ಗ್ರಾಮ ವಿಕಾಸ ಯೋಜನೆಗೆ ಶಾಸಕ ಕಾಗೇರಿಯಿಂದ ಶಂಕು ಸ್ಥಾಪನೆ

0
14
loading...

ಕನ್ನಡಮ್ಮ ಸುದ್ದಿ-ಶಿರಸಿ : ಜಿಲ್ಲಾ ಪಂಚಾಯ್ತಿ ಹಾಗೂ ನೆಗ್ಗು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ 2015-16ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಮತ್ತಿಗಾರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಂಕು ಸ್ಥಾಪನೆ ನೇರವೇರಿಸಿದರು.
ನಂತರ ಮಾತನಾಡಿದ ಕಾಗೇರಿ, ಮತ್ತಿಗಾರ ಗ್ರಾಮಕ್ಕೆ 90 ಲಕ್ಷ, ದೇವನಳ್ಳಿ ಗ್ರಾಮಕ್ಕೆ 51 ಲಕ್ಷ ರೂ ಬಿಡುಗಡೆಯಾಗಿದೆ. ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನವಾಗಬೇಕಿದೆ ಎಂದರು. ಬಿಜೆಪಿಯ ಸುವರ್ಣ ಗ್ರಾಮ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಗ್ರಾಮ ವಿಕಾಸ ಯೋಜನೆ ಎಂದು ಹೆಸರು ಬದಲಾಯಿಸಿದೆ. ಅಲ್ಲದೇ, ಗ್ರಾಮ ಪಂಚಾಯ್ತಿಗಳು ಸ್ಥಳಿಯ ಕಾಮಗಾರಿಗಳನ್ನು ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸುತ್ತಿವೆ. ಗ್ರಾಮ ವಿಕಾಸ ಯೋಜನೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಶಿರಸಿ ವಿಭಾಗವು ಕಾಮಗಾರಿ ಪ್ರಾರಂಭಿಸಿ ಪ್ರಥಮ ಸ್ಥಾನದಲ್ಲಿದೆ. ಶಿರಸಿಯಲ್ಲಿ 3 ಗ್ರಾಮ ಹಾಗೂ ಸಿದ್ದಾಪುರದಲ್ಲಿ 2 ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದ ಅವರು, ಹೆಚ್ಚು ಗ್ರಾಮಗಳ ಆಯ್ಕೆಗೆ ಸರ್ಕಾರ ಅವಕಾಶ ನೀಡಬೇಕು ಎಂದರು.
ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದೆ. ಸರ್ಕಾರದಿಂದ ಬಿಡುಗಡೆಯಾಗುವ ಅಲ್ಪ ಪ್ರಮಾಣದ ಹಣ ಸಾಕಾಗುವದಿಲ್ಲ ಎಂದ ಅವರು, ತಾಲೂಕನ್ನು ಬರಗಾಲ ಪ್ರದೇಶವೆಂದು ಪರಿಗಣಿಸಬೇಕು. ಉದ್ಯೋಗಖಾತ್ರಿ ಯೋಜನೆಯಲ್ಲಿ ಅನೇಕ ತಿದ್ದುಪಡಿ ಮಾಡಬೇಕೆಂದು ಅಧಿವೇಶನದಲ್ಲಿ ಆಗ್ರಹಿಸಲಾಗಿದೆ. ಕುಡಿಯುವ ನೀರಿಗಾಗಿ ಕೃಷಿ ಹೊಂಡ ನಿರ್ಮಾಣಕ್ಕೆ ಉದ್ಯೋಗಖಾತ್ರಿ ಯೋಜನೆಯಲ್ಲಿ ಅವಕಾಶ ಕಲ್ಪಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಪಂ ಸದಸ್ಯೆ ಪ್ರಭಾವತಿ ಗೌಡ, ತಾ.ಪಂ. ಸದಸ್ಯೆ ಮಹಾಲಕ್ಷ್ಮೀ ಗೌಡ, ಗ್ರಾ.ಪಂ.ಉಪಾಧ್ಯಕ್ಷ ಸಂತೋಷ ನಾಯ್ಕ, ಇಂಜೀನಿಯರ ಶೇಖರ ಬಣಕರ, ರಾಮಚಂದ್ರ ಗಾಂವಕರ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here