ಕುರುಬರನ್ನು ಕಡೆಗಣಿಸಿದ ಪಕ್ಷಕ್ಕೆ ಅಧಿಕಾರ ಮರೀಚಿಕೆಯಾದೀತು?

0
83
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ರಾಜ್ಯದಲ್ಲಿ ಜಾತಿಗಳ ಪ್ರಾಬಲ್ಯ ಈ ರೀತಿ ಇದ್ದು , ಲಿಂಗಾಯತರು 160 ಕ್ಷೇತ್ರಗಳಲ್ಲಿ ಇದರಲ್ಲಿ ಹೆಚ್ಚಿನ ಪ್ರಾಬಲ್ಯವಿರುವುದು 80 ಕ್ಷೇತ್ರಗಳಲ್ಲಿ ಮಾತ್ರ. ಒಕ್ಕಲಿಗರು 104 ಕ್ಷೇತ್ರಗಳಲ್ಲಿ ಇದರಲ್ಲಿ ಜಾಸ್ತಿ ಪ್ರಾಬಲ್ಯವಿರುವುದು 60 ಕ್ಷೇತ್ರಗಳಲ್ಲಿ ಮಾತ್ರ. ಕುರುಬರು 190 ಕ್ಷೆತ್ರಗಳಲ್ಲಿ ಇದರಲ್ಲಿ ಅಧಿಕ ಪ್ರಾಬಲ್ಯವಿರುವುದು 40 ಕ್ಷೇತ್ರಗಳಲ್ಲಿ ಮಾತ್ರ. ಬೆಸ್ತರು 40 ಕ್ಷೇತ್ರಗಳಲ್ಲಿ ಇದರಲ್ಲಿ ಅಧಿಕ ಪ್ರಾಬಲ್ಯವಿರುವುದು 20 ಕ್ಷೇತ್ರಗಳಲ್ಲಿ ಮಾತ್ರ. ಈಡೀಗರು 30 ಕ್ಷೇತ್ರಗಳಲ್ಲಿದ್ದು ಹೆಚ್ಚಾಗಿರುವುದು 20 ಕ್ಷೇತ್ರಗಳಲ್ಲಿ ಮಾತ್ರ. ಮಾಳಿ / ತಿಗಳರು 40 ಕ್ಷೇತ್ರಗಳಲ್ಲಿ ಪ್ರಾಬಲ್ಯ ಜಾಸ್ತಿ ಪ್ರಾಬಲ್ಯವಿರುವುದು 10 ಕ್ಷೇತ್ರಗಳಲ್ಲಿ ಮಾತ್ರ. ಮರಾಠರು 20 ಕ್ಷೇತ್ರದಲ್ಲಿದ್ದು ಜಾಸ್ತಿ ಪ್ರಾಬಲ್ಯವಿರುವುದು 6ರಲ್ಲಿ ಮಾತ್ರ. ದಲಿತರು 224, ಇದರಲ್ಲಿ ಮಾದಿಗರು 194 ( ಅಧಿಕ ಪ್ರಾಬಲ್ಯವಿರುವುದು 50 ಕ್ಷೇತ್ರಗಳು) ಛಲವಾದಿಗಳು 186( ಜಾಸ್ತಿ ಪ್ರಾಬಲ್ಯವಿರುವುದು 45 ಕ್ಷೇತ್ರಗಳು) ಲಂಬಾಣಿಗಳು 40 ಕ್ಷೇತ್ರಗಳಲ್ಲಿ ಜಾಸ್ತಿ ಪ್ರಾಬಲ್ಯವಿರುವುದು 20 ಕಡೆಗೆ. ಹಾಗೂ ಬೋವಿಗಳು 10 ಕ್ಷೇತ್ರಗಳಲ್ಲಿ ಮಾತ್ರ) ವಾಲ್ಮಿಕಿ 40 ಕ್ಷೇತ್ರಗಳಲ್ಲಿ ಜಾಸ್ತಿ ಪ್ರಾಬಲ್ಯವಿರುವುದು 20 ರಲ್ಲಿ ಮಾತ್ರ. ಮುಸ್ಲಿಂ 50 ಕ್ಷೇತ್ರಗಳು ಅಧಿಕ ಪ್ರಾಬಲ್ಯ 25 ಕಡೆ.
28 ಲೋಕ ಸಭಾ ಕ್ಷೇತ್ರಗಳಲ್ಲಿ – ದಕ್ಷಿಣ ಕರ್ನಾಟಕದಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಸೇರಿ ಒಟ್ಟು 13 ಲೋಕ ಸಭಾ ಕ್ಷೇತ್ರಗಳಲ್ಲಿ ದಲಿತರು, ಒಕ್ಕಲಿಗರು, ಕುರುಬರು, ಲಿಂಗಾಯತರು, ಮತ್ತು ಮುಸ್ಲಿಂರು ಇತರೆ ಹಿಂದೂಳಿದ ವರ್ಗಗಳು ಇದ್ದು 104 ವಿಧಾನ ಸಭಾ ಸದಸ್ಯರ ಸಂಖ್ಯೆ ಇದೆ. ಈಗ ಕಾಂಗ್ರೆಸ್ 6, ಎರಡು ಜನತಾ ದಳ ಮತ್ತು ಬಿಜೆಪಿ ಲೋಕ ಸಭಾ ಸದಸ್ಯರಿದ್ದಾರೆ.ಇದರಲ್ಲಿ ಮೂರು ದಲಿತರು, ಒಬ್ಬರು ಹಿಂದುಳಿದವರು, ಇಬ್ಬರು ಒಕ್ಕಲಿಗರು ಗೆದ್ದಿದ್ದಾರೆ. ಜೆಡಿಎಸ್‍ನಿಂದ ಗೆದ್ದ ಇಬ್ಬರೂ ಒಕ್ಕಲಿಗರಾಗಿದ್ದಾರೆ. ಬಿಜೆಪಿಯಿಂದ ಇಬ್ಬರು ಒಕ್ಕಲಿಗರು, ಒಬ್ಬರು ಬ್ರಾಹ್ಮಣರು, ಒಬ್ಬರು ಲಿಂಗಾಯತರು. ಒಬ್ಬರು ಹಿಂದುಳಿದವರು ಗೆದ್ದಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು 104 ಕ್ಷೇತ್ರಗಳಲ್ಲಿ ಮಾತ್ರವಿರುವುದರಿಂದ 6 ಜನ ಒಕ್ಕಲಿಗರು ಗೆದ್ದಿದ್ದಾರೆ. ಮೂರು ಜನ ದಲಿತರು, ಇಬ್ಬರು ಹಿಂದುಳಿದವರು, ಒಬ್ಬರು ಬ್ರಾಹ್ಮಣರು, ಒಬ್ಬರು ಲಿಂಗಾಯತರು ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ಮೂರು ಜನ ಬಿಜೆಪಿಯಿಂದ ಗೆದ್ದಿರುವುದು ಯಾವುದೇ ಜಾತಿಯ ಪ್ರಾಬಲ್ಯದಿಂದಲ್ಲ. ಕಾಸ್ಮೊಪಲ್ಟಿನ್ ಸಿಟಿ ಮತ್ತು ಮೋದಿಯವರ ಅಲೆಯಿಂದ ಗೆದ್ದಿದ್ದಾರೆ. ಆದರೆ 6 ರಲ್ಲಿ ನಾಲ್ಕು ಜನ ಗೆದ್ದಿರುವುದು ಈ ಭಾಗದಲ್ಲಿ ಒಕ್ಕಲಿಗರು ಅಧಿಕವಾಗಿರುವುದರಿಂದಲೆ ಎಂದು ನಿರ್ಧರಿಸಬಹುದು. ಒಕ್ಕಲಿಗರನಂತರದ ಸ್ಥಾನ ದಲಿತರದು. ಹಿಂದುಳಿದವರು ಗೆದ್ದಿರುವುದನ್ನು ಗಮನಿಸಿದಾಗ ಇಲ್ಲಿ ಲಿಂಗಾಯತರ ಪ್ರಭಾವ ಕಡಿಮೆಯೆಂದು ಭಾವಿಸಬಹುದು. ಹೀಗಾಗಿ ಬಿಜೆಪಿ ಈ ಪ್ರದೇಶದಲ್ಲಿ ಅಷ್ಟಾಗಿ ವಿಧಾನ ಸಭೆ ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ತಾಳಲಾರದು. ಬಿಜೆಪಿಯಲ್ಲಿ ಒಕ್ಕಲಿಗ ನಾಯಕರ ಪ್ರಭಾವ ಕಡಿಮೆಯಿದೆ ಎನ್ನುವುದು ಸರ್ವ ವಿಧಿತವಾದ ಮಾತು ಎನ್ನಲಡ್ಡಿಯಿಲ್ಲ. ಇನ್ನು ಉತ್ತರ ಕರ್ನಾಟಕವನ್ನು ತೆಗೆದುಕೊಂಡರೆ ಮುಂಬಯಿ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟವೆಂದು ಎರಡು ಭಾಗಗಳನ್ನಾಗಿ ಮಾಡಬಹುದು. ಇಲ್ಲಿ 12 ಲೋಕ ಸಭಾ ಸದಸ್ಯರಿದ್ದಾರೆ. ಅದರಲ್ಲಿ ಒಂದು ಕಾರವಾರ ಲೋಕಸಭಾ ಕ್ಷೇತ್ರ ಕರಾವಳಿಯಲ್ಲಿ ಸೇರಿಸಿದರೆ ಇನ್ನು ಮುಂಬಯಿ ಕರ್ನಾಟಕದ 7 ಲೋಕ ಸಭಾ ಸ್ಥಾನಗಳಲ್ಲಿ ಕರಾವಳಿ ಲೋಕ ಸಭಾ ಸ್ಥಾನವನ್ನು ಬಿಟ್ಟು 6 ಸ್ಥಾನಗಳಲ್ಲಿ, 5 ಸ್ಥಾನಗಳು ಬಿಜೆಪಿಗೆ ಮತ್ತು ಒಂದು ಸ್ಥಾನ ಕಾಂಗ್ರೆಸ್ಸಿಗೆ ದಕ್ಕಿದೆ. ಇವುಗಳಲ್ಲಿ 4 ಜನ ಲಿಂಗಾಯತರು ಒಬ್ಬರು ಬ್ರಾಹ್ಮಣರು, ಒಬ್ಬರು ದಲಿತರು ಗೆದ್ದಿದ್ದಾರೆ. ಮುಂಬಯಿ ಕರ್ನಾಟಕದ ಮತದಾರರಲ್ಲಿ ಪ್ರಥಮ ಸ್ಥಾನದಲ್ಲಿ ಲಿಂಗಾಯತರು, ದ್ವಿತೀಯ ಸ್ಥಾನದಲ್ಲಿ ಕುರುಬರು, ತೃತೀಯ ಸ್ಥಾನದಲ್ಲಿ ದಲಿತರು, ಉಳಿದಂತೆ ಮರಾಠ, ಮಾಳಿ, ಕೋಳಿ ಸಮಾಜಗಳು ಬರುತ್ತವೆ.ಇಲ್ಲಿ ಲಿಂಗಾಯತರು ಮತ್ತು ಇತರರು ಎಂದೆ ವಿಧಾನ ಸಭೆಗಳಲ್ಲಿ ಸ್ಪರ್ದೆ ಎರ್ಪಟ್ಟು ಅದೇ ರೀತಿ ವಿಧಾನ ಸಭೆ ಸ್ಥಾನಗಳನ್ನು ಗೆಲ್ಲಲಾಗಿದೆ ಎಂದು ತಿಳಿಯುತ್ತದೆ. ಇಲ್ಲಿ ಒಟ್ಟು 50 ವಿಧಾನ ಸಭೆ ಸ್ಥಾನಗಳು ಇವೆ. ( ಕಾರವಾರ ಲೋಕ ಸಭೆಯ ಖಾನಾಪುರ ಮತ್ತು ಕಿತ್ತೂರು ಎರಡು ವಿಧಾನ ಸಭಾ ಸ್ಥಾನಗಳು ಸೇರಿ)ಇಲ್ಲಿ ಲಿಂಗಾಯತ ಮತದಾರರ ಜೊತೆ ಕುರುಬರು ಮತಗಳು ಬಂದಾಗ ಮಾತ್ರ ಯಾವುದಾದರು ಒಂದು ಪಕ್ಷಕ್ಕೆ ಜಯಸಿಗುವ ಸಾದ್ಯತೆ ಇದೆ ಎಂದು ಲೆಕ್ಕಚಾರ ಹಾಕಿ ಬಲ್ಲವರು ಪದೆ ಪದೇ ಉಚ್ಚರಿಸುತ್ತ ಬಂದಿದ್ದಾರೆ.
ಇನ್ನು ಹೈದ್ರಾಬಾದ ಕರ್ನಾಟಕದಲ್ಲಿ ಹಿಂದುಳಿದವರು, ದಲಿತರು ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನ ಲಿಂಗಾಯತರದ್ದು ಮತ್ತೀತರ ಸ್ಥಾನವೆಂಬುವುದನ್ನು ಪರಿಶೀಲಿಸೋಣ. ಒಟ್ಟು 5 ಲೋಕ ಸಭಾ ಸ್ಥಾನಗಳಲ್ಲಿ ಮೂರು ಸ್ಥಾನಗಳು ಬಿಜೆಪಿ,(ಇಬ್ಬರು ಲಿಂಗಾಯತರು ಒಬ್ಬರು ವಾಲ್ಮೀಕಿ) ಎರಡು ಸ್ಥಾನಗಳು ಕಾಂಗ್ರೆಸ್ಸ (ಒಬ್ಬರು ಪರಿಶಿಷ್ಟ ಜಾತಿ ಮತ್ತೊಬ್ಬರು ಪರಿಶಿಷ್ಟ ಪಂಗಡ) ಇಲ್ಲಿ ಕುರುಬರು ನಿರ್ಣಾಯಕ ಸ್ಥಾನದಲ್ಲಿದ್ದರೂ ಅವರು ಲಿಂಗಾಯತರ ಜೊತೆ, ಬಿಜೆಪಿಯಲ್ಲಿ ಸ್ಪರ್ದಿಸಲು ಆಗದೇ ಇರುವುದರಿಂದ ಯಾವಾಗಲೂ ಹಿಂದೂಳಿದವರು ಹೆಚ್ಚು ಗೆಲ್ಲುತ್ತಿದ್ದ ಕೊಪ್ಪಳ ಕ್ಷೇತ್ರ ಕೂಡಾ ಲಿಂಗಾಯತರ ಪಾಲಾಯಿತು. ಆದರೂ ಎಸ್ ಸಿ, ಎಸ್ ಟಿ ಗೆ ಮೂರು ಸ್ಥಾನಗಳು ಮೀಸಲಿರುವುದರಿಂದ ಅಲ್ಲಿ ಈ ವರ್ಗಗಳಿಗೆ ಅವಕಾಶ ಸಿಗುತ್ತಿದೆ. ಇಲ್ಲದಿದ್ದರೆ ಅದೂ ಇಲ್ಲ. ಇನ್ನೂ ಕರಾವಳಿ ಪ್ರದೇಶ ಮತು ಮಲೆನಾಡು ಕ್ಷೇತ್ರಗಳಲ್ಲಿ ನಾಲ್ಕು ಲೋಕ ಸಭಾ ಸ್ಥಾನಗಳು ಬಿಜೆಪಿಗೆ ದಕ್ಕಿವೆ. ಇವರಲ್ಲಿ ಒಬ್ಬರು ಬ್ರಾಹ್ಮಣರು, ಒಬ್ಬರು ಲಿಂಗಾಯತರು, ಒಬ್ಬರು ಗೌಡ ಮತ್ತೊಬ್ಬ ಬಂಟರು ಗೆದ್ದಿದ್ದಾರೆ. ನಾಲ್ಕು ಲೋಕ ಸಭಾ ಸ್ಥಾನಗಳಲ್ಲಿ 32 ವಿಧಾನ ಸಭೆ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ಕರಾವಳಿಗೆ ಸೀಮಿತವಾಗಿರುವುದು 20 ಮಾತ್ರ. ಉಳಿದ ಎರಡು ಸ್ಥಾನಗಳು ಮುಂಬಯಿ ಕರ್ನಾಟಕಕ್ಕೆ ಸೇರಿದರೆ ಉಡುಪಿಗೆ ಸೇರಿದ ಲೋಕ ಸಭಾ ಕ್ಷೇತ್ರದಲ್ಲಿ ಎರಡು ಸ್ಥಾನಗಳು ಚಿಕ್ಕ ಮಗಳೂರ ಜಿಲ್ಲೆಯಲ್ಲಿ, ಮತ್ತು ಶಿವಮೊಗ್ಗಾ ಜಿಲ್ಲೆಯ ಮಲೆನಾಡು ಕ್ಷೇತ್ರಕ್ಕೆ 8 ಸ್ಥಾನಗಳು, ಇಲ್ಲಿ ಬಿಲ್ಲವರು, ಈಡೀಗರು ಬಂಟರು, ಲಿಂಗಾಯತರು, ದಲಿತರು, ಒಕ್ಕಲಿಗರು, ಕುರುಬರು, ಉಪ್ಪಾರರು, ಮಡಿವಾಳರು, ಮುಸ್ಲಿಂರು ಹೀಗೇ ಇಲ್ಲಿ ಎಲ್ಲ ಜಾತಿಗಳ ಜನರು ಇದ್ದಾರೆ. ಯಾವಾಗಲು ಇಬ್ಬರು ಈಡಿಗರು ಒಬ್ಬರು ಕ್ರಿಶ್ಚಿಯನ್ ಒಮ್ಮೊಮ್ಮೆ ಲಿಂಗಾಯತರು, ಇತರರು ಗೆಲ್ಲುವ ಸ್ಥಾನದಲ್ಲಿ ಬಿಜೇಪಿ ಗೆಲ್ಲುವ ಹಂತ ಬಂದ ಮೇಲೆ ಹಿಂದೂಳಿದವರು ಸೋತು ಬರಿ ಮುಂದುವರಿದವರೇ ಬಿಜೇಪಿಯಿಂದ ಗೆಲ್ಲುವಂತಾಗಿರುವುದು. ಬಿಜೆಪಿ ಮುಂದುವರೆದವರಿಗೆ ಮಾತ್ರವೆಂದು ಭಾವನೆ ಮೂಡಿ ಬರಲು ಸಾಧ್ಯವಾಗಿದೆ. ಇದನ್ನು ಹೋಗಲಾಡಿಸಲು ಬಿಜೆಪಿ ಪ್ರಯತ್ನ ಮಾಡಬೇಕಾದರೆ ಕೆಳಕಂಡ ಅಂಶಗಳ ಕಡೆಗೆ ಗಮನ ಹರಿಸಬೇಕು ಇನ್ನೂ ಕರಾವಳಿ ಪ್ರದೇಶ ಮತ್ತು ಮಲೆನಾಡು ಕ್ಷೇತ್ರಗಳಲ್ಲಿನ ನಾಲ್ಕು ಲೋಕ ಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.
ದಕ್ಷಿಣ ಕರ್ನಾಟಕ 13 ಸ್ಥಾನಗಳು:- ಒಕ್ಕಲಿಗರು (ಎರಡು ಕಾಂಗ್ರೆಸ್,ಎರಡು ಜೆಡಿಎಸ್,ಎರಡು ಬಿಜೆಪಿ ಒಟ್ಟು -06. ದಲಿತರು (ಎರಡು ಎಡ-ಒಂದು ಬಲ,ಎಲ್ಲಾ ಕಾಂಗ್ರೆಸ್ಸ ಒಟ್ಟು- 03. ಹಿಂದುಳಿದವರು( ಒಂದು ದೇವಾಡಿಗ – ಕಾಂಗ್ರೆಸ್ಸ, ಒಂದು ಬಲಿಜ -ಬಿಜೆಪಿ) ಒಟ್ಟು -02. ಲಿಂಗಾಯತರು ಬಿಜೆಪಿ -01. ಬ್ರಾಹ್ಮಣರು ಬಿಜೆಪಿ -ಒಟ್ಟು -01. ದಕ್ಷಿಣ ಕರ್ನಾಟಕ ಒಟ್ಟು ಜಾತಿವಾರು ಎಲ್ಲ ಕೂಡಿ -13
ಮುಂಬಯಿ ಕರ್ನಾಟಕ (06 ಸ್ಥಾನಗಳು) ಲಿಂಗಾಯತರು ಮೂರು ಬಿಜೆಪಿ, ಒಂದು ಕಾಂಗ್ರೆಸ್ಸ ಒಟ್ಟು -04. ಬ್ರಾಹ್ಮಣ (ಒಂದು ಬಿಜೆಪಿ) ಒಟ್ಟು -01. ದಲಿತರು (ಬಿಜೆಪಿ) ಒಟ್ಟು 01.
ಹೈದ್ರಾಬಾದ ಕರ್ನಾಟಕ:- (5 ಸ್ಥಾನಗಳು) ಇದರಲ್ಲಿ ವಾಲ್ಮೀಕಿ ಎಸ್ ಟಿ ( ಒಂದು ಕಾಂಗ್ರೆಸ್ಸ ಒಂದು ಬಿಜೆಪಿ) ಒಟ್ಟು -02. ಎಸ್ ಸಿ (ಒಂದು ಕಾಂಗ್ರೆಸ್ಸ) ಒಟ್ಟು -01. ಲಿಂಗಾಯತರು ( ಎರಡು ಬಿಜೆಪಿ) ಒಟ್ಟು -02.
ಕರಾವಳಿ ನಾಲ್ಕು ಸ್ಥಾನಗಳು :- ಗೌಡ- ಬಂಟ್ (ಬಿಜೆಪಿ) ಒಟ್ಟು -02. ಲಿಂಗಾಯತರು (ಬಿಜೆಪಿ)ಒಟ್ಟು-01. ಬ್ರಾಹ್ಮಣ (ಬಿಜೆಪಿ) -01
28 ಲೋಕ ಸಭಾ ಸ್ಥಾನಗಳ ಜಾತಿವಾರು ಹಂಚಿಕೆ :- ಲಿಂಗಾಯತರು-08. ಒಕ್ಕಲಿಗರು-05. ಗೌಡ ( ಮಂಗಳೂರು) -02. ಬಂಟ್ 01. ಪರಿಶಿಷ್ಟ ಜಾತಿ -05. (ಎಡಗೈ-03 ಬಲಗೈ -02). ಪರಿಶಿಷ್ಟ ಪಂಗಡ-2 .( ವಾಲ್ಮಿಕಿ) ಹಿಂದೂಳಿದವರು -02. ( ದೇವಾಡಿಗ,ಬಲಿಜ). ಬ್ರಾಹ್ಮಣರು -03. ಒಟ್ಟು -28 ಲೋಕ ಸಭಾ ಸ್ಥಾನಗಳು.
ಲಿಂಗಾಯತರು, ಒಕ್ಕಲಿಗರು ಸೇರಿ ಒಟ್ಟು 16 ಸ್ಥಾನಗಳನ್ನು ಪಡೆದಿದ್ದಾರೆ ., ಬ್ರಾಹ್ಮಣರು ಮೂರು ಸ್ಥಾನಗಳು ಒಟ್ಟು 19 ಸ್ಥಾನಗಳನ್ನು ಪಡೆದರೆ ದಲಿತರು ಹಿಂದೂಳಿದ ಜನಾಂಗಗಳು 9 ಸ್ಥಾನಗಳನ್ನು ಗಳಿಸಿವೆ. ಹಾಗೆ ನೋಡಿದರೆ ಜನ ಸಂಖ್ಯೆಯಲ್ಲಿ ದಲಿತರು, ಹಿಂದುಳಿದವರು ಅಲ್ಪ ಸಂಖ್ಯಾತರು, ತಮ್ಮ ಜನ ಸಂಖ್ಯೆಗೆ ತಕ್ಕಂತೆ 17 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ದಲಿತರು ಮತ್ತು ಹಿಂದುಳಿದವರು ಗೆದ್ದ 9 ಸ್ಥಾನಗಳಲ್ಲಿ 06 ಕಾಂಗ್ರೆಸ್ಸಿನಿಂದ ಮತ್ತು ಮೂರು ಬಿಜೆಪಿಯಿಂದ ಮಾತ್ರ ಗೆಲ್ಲಲು ಸಾದ್ಯವಾಗಿದೆ.( ಅದರಲ್ಲಿ ಒಂದು ಪರಿಶಿಷ್ಟ ಜಾತಿ ಮೀಸಲಾತಿ. ಪರಿಶಿಷ್ಟ ಪಂಗಡದಲ್ಲಿ ಒಂದು. ಹಿಂದೂಳಿದವರು ಒಂದು) ಲೋಕ ಸಭಾ ಸ್ಥಾನಗಳು : ಬಿಜೆಪಿ 17. ಕಾಂಗ್ರೆಸ್ಸ _09. ದಳ ಎಸ್ -02. ಬಿಜೆಪಿ ಗೆದ್ದ 17 ಸ್ಥಾನಗಳಲ್ಲಿ ಒಂದು ದಲಿತ, ಒಂದು ಹಿಂದುಳಿದ ವರ್ಗಕ್ಕೆ ಮಾತ್ರ ದಕ್ಕಿದೆ. ಉಳಿದ 17 ಸ್ಥಾನಗಳು ಮೇಲ್ವರ್ಗಕ್ಕೆ ಸೇರಿದ ಜನಾಂಗಗಳಿಗೆ ದಕ್ಕಿವೆ. ಬಿಜೆಪಿ ಗೆದ್ದ ಉಳಿದೆರಡು ಸ್ಥಾನಗಳು ಒಂದು ದಲಿತರಿಗೆ ಮೀಸಲಿದ್ದುದರಿಂದ ,ಇನ್ನೊಂದು ಕಾಸ್ಮೋಪಾಲಿಟಿನ ಸಿಟಿ ಆದ್ದರಿಂದ ಇಲ್ಲಿ ಜಾತಿಗಳು ಗಣÀನೆಗೆ ಬರುವುದಿಲ್ಲ. ದಳ ಎಸ್ 02 ಗೆದ್ದಿದೆ. ಅವೆರಡೂ ಒಕ್ಕಲಿಗ ಜನಾಂಗಕ್ಕೆ ದಕ್ಕಿವೆ. ಯಾವಾಗಲೂ ಕುರುಬರು ಎರಡು ಸ್ಥಾನಗಳನ್ನು ಗೆಲ್ಲುತ್ತಿದ್ದರು ಇವರೂ ಕೂಡಾ ಈಗ ವಂಚಿತರಾಗುತ್ತಿದ್ದಾರೆ. ಕುರುಬರು ಈಡಿಗರು, ಅಲ್ಪ ಸಂಖ್ಯಾತ ಮುಸ್ಲೀಂ ಯಾವಾಗಲೂ ಎರೆಡೆರಡು ಸ್ಥಾನಗಳನ್ನು ಗೆಲ್ಲುತ್ತಿದ್ದರು. ಈಗ ಈ ಸ್ಥಾನಗಳ ಜೊತೆಗೆ ಇನ್ನರಡು ಹೆಚ್ಚು ಸ್ಥಾನಗಳನ್ನು ಮೇಲ್ವರ್ಗದವರು ಗೆದ್ದಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ, ಬಿಜೆಪಿ ಬರೀ ಲಿಂಗಾಯತರ ಹಾಗೂ ಮೇಲ್ವರ್ಗದವರ ಪಕ್ಷವೆಂದು ಎನ್ನುವ ಪ್ರತೀತಿಯಿಂದ ಕಾಂಗ್ರೆಸ್ ದಲಿತ ಹಿಂದುಳಿದವರ ಪರವಾದ ಪಕ್ಷ ಎನ್ನುವ ಭ್ರಮೆಗಳಿಂದ ಹೊರಬರಬೇಕಾದರೆ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಇರುವ ದಲಿತ ಹಿಂದುಳಿದ ಅಲ್ಪ ಸಂಖ್ಯಾತರನ್ನು ಸಂಘಟಿಸಿ, ಜಾಗೃತಿ ಮೂಡಿಸುವ ಕೆಲಸ ಅತಿ ಶೀಘ್ರದಲ್ಲಿ ಮಾಡುವ ಪಕ್ಷಗಳ ವ್ಯಕ್ತಿಗಳ ಕಡೆ ಹೋಲುವ ಸಂಭವವಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ದಲಿತರ ನಂತರ , ಅತಿ ಹೆಚ್ಚು ಕ್ಷೇತ್ರಗಳಲ್ಲಿರುವ ಕುರುಬರನ್ನು ಓಲೈಸಲೂ ಎಲ್ಲಾ ಪಕ್ಷಗಳು ತೆರೆಮರೆಯಲ್ಲಿ ಬಹಿರಂಗವಾಗಿ ಪ್ರಯತ್ನಿಸುವ ಹುನ್ನಾರ ಸಾಗಿದೆ. ದಲಿತರಲ್ಲಿ ಮಾದಿಗರು, ಲಂಬಾಣಿಗರು ಜೊತೆಯಲ್ಲಿ ಕುರುಬರು, ಲಿಂಗಾಯತರ ಜೊತೆ ಅಥವಾ ಒಕ್ಕಲಿಗರ ಜೊತೆ ಸೇರಿದರೆ ಆ ಪಕ್ಷವು ಬಹುಮತವನ್ನು ಪಡೆಯಬಹುದು ಪಡೆಯಬಹುದೆಂದು ಪರಿಣಿತರು ಅಂದಾಜು ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಯಾವ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೊ ಆ ಪಕ್ಷವು ಅಧಿಕಾರದ ಮುಂದೆ ಇರುತ್ತದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು , ಕುರುಬರು, ದಲಿತರಲ್ಲಿ ಮಾದಿಗರೂ ಲಂಬಾಣಿಗರು, ವಾಲ್ಮಿಕಿ, ಬೆಸ್ತರು, ಸೇರಿದಂತೆ ನಿರ್ಣಾಯಕ ಸ್ಥಾನದಲ್ಲಿ ನಿಲ್ಲುತ್ತಾರೆ. ಮುಂದಿನ ಚುನಾವಣೆಯಲ್ಲಿ ಕುರುಬರು ಅತ್ಯಂತ ನಿರ್ಣಾಯಕ ಸ್ಥಾನದಲ್ಲಿ ನಿಲ್ಲುತ್ತಾರೆಂದು ರಾಜಕೀಯ ಪಂಡಿತರು ಭವಿಷ್ಯ ಹೇಳುತ್ತಿದ್ದಾರೆ.
ಅಹಿಂದ ಸಂಘಟನೆ ಮಾಡಿ ತಮ್ಮ ಜನಾಂಗದವರನ್ನು ಮುಖ್ಯ ಮಂತ್ರಿ ಮಾಡಲು ಯೋಜನೆ. ಯೋಚನೆ ಮಾಡಿ ಶ್ರಮಿಸಿದವರೆಲ್ಲರೂ ಈಗೀರುವ ತಮ್ಮ ಜನಾಂಗದ ಮುಖ್ಯ ಮಂತ್ರಿಯಿಂದ ಬ್ರಮ ನಿರಶನ ರಾಗಿರುವದನ್ನು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತಿ ಕುರುಬರೇ ಜಾಸ್ತಿ ಇರುವ ಕಡೆ ಸೋತಿರುವುದು ಇದನ್ನು ಸಾಬೀತು ಪಡಿಸುತ್ತದೆ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಸಂಗೋಳ್ಳಿ ರಾಯಣ್ಣ ಬ್ರಿಗೇಡ ಜನಸ್ತೋಮವೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ತೊರೆಯಲು ಒಂದು ಪರ್ಯಾಯ ದಾರಿಯನ್ನು ಕುರುಬರಾದಿಯಾಗಿ ಅಹಿಂದ ವರ್ಗ ಹುಡುಕಾಡುತ್ತಿದೆ. ಸದ್ಯಕ್ಕೆ ಬಿಜೆಪಿಯನ್ನು ಬೆಂಬಲಿಸಬಹುದೇ? ಬೇಡವೇ ? ಎನ್ನುವ ಚರ್ಚೆಯನ್ನು ಅಹಿಂದ್ ವರ್ಗ ಹುಟ್ಟು ಹಾಕಿದೆ. ಹಿಂದುಳಿದ ವರ್ಗದ ಪ್ರದಾನ ಮಂತ್ರಿಯ ನೆರಳಿನಲ್ಲಿ ಇದೇ ನೆಪದಲ್ಲಿ ಬಿಜೇಪಿಗೆ ಹೋಗಬಾರದೇಕೆ ? ಎಂದು ಚೀಂತಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಿಜೇಪಿಯಲ್ಲಿಯೇ ಕೆಲವೊಂದು ಸ್ವಹಿತಾಶಕ್ತಿಗಳು ಬ್ರಿಗೇಡಗೇ ಬ್ರೇಕ್ ಹಾಕಲು ಹೊರಟಿರುವುದನ್ನು ಅಹಿಂದ್ ನಾಯಕರಲ್ಲಿ ಅಸಮಾಧಾನದ ಹೊಗೆ ಸ್ಪೋಟಗೋಳ್ಳುವ ಹಂತ ತಲುಪಿದೆ. ಯಾರಾದರೂ ಸಮರ್ಥ ಮದ್ಯಸ್ಥಿಕೆ ವಹಿಸುವವರು ಸರಿಯಾದ ದಾರಿ ದಿಕ್ಕು ತೋರಿಸಿಯಾರೆಂದು ಆಶಾಭಾÀವನೆಯಿಂದ ಮತದಾರರನ್ನು ಕಾರ್ಯಕರ್ತರನ್ನು ಒಂದೆಡೆ ಹಿಡಿದಿಟ್ಟಿದ್ದಾರೆ. ಪ್ರವಾಹವನ್ನು ತಡೆ ಹಿಡಿದು ನಿಲ್ಲಿಸಿದ್ದಾರೆ. ಯಾವ ದಿಕ್ಕಿಗೆ – ಯಾವ ಪಕ್ಷಕ್ಕೆ ಈ ಪ್ರವಾಹ ಹರಿಯುತ್ತದೋ ? ಕಾದು ನೋಡಬೇಕಾಗಿದೆ. ಹೆಚ್ಚು ಕುರುಬರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬುದರ ಮೇಲೆ ಫಲಿತಾಂಶದ ತಕ್ಕಡಿ ಆಕಡೆ ವಾಲುತ್ತದೆಂದು ಎಲ್ಲರೂ ಹೇಳುತ್ತಾರೆ. – ಸಿದ್ದು ತೇಜಿ ರೈತ ಹೋರಾಟಗಾರರು ಹಾಗೂ ಅದ್ಯಕ್ಷರು ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮಿತಿ ಹುಬ್ಬಳ್ಳಿ.

loading...