ಕನಕದಾಸರ ಕವನಗಳು ಸಂಶೋಧನೆಗೊಳ್ಳಲಿ: ಕೆಂಪಣ್ಣವರ

0
90
loading...

ಕನ್ನಡಮ್ಮ ಸುದ್ದಿ-ರಾಯಬಾಗಃ ವಿಶ್ವಚೇತನ ಸಂತಶ್ರೀ ಕನಕದಾಸರು ವಿಶ್ವ ಮಾನವರಾಗಿದ್ದು, ಅವರ ಕವನಗಳ ಬಗ್ಗೆ ಸಂಶೋಧನೆ ಆಗಬೇಕು ಎಂದು ಡಾ. ಪಿ ಜಿ. ಕೆಂಪಣ್ಣವರ ಹೇಳಿದರು.
ಸ್ಟೇಶನ್‌ದಲ್ಲಿರುವ ವಸಂತರಾವ ಪಾಟೀಲ ಸಭಾಭವನದಲ್ಲಿ ಅಖಿಲ ಭಾರತ ಸ್ವಾತಂತ್ರ್ಯ ಸೇನಾನಿ ಜನಮಾನ್ಯ ದಿ. ವಿ ಎಲ್‌. ಪಾಟೀಲ ಅಬಾಜಿ ಫೌಂಡೇಶನ ವತಿಯಿಂದ ವಿಶ್ವಚೇತನ ಸಂತಶ್ರೀ ಕನಕದಾಸರ 529ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹನಮಾಪೂರ ಹಡಗನಾಳದ ಅಂಬರೀಶ್ವರ ಮಹಾರಾಜರು ಪುಣ್ಯಪುರುಷರು ಕೇವಲ ಒಂದು ಜಾತಿಗೆ ಸೀಮಿತರಾಗದೆ ಎಲ್ಲ ಸಮಾಜದವರು ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಆರಾಧಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತರಾವ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಪಿ.ಎಲ್‌.ಡಿ ಬ್ಯಾಂಕ ಅಧ್ಯಕ್ಷ ಪ್ರತಾಪರಾವ್‌ ಪಾಟೀಲ ವಹಿಸಿದ್ದರು. ಫೌಂಡೇಶನ ಅಧ್ಯಕ್ಷರು ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಣಯ ಪಾಟೀಲ ಸಂತ ಕನಕದಾಸರ ಹಾಗೂ ಮಾಜಿ ಸಚಿವ ವಸಂತರಾವ್‌ ಪಾಟೀಲ ಅಬಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವೇದಿಕೆಯ ಮೇಲೆ ತಾಲೂಕ ಪಂಚಾಯತ ಅಧ್ಯಕ್ಷ ರವಿಶಂಕರ ನರಗಟ್ಟಿ, ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೊಕಾಟೆ, ಕಂಕಣವಾಡಿ ಪಟ್ಟಣ ಪಂಚಾಯತ ಅಧ್ಯಕ್ಷ ಮಹಾದೇವ ಗದಾಡಿ, ಕಲ್ಲಪ್ಪ ಹಳಿಂಗಳಿ, ಪ್ರಭಾಕರ ಮೇತ್ರಿ, ನಿಂಗಪ್ಪ ಪೂಜೇರಿ, ಆರ್‌.ಎಸ್‌.ಬನಟ್ಟಿ, ದಾದೂ ಮಾಳಿ, ಶಾಂತಿನಾಥ ಶೆಟ್ಟಿ, ಪ್ರಭಾಕರ ಪುರಾಣಿಕ, ಹಾಲಪ್ಪ ಪೂಜಾರಿ, ಪಿ ಎಂ. ಪಾಟೀಲ, ಎಸ್‌.ಬಿ.ಹೊಳಕರ, ಸಿದ್ದಪ್ಪ ಪೂಜೇರಿ, ಮಹಾದೇವ ಪೂಜಾರಿ, ರಮೇಶ ಕುಂಬಾರ, ಬೀರಪ್ಪ ಬಣ್ಣೆ, ಮಲಪ್ಪ ಕೆಂಪವಾಡ, ಮಹಮ್ಮುದಿನ ಚಮ್ಮನಶೇಖ ಉಪಸ್ಥಿತರಿದ್ದರು. ಜ್ಯೋತಿ ರೂಪಾಳೆ ಕಾರ್ಯಕ್ರಮ ನಿರೂಪಿಸಿದರು, ಸನ್ಮತಿ ಶೆಟ್ಟಿ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ಭರಮಾ ಡೋಣೆ, ಲಕ್ಷ್ಮಣ ಕೋಳಿ, ಕಲಂದರ ಅತ್ತಾರ, ವಾಸು ಮನ್ನಿಕೇರಿ, ಹಣಮಂತ ಸಾನೆ, ಎಸ್‌.ಬಿ.ಬೆಳಕೂಡ, ನಾರಾಯಣ ಕುಲಕರ್ಣಿ, ಎ.ಎನ್‌.ಅರಳಿಕಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here