ಚಿಗರೆಮಾಳ್‌ದ 3700 ಹೇಕ್ಟೆರ್‌ದಲ್ಲಿ ಪ್ರಕೃತಿ ಶಿಬಿರ ತೆಲೆಎತ್ತಿದೆ

0
23
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಚಿಗರೆಮಾಳ್‌ದ 3700 ಹೇಕ್ಟೆರ್‌ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ಪ್ರಕೃತಿ ಶಿಬಿರವನ್ನು ಗುರುವಾರ ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಬೆಳಗಾವಿ ವಿಭಾಗದ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟೆಂಟ್‌ ಒಳಹೊಕ್ಕು ಅಲ್ಲಿನ ವ್ಯವಸ್ಥೆ, ಶೌಚಾಲಯ, ಮತ್ತಿತರ ವ್ಯವಸ್ಥೆ ಪರಿಶೀಲಿಸಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿವರಿಗೆ ಮಾಹಿತಿ ನೀಡಿದ ಡಿಸಿಎಫ್‌ ಬಸವರಾಜ ಪಾಟೀಲ, ಈ ಪ್ರಕೃತಿ ಶಿಬಿರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತರಭೇತಿ ನೀಡಲು ಬಳಸಲಾಗುವುದು. ರೈತರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯ ಸಂಬಂಧಿ ಕಾರ್ಯಾಗಾರ ನಡೆಸಲು ಬಳಸಲಾಗುವುದು ಎಂದರು.
ಪಿಸಿಸಿಎಫ್‌ ಆರ್‌.ಎಸ್‌.ಸುರೇಶ, ವನ್ಯಜೀವಿ ವಿಭಾಗದ ಪಿಸಿಸಿಎಫ್‌ ಬಿಜೆ ಹೊಸಮಠ, ಅರಣ್ಯ ಇಲಾಖೆ ಕಾರ್ಯದರ್ಶಿ ವಿಜಯಕುಮಾರ ಗೋಗಿ, ಸಿಸಿಎಫ್‌ ವಿಜಯ ಮೋಹನರಾಜ್‌ ಇದ್ದರು.

loading...

LEAVE A REPLY

Please enter your comment!
Please enter your name here