ಗಾದೆ ಮಾತುಗಳು ಕನ್ನಡದ ದೊಡ್ಡ ನಿಘಂಟು

0
108
loading...

ಕನ್ನಡಮ್ಮ ಸುದ್ದಿ-ಧಾರವಾಡ : ಕಥೆಗಳು ಓದುಗನನ್ನು ಭಾವನಾ ಲೋಕಕ್ಕೆ ತೆಗೆದುಕೊಂಡು ಹೋಗುತ್ತಾ ಬದುಕಿನೊಳಗೆ ಚೈತನ್ಯ ತಂದು ಕೊಡುತ್ತವೆ ಓದುವ ಹವ್ಯಾಸ ರೂಢಿಸಿಕೊಂಡವರು ಸದಾ ಹಸನ್ಮುಖಿ ಮತ್ತು ಸಮಾಜ ಮುಖಿಯಾಗಿ ಇರುತ್ತಾರೆ ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಧಿಕಾರಿ ಅನಿಲ ದೇಸಾಯಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ.ಆನಂದ ಚಿಗಟೇರಿ ದತ್ತಿ ಅಂಗವಾಗಿ ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಗಾದೆ ಮಾತುಗಳು ಕನ್ನಡದ ಬಹುದೊಡ್ಡ ನಿಘಂಟು ಇದ್ದಂತೆ. ಹಿಂದಿನ ಹಿರಿಯರ ಕಟು ಅನುಭವಗಳ ಸತ್ಯದ ಮಾತುಗಳೇ ಗಾದೆಗಳಾಗಿ ರೂಪಗೊಂಡವು. ಕನ್ನಡ ಭಾಷೆಯನ್ನು ಶ್ರೀಮಂತವಾಗಿಡುವಲ್ಲಿ ನುಡಿಗಟ್ಟುಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಜಗುಚಂದ್ರ, ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರೇ ಹೆಚ್ಚು ಓದುಗರಾಗಿದ್ದು ವಾರ ಪತ್ರಿಕೆಗಳು ನಡೆಯುವಲ್ಲಿ ಅವರ ಕೊಡುಗೆ ದೊಡ್ಡದು. ಕಥೆಗಳು ಸಮಾಜದ ದಿಕ್ಕನ್ನು ತೋರಿಸುತ್ತವೆ ಅವುಗಳನ್ನು ಓದುವುದರಿಂದ ನಮ್ಮ ಅರಿವಿನ ವಿಸ್ತಾರ ಹೆಚ್ಚಾಗುತ್ತದೆ ಎಂದರು. ಡಾ.ಶಾರದಾ, ನಿರ್ಮಲಾ ಹಾಗೂ ಮಂಗಳಾ ಚಿಗಟೇರಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here