ಕೇಕ್‌ ಪಾಪ್ಸ್‌

0
33
loading...

ಲಾಲಿಪಾಪ್‌ ಎಂದರೆ ಎಲ್ಲಾ ಮಕ್ಕಳಿಗೆ ಬಹಳ ಇಷ್ಟ. ಚಾಕೊಲೆಟ್‌ ಲಾಲಿಪಾಪ್‌ ಬದಲಿಗೆ ಇನ್ನೂ ಡಿಪರೆಂಟ್‌ ಪದಾರ್ಥಗಳಿಂದ ತಂುÀುಾರಿಸಿದ ಲಾಲಿಪಾಪ್‌ಅನ್ನು ಮಕ್ಕಳಿಗೆ ನೀಡಿದರೆ ಅವರೂ ಖುಷಿಯಿಂದ ತಿನ್ನುತ್ತಾರೆ. ಇಂದು ಚಿಲ್ಡ್ರನ್‌ ಡೇ. ಈ ವಿಶೇಷ ದಿನದಂದು ನಿಮ್ಮ ಮಕ್ಕಳಿಗೆ ಕೊಡಲು ಈ ವಿಶೇಷ ರೆಸಿಪಿ ಟ್ರೈ ಮಾಡಿ.
ಸಾಮಗ್ರಿಗಳು
ಮಾರ್ಬಲ್ ಕೇಕ್‌ ಫೌಡರ್‌ – 1 ಕಪ್‌
ಚಾಕೊಲೆಟ್ ಕೇಕ್‌ ಫೌಡರ್‌ – 1 ಕಪ್‌
ಡಾರ್ಕ ಚಾಕೊಲೆಟ್‌ – 1 ಕಪ್‌
ವೈಟ್ ಚಾಕೊಲೆಟ್ – 1 ಕಪ್‌
ಮಿಕ್ಸ್‌ ನಟ್ಸ – 1/2 ಕಪ್‌
ತೆಂಗಿನ ತುರಿ – 1 ಕಪ್‌
ಕಲರ್‌ ಸ್ಪ್ರಿಂಕಲ್ಸ – 1 ಕಪ್‌
ಪೆಪ್ಪರ್‌ಮೆಂಟ್‌ ಪೇಕ್ಸ್‌ – 1/2 ಕಪ್‌
ಲಾಲಿಪಾಪ್‌ ಸ್ಟಿಕ್‌ – 10
ಮಾಡುವ ವಿಧಾನ
ಡಾರ್ಕ ಚಾಕೊಲೆಟ್‌ ಮತ್ತು ವೈಟ್‌ ಚಾಕೊಲೆಟಅನ್ನು ಬೇರೆಬೇರೆಂುÀುಾಗಿ ಡಬಲ್ ಬಾಯ್ಲ್‌ ಮಾಡಿಕೊಂಡು ಕರಗಿಸಿಕೊಳ್ಳಿ.
ಬೌಲ್ನಲ್ಲಿ ಮಾರ್ಬಲ್ ಕೇಕ್‌ , ಚಾಕೊಲೆಟ್ ಕೇಕ್‌ಅನ್ನು ಪುಡಿ ಮಾಡಿಕೊಂಡು ಅದರೊಂದಿಗೆ ಸ್ವಲ್ಪ ತೆಂಗಿನ ತುರಿ, ಮೆಲ್ಟ ಮಾಡಿದ ಡಾರ್ಕ ಚಾಕೊಲೆಟ್ಅನ್ನು ಸ್ವಲ್ಪ ಮಿಕ್ಸ್‌ ಮಾಡಿ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಉಳಿದ ಮಾರ್ಬಲ್ ಕೇಕ್‌, ಚಾಕೊಲೆಟ್‌ ಕೇಕ್‌ , ತೆಂಗಿನ ತುರಿಗೆ ಮೆಲ್ಟ ಮಾಡಿದ ವೈಟ್‌ ಚಾಕೊಲೆಟ್‌ಅನ್ನು ಮಿಕ್ಸ್‌ ಮಾಡಿ ಅದನ್ನೂ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಟ್ರೇ ಮೇಲೆ ಪಾಚ್ರ್ಮೆಂಟ್ ಪೇಪರ್‌ ಇಟ್ಟು ಉಂಡೆ ಮಾಡಿದ ಕೇಕ್‌ಬಾಲ್ಸ ಜೋಡಿಸಿ ಪ್ರೀಜರ್‌ನಲ್ಲಿ ಅರ್ಧ ಗಂಟೆೆ ಸೆಟ್ ಆಗಲು ಇಡಿ.
ಅರ್ಧ ಗಂಟೆೆ ನಂತರ ಕೇಕ್‌ ಬಾಲ್ಗಳನ್ನು ಹೊರತೆಗೆದು ಲಾಲಿಪಾಪ್‌ ಸ್ಟಿಕ್‌ಅನ್ನು ನಿಧಾನವಾಗಿ ಕೇಕ್‌ಬಾಲ್ಗೆ ಚುಚ್ಚಿ.
ಈ ಲಾಲ್ಪಾಪ್‌ಅನ್ನು ಮೆಲ್ಟ ಮಾಡಿದ ಡಾರ್ಕ ಚಾಕೊಲೆಟ್, ಮಿಕ್ಸ್‌ ನಟ್ಸನಲ್ಲಿ ಡಿಪ್‌ ಮಾಡಿ ನಂತರ ಕಲರ್‌ ಸ್ಪ್ರಿಂಕಲ್ಸ ಮೇಲೆ ಹೊರಳಿಸಿ .
ಇನ್ನೊಂದು ಲಾಲ್ಪಾಪ್‌ಅನ್ನು ವೈಟ್‌ ಚಾಕೊಲೆಟ್, ಮಿಕ್ಸ್‌ ನಟ್ಸನಲ್ಲಿ ಡಿಪ್‌ ಮಾಡಿ ನಂತರ ಪೆಪ್ಪರ್‌ಮೆಂಟ್ ಪೇಕ್ಸ್‌ನಲ್ಲಿ ಹೊರಳಿಸಿ.
ಇದೇ ರೀತಿ ಎಲ್ಲಾ ಕೇಕ್‌ ಬಾಲ್ಸ ಅನ್ನು ಡೆಕೊರೇಟ್‌ ಮಾಡಿ ಮಕ್ಕಳಿಗೆ ಕೊಡಿ.

loading...

LEAVE A REPLY

Please enter your comment!
Please enter your name here