ಜನರ ನಿದ್ದೆ ಗೆಡಿಸುವಂತೆ ಮಾಡಿದ : ಕಾಡುಕೋಣ

0
18
loading...

ಸುರೇಬಾನ: ಸಮೀಪದ ಚಿಂಚಕಂಡಿ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ ಕಾಡುಕೋಣ ಬಂದು ಇಲ್ಲಿನ ಜಮೀನುಗಳಲ್ಲಿ ನುಗ್ಗಿ ರೈತರನ್ನು ನಿದ್ದೆಗೇಡುವಂತೆ ಮಾಡಿದೆ. ಅಲ್ಲದೆ ಪಕ್ಕದ ಗ್ರಾಮಗಳಾದ ಘಟಕನೂರ ಹಾಗೂ ಕೊಳಚಿ ಗ್ರಾಮದ ಜಮೀನಿನಲ್ಲಿರುವ ಕಬ್ಬಿನ ಬೆಳೆಯಲ್ಲಿ ಓಡಾಡಿ ಬೆಳೆ ನಾಶಮಾಡಿದೆ. ಆ ಕಾಡುಕೋಣವು ಜಮೀನಿನಲ್ಲಿ ಅಡಗಿ ಕುಳಿತಿದ್ದರಿಂದ ರೈತರು ಹಾಗೂ ಸಾರ್ವಜನೀಕರು ಭಯಭೀತರಾಗಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಅಲ್ಲಿನ ಜಮೀನುಗಳಿಗೆ ಆಗಮಿಸಿ ಆ ಕಾಡುಕೋಣವನ್ನು ಹಿಡಿಯಲೂ ಬಲೆಹಾಕಿ ಹರಸಹಾಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲವೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಮದ್ದಿನ ಚುಚ್ಚುಮದ್ದನ್ನು ನೀಡಲಿಕ್ಕೆ ಪಶು ವೈಧ್ಯರನ್ನು ಕರೆಸಿ ಗನ್‌ಮೂಲಕ ಚುಚ್ಚುಮದ್ದನ್ನು ಹಾಕಿ ಆ ಕಾಡುಕೋಣವನ್ನು ಹಿಡಿದು ಅರಣ್ಯಕ್ಕೆ ಸಾಗಿಸಲಾಗುತ್ತಿದೆ ಎಂದು ರಾಮದುರ್ಗ ಉಪ ವಲಯ ಅರಣ್ಯ ಅಧಿಕಾರಿ ಯು.ಬಿ.ಹಾದಿಮನಿ ತಿಳಿಸಿದರು.

ಚಿಂಚಕಂಡಿ ಗ್ರಾಮದ ದುರಗಪ್ಪ ಬೈ. ಮಾದರ ಇವರ ಜಮೀನ ಸ.ನಂ. 3/2 ದ ಕಬ್ಬನ ಜಮೀನಿನಲ್ಲಿ ಕಾಡುಕೋಣ ತನ್ನ ಅಟ್ಟಹಾಸವನ್ನು ಮುಂದುವರೆಸಿ ಕಬ್ಬಿನ ಬೆಳೆಯನ್ನು ಹಾಳುಮಾಡಿದೆ. ಇದರಿಂದ 4-5 ಟನ್‌ ಕಬ್ಬಿನ ಬೆಳೆ ಹಾಳಾಗಿದೆ ಎಂದು ದುರಗಪ್ಪ ಅವರ ಸಃದರ ಈರಣ್ಣ ಮಾದರ ತಮ್ಮ ಅಳಲನ್ನು ಪತ್ರಕರ್ತರ ಮುಂದೆ ತೋಡಿಕೊಂಡರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಆರ್‌.ಎಸ್‌.ಹೊಸಮನಿ, ಎಚ್‌.ಬಿ.ಪಟ್ಟೇದ, ಡಿ.ಆರ್‌.ದ್ಯಾಮನ್ನಿ, ಬಿ.ಎಮ್‌. ಕುಂಬಾರ, ಜಿ.ಎಸ್‌.ಕಲ್ಯಾಣಿ, ಜೆ.ಎಮ್‌. ತೊರಗಲ್ಲ ಹಾಗೂ ಅರಣ್ಯ ವಿಕ್ಷಕ ಪಿ.ಆರ್‌.ಮಾಳಿ ರೈತರಾದ ಭರಮಪ್ಪ ಶೇಶಾದ್ರಿ, ರಮೇಶ ಜಾಲಪ್ಪನವರ ಮತ್ತತಿತರರು ಇದ್ದರು.

loading...

LEAVE A REPLY

Please enter your comment!
Please enter your name here