ಕೃಷಿ ಕೂಲಿಕಾರ್ಮಿಕರ ದುಡಿಮೆಗೆ ಸರಕಾರ ನೀಡುತ್ತಿಲ್ಲ ಬೆಲೆ

0
27
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ದಿನವಿಡೀ ಮಣ್ಣು ಯಂತ್ರಗಳ ಜೊತೆ ದುಡಿಯುವ ಕೃಷಿ ಕೂಲಿಕಾರ್ಮಿಕರ ದುಡಿಮೆಗೆ ಸರಕಾರ ಮೂರು ಕಾಸಿನ ಬೆಲೆ ನೀಡುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ರಾಜ್ಯ ಕಾರ್ಯದರ್ಶಿ ಹೋರಾಟಗಾರ್ತಿ ಯಮುನಾ ಗಾಂವಕರ ಹೇಳಿದರು.
ಇಲ್ಲಿಯ ನಗರಸಭಾ ಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾ ಸಮಿತಿಯ 3ನೇ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಕಾನೂನು ಬದ್ದವಾಗಿ ಕೃಷಿ ಕೂಲಿಕಾರ್ಮಿಕರಿಗೆ 18 ಸಾವಿರ ಸಂಬಳ ನೀಡಬೇಕು. ರಾಜ್ಯ ಸರ್ಕಾರ ಕಾಯ್ದೆ ಉಲ್ಲಂಘಿಸಿ 10.500 ನೀಡುವುದಾಗಿ ನೋಟಿಪಿಕೇಷನ್ ಮಾಡಿತ್ತು. ಅದು ಕೂಡ ಇದುವರೆಗೂ ಜಾರಿ ಮಾಡದೆ ಕೃಷಿ ಕೂಲಿಕಾರ್ಮಿಕರ ಮೇಲಿರುವ ಅಸಡ್ಡೆಯನ್ನು ತೋರ್ಪಡಿಸಿದೆ ಎಂದು ಹೇಳಿದರು. ಚಿಕ್ಕ ಪುಟ್ಟ ಪರಿಹಾರಕ್ಕಾಗಿ ಕಾಗದ ಪತ್ರಗಳನ್ನು ಹಿಡಿದುಕೊಂಡು ತಿಂಗಳುಗಟ್ಟಲೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈತನ ಬೆಳೆ ಹಾನಿಯಾದರೆ ಪರಿಹಾರ ಸಿಗುತ್ತಿಲ್ಲ. ಇದರಿಂದ ಅಭದ್ರಗೊಳ್ಳುವ ರೈತ ಕೃಷಿ ಕೂಲಿಕಾರರಿಗೆ ಕೆಲಸ ನೀಡಲ್ಲ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಬೆಳೆ ಖರೀದಿಸುವವರಿಲ. ದೇಶದ ಬೆನ್ನೆಲುಬು ಎನಿಸಿಕೊಂಡ ರೈತನ ಸಾಕಿ ಪೋಷಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಅದೇ ರೈತನ ಬೆನ್ನೆಲುಬಾದ ಕೃಷಿ ಕೂಲಿಕಾರರ ಬದುಕಿನ ಜೀವನ ಮಟ್ಟ ಸುದಾರಿಸುವ ಕೆಲಸ ಕೂಡ ನಡೆಯುತ್ತಿಲ್ಲ. ಹಾಗಾಗಿ ಸರ್ಕಾರದ ಈ ನೀತಿಯನ್ನು ಬದಲಿಸಬೇಕಾದರೆ ಎಲ್ಲ ಕೃಷಿ ಕೂಲಿ ಕಾರ್ಮಿಕರು ಬಲವಾದ ಚಳುವಳಿಗೆ ಸಿದ್ದರಾಗಬೇಕಿದೆ ಎಂದ ಅವರು, ಡಿ. 19 ರಿಂದ 21 ರವರೆಗೆ ಕುಂದಾಪುರದಲ್ಲಿ ನಡೆಯಲಿರುವ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಸಂಯೋಜಿಸಿರುವ ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ 6 ನೇ ರಾಜ್ಯ ಸಮ್ಮೆಳನಕ್ಕೆ ಆಗಮಿಸುವಂತೆ ಕರೆ ನೀಡಿದರು.
ಜಿಲ್ಲಾಧ್ಯಕ್ಷ ಶಾಂತರಾಮ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಕೃಷಿ ಕೂಲಿಕಾರ, ರೈತ, ಬಡವ ಹಾಗೂ ಮದ್ಯಮ ವರ್ಗದವರ ಅಭದ್ರತೆಗೆ ತಳ್ಳುತ್ತಿದೆ. ಸರ್ಕಾರದ ಯಾವುದೇ ಅಂಶಗಳು ಬಡವರ ಪರವಾಗಿಲ್ಲ ಎಂದು ಆರೋಪಿಸಿದರು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಿಲ್ಲ. ಕೂಲಿಕಾರರಿಗೆ ಕೆಲಸ ಸಿಗುತ್ತಿಲ್ಲ. ದುಡಿದ ಹಣ ದೊರಕುತ್ತಿಲ್ಲ. ನೋಟ್ ಬ್ಯಾನ್ ನಿಂದ ರೈತಾಪಿ ಜನ ಕೃಷಿ ಕೂಲಿಕಾರ್ಮಿಕ ದುಡಿಯುವ ಕೈಗಳಿಗೆ ಮಾರಕವಾಗಿ ಪರಿಣಮಿಸಿದೆ. ನಮ್ಮ ಹಣ ನಮಗೆ ಸಿಗದ ಪರಿಸ್ಥಿತಿ ಬಂದೊದಗಿದೆ. ಬಡವರ ಗ್ರಾಮೀಣ ಭಾಗದ ಜೀವನಾಡಿಗಳಾಗಿ ಕೆಲಸ ಮಾಡುತ್ತಿದ್ದ ಸಹಕಾರಿ ಸಂಸ್ಥೆಗಳು ನಿಷ್ಕøಯಗೊಂಡಿದ್ದು, ರೈತರಿಗೆ ತೊಂದರೆಯಾಗಿದೆ. ನಗದುರಹಿತ ವ್ಯವಹಾರ ಜಾರಿಗೆ ಬರುತ್ತಿರುವುದು ಬಡವರ ವಿರೋದಿಯಾಗಿ ಅಗರ್ಭ ಶ್ರೀಮಂತರ ಪರವಾಗಿದೆ. ನೋಟ್ ಬ್ಯಾನ್ ನಿಂದಾಗಿ ಕೃಷಿ ಕೂಲಿಕಾರ್ಮಿಕರಿಗೆ ಆದ ಅನಾನುಕೂಲತೆಯನ್ನು ಸರಿಪಡಿಸಿಕೊಳ್ಳವ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಜನಸಾಮಾನ್ಯರ ಬದುಕು ದುಸ್ತರವಾಗಲಿದೆ ಎಂದರು.
ಈ ವೇಳೆಯಲ್ಲಿ ತಾಲೂಕಾಧ್ಯಕ್ಷ ಬೀಮಣ್ಣ ಬೋವಿ, ಬಸವರಾಜ ಧಾರವಾಡ, ರವಿ ಭೋವಿ, ಪ್ರಸನ್ನ ಭೋವಿ, ಭೂತೇಶ ಚಿತ್ರಗಾರ, ಕೋಟೇಶ ಕೊಳಗಿ, ಲಕ್ಷ್ಮವ್ವ ಕಲಾಲ ಮುಂತಾದವರು ಉಪಸ್ಥಿತರಿದ್ದರು. ಬೀಮಣ್ಣ ಬೋವಿ ಸ್ವಾಗತಿಸಿ ವಂದಿಸಿದರು.

loading...