ಗ್ರಾಮೀಣ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ

0
47
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಕೆನಾರಾ ಬ್ಯಾಂಕ ದೇಶಪಾಂಡೆ ಆರ್. ಸೆಟಿ ಸಂಸ್ಥೆ ಹಳಿಯಾಳ. ಶಾಖೆ ಮುಂಡಗೋಡ ಸಹಯೋಗದಲ್ಲಿ ಗ್ರಾಮೀಣ ಮಹಿಳೆಯರಿಗೆ ದಿನಾಂಕ 1.11.16 ರಿಂದ 30.11.16 ರವರೆಗೆ ಓಣಿಕೇರಿ (ಪಾಳಾ)ದಲ್ಲಿ ಉಚಿತ ಹೊಲಿಗೆÀ ತರಬೇತಿ ನೀಡಲಾಯಿತು.
ದಿನಾಂಕ 30.11.16 ರಂದು ಬುಧವಾರ ಓಣಿಕೇರಿಯಲ್ಲಿ ನಡೆದ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ರವೀಂದ್ರ ರೇವಣ್ಕರವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಅವರು ಮಾತನಾಡಿ ಈ ವರೆಗೆ ಸಂಸ್ಥೆ ಅನುಸರಿಸಿಕೊಂಡು ಬಂದಿರುವ ಗುಣಾತ್ಮಕ ಶಿಕ್ಷಣದ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪಿಸಿ ಅವರನ್ನು ಸ್ವಾವಲಂಬಿಯಾಗಿ ಮಾಡುವ ಒಂದು ಚಿಕ್ಕ ಪ್ರಯತ್ನವೇ ಓಣಿಕೇರಿಯಲ್ಲಿ ಸಂಪನ್ನಗೊಂಡ ಹೊಲಿಗೆ ತರಬೇತಿ., ಇದರ ಪ್ರಯೋಜನ ಎಲ್ಲರು ಪಡೆದುಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಜಯಮ್ಮಾ ಕೃಷ್ಣ ಹೀರೆಹಳ್ಳಿ ಜಿ, ಪಂ ಸದಸ್ಯರು, ಪಾಳಾ ಕ್ಷೇತ್ರ, ರವರು ಈ ಹಿಂದೆ ಮಹಿಳೆಯರನ್ನು ಕುಟುಂಬದ ಚೌಕಟ್ಟಿನಲ್ಲಿ ಮಾತ್ರ್ ಬದುಕಲು ಅವಕಾಶವಿತ್ತು, ಇಂದು ಈ ವ್ಯಾಪ್ತಿಯಿಂದ ಹೊರ ಬಂದು ಮಹಿಳೆ ವಿಸ್ತಾರವಾಗಿ ಬೆಳೆಯಲು ಅವಕಾಶಮಾಡಿ ಕೊಡಲಾಗುತ್ತಿದೆ.ಅದನ್ನು ಮಹಿಳೆಯರು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಅತಥಿಯಾದ ಕೃಷ್ನ ಹೀರೆಹಳ್ಳಿ ಯವರು ಮಾತನಾಡಿ ಸಮಾಜಕ್ಕೆ ಸಮರ್ಪಣಾಭಾವದಿಂದ ಕೆಲಸಮಾಡುವ ಮಹಿಳೆ ಸಉದ್ಯೋಗದ ತರಬೇತಿಯಿಂದ ಸ್ವಾವಲಂಬಿ ಬದುಕು ಸಾಗಿಸಲು ಅನುಕೂಲವಾಗುತ್ತದೆ ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ತಹಸಿನಬಾನು ಸಂಘಡಿಗರ ಪ್ರಾರ್ಥನೆಯೊಂದನ್ನು ಹಾಡಿದರು. ಜ್ಯೋತಿ ಅಕ್ಕಸಾಲಿ ಅತಿಥಿಗಳನ್ನು ಸ್ವಾಗತಿಸಿದರು, ಸುಜಾತ ಕೊರವರ ಮತ್ತು ಮಂಜುಳಾರವರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಓಣಿಕೇರಿಯ ಸುತ್ತಮುತ್ತಲದಿಂದ ಮೂವತ್ತಕ್ಕೂ ಹೆಚ್ಚು ಸಂಖ್ಯೆಯ ಶಿಬಿರಾರ್ಥಿಗಳು ಬಾಗವಹಿಸಿ ತರಬೇತಿಯನ್ನು ಪಡೆದರು. ಕಾರ್ಯಕ್ರಮದ ವೇದಿಕೆಯಲ್ಲಿ ತರಬೇತಿ ಶಿಕ್ಷಕಿಯಾದ ಸಪಿಯಾ ಮಹ್ಮದ ಇಸಾಕ ಮಂಡಕ್ಕಿ ಮತ್ತು ಮಹಾಬಲೇಶ್ವರ ನಾಯ್ಕ ಯೋಜನಾಧಿಕಾರಿ, ಶಿವಾನಂದ ಡಿ ಗೌಢ್ರ ಸಮುದಾಯ ಸಂಘಟಕರು, ಸಿ ಬಿಡಿ ಆರ್ ಸೆಟಿ ಮುಂಡಗೋಡ, ಹಾಗು ಶ್ರೀಮತಿ ಮಾನ್ವಿಕಾ ನಾಯ್ಕ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ , ಶ್ರೀಶೈಲ ವಲಯ ಅರಣ್ಯಾಧಿಕಾರಿಗಳು, ಉಪಸ್ಥಿತರಿದ್ದರು. ಶಿವಾನಂದ ಡಿ ಗೌಢ್ರ ಸಮುದಾಯ ಸಂಘಟಕರು, ಸಿ ಬಿಡಿ ಆರ್ ಸೆಟಿ ಮುಂಡಗೋಡ, ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಮಹಾಬಲೇಶ್ವರ ನಾಯ್ಕ ಯೋಜನಾಧಿಕಾರಿ, ವಂದಿಸಿದರು.

loading...

LEAVE A REPLY

Please enter your comment!
Please enter your name here