ.ಕೆ.ಪಾಟೀಲ, ಎಸ್‌.ಬಿ.ಪಾಟೀಲ, ಎಸ್‌.ಎನ್‌.ಕಂಗಳ, ಬಿ.ಎಸ್‌.ಹೊಸಗೌಡರ, ಶ್ರೀಕಾಂತ ತಳವಾರ, ಜಯಶ್ರೀ ನಾಯಕ ಇದ್ದರು.

loading...

LEAVE A REPLY

Please enter your comment!
Please enter your name here