ಚಂಪಾಷಷ್ಟಿಯ ನಿಮಿತ್ತ ದೀಪೋತ್ಸವ ಹಾಗೂ ವಿವಿಧ ಕಾರ್ಯಕ್ರಮ

0
14
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ : ತಾಲೂಕಿನ ಗಡಿ ಭಾಗದ ಉಚಗೇರಿ-ಚಿಪಗೇರಿಯ ಕದಳೀನಂದಿಕೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಟಿಯ ನಿಮಿತ್ತ ವಾರ್ಷಿಕ ಸಂಪ್ರದಾಯದಂತೆ ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ದೀಪೋತ್ಸವದ ನಂತರ ಸಿದ್ದಾಪುರದ ಹೆಗ್ಗರಣಿಯ ವೀರಮಾರುತೀ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರು ಪ್ರದರ್ಶಿಸಿದ “ಕಂಸವಧೆ” ಯಕ್ಷಗಾನ ಕಲಾಸಕ್ತರ ಮೆಚ್ಚುಗೆ ಗಳಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಭಟ್ಟ ಬರ್ತೋಟ, ಮದ್ದಲೆ ವಾದಕರಾಗಿ ಸುಬ್ರಾಯ ಭಟ್ಟ ಗಾಣಗದ್ದೆ, ಚಂಡೆ ವಾದಕರಾಗಿ ಗಂಗಾಧರ ಹೆಗಡೆ ಕಂಚೀಮನೆ; ಮುಮ್ಮೇಳದ ಕಲಾವಿದರಾಗಿ ರಘುಪತಿ ನಾಯ್ಕ ಹೆಗ್ಗರಣಿ (ಕಂಸ), ವಿನಾಯಕ ಮಾವಿನಕಟ್ಟಾ (ಕೃಷ್ಣ), ಪ್ರಶಾಂತ ಹೆಗಡೆ (ಬಲರಾಮ), ಮಂಜುನಾಥ ಗೌಡ (ಅಕ್ರೂರ), ನಾಗರಾಜ ಹೆಗಡೆ (ರಾಜರಜಕ) ಹಾಗೂ ಗಣೇಶ ಸಿರಸಿ (ಚಾಣೂರ) ವಿವಿಧ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here