ಗಾಂಜಾ ಮಾರಾಟ: ಓರ್ವ ಮಹಿಳೆ ಬಂದನ

0
8
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಗಾಂಜಾ ಮಾರಾಟದಲ್ಲಿ ತೋಡಗಿದ್ದ ಓರ್ವ ಮಹಿಳೆಯನ್ನು ಸಿಐಡಿ ಪೊಲೀಸರು ಬಂಧಿಸಿ ರೂ. 14 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಗುರುವಾರ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಬಸ್‌ ನಿಲ್ದಾಣದಲ್ಲಿ ನಡೆಸಿದೆ. ಬಂಧಿತ ಮಹಿಳೆಯನ್ನು ರತ್ನವ್ವ ಸೋಮಯ್ಯ ಕುಲಕರ್ಣಿ (55) ಎಂದು ಗುರುತಿಸಲಾಗಿದೆ.
ಆರೋಪಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸ ಇನ್ಸಪೆಕ್ಟರ ಎನ್‌.ವಿ.ಬರಮನಿ ನೇತೃತ್ವದ ಸಿಐಡಿ ತಂಡ ಕಾರ್ಯ ಪ್ರವೃತ್ತರಾಗಿ ವಣ್ಣೂರು ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಗಾಂಜಾ ಮಾರಾಟ ಮಾಡುವ ವೇಳೆ ಬಂಧಿಸಿ ರೂ. 14.700 ಮೌಲ್ಯದ 1470 ಗ್ರಾಂ. ಗಾಂಜಾ ಹಾಗೂ ರೂ. 70 ನಗದು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಐಡಿ ಎನ್‌ಡಿಸಿ ಘಟಕ ಸಿಬ್ಬಂದಿಗಳಾದ ಬಿ.ಎನ್‌.ಹಿರೇಮಠ್‌, ಬಿ.ಎನ್‌.ಮೋದಗಿ, ಆರ್‌.ಬಿ.ಗಡವೀರ, ಜಿ.ಆರ್‌.ಶಿರಸಂಗಿ, ಮತ್ತು ಜೆ.ಎಂ.ಬಾಗನವರ ಮತ್ತು ನೇಸರಗಿ ಪೊಲೀಸ್‌ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು. ಈ ಪ್ರಕರಣ ನೇಸರಗಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here