ಜಾನಪದ ಸಂಪತ್ತು ಲೋಕಾರ್ಪಣೆ

0
28
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಜೊಯಿಡಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಯೋಜನಾ ಸಂಯೋಜಕ ಹಾಗೂ ಬೋಧಕರರಾದ ಡಾ: ರಾಜಶೇಖರ ಜಮದಂಡಿಯವರ 20 ನೇ ಕೃತಿ ‘ಜಾನಪದ ಸಂಪತ್ತು’ ಇದರ ಲೋಕಾರ್ಪಣೆ ಮತ್ತು ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮವು ಹಳಿಯಾಳ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಡಿಲಕ್ಸ್ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ಜಾನಪದ ತಜ್ಞ ಹೊನ್ನಾವರದ ಡಾ: ಎನ್.ಆರ್.ನಾಯಕ ಅವರು ಜಾಗತೀಕರಣದ ದಾಳಿಯಿಂದ ಕನ್ನಡವೆ ಹಾರಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಸುಡುವ ಸಂಸ್ಕøತಿ ಬೇಡ ಅದರ ಬದಲಾಗಿ ನೆಡುವ ಸಂಸ್ಕøತಿ ಬೇಕು. ಆ ಸಂಸ್ಕøತಿಯನ್ನು ಜಾನಪದ ಸಂಸ್ಕøತಿ ಎತ್ತಿ ತೋರಿಸುತ್ತ ಬಂದಿರುವುದು ವಿಶೇಷ. ಜಾನಪದ ಬದುಕಿದ್ದರೆ ಪ್ರಪಂಚ. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವುದರ ಮೂಲಕ ನಮ್ಮ ಸ್ವಂತಿಕೆಯನ್ನು ಮೆರೆಯಬೇಕಾಗಿದೆ. ಜಾನಪದ ಸಂಸ್ಕøತಿಯ ಮೂಲಸತ್ವಗಳ ದಾಖಲೀಕರಣವಾದಾಗ ಅದು ಅಜಾರಾಮರವಾಗಿ ನೆಲೆಯೂರಲು ಸಾಧ್ಯವಿದೆ ಎಂದು ಅಭಿಪ್ರಯಿಸಿದರು.

‘ಜಾನಪದ ಸಂಪತ್ತು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬಂಗೂರನಗರ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕ ಡಾ: ಆರ್.ಜಿ.ಹೆಗಡೆಯವರು ಜಾನಪದ ಸಂಸ್ಕøತಿ, ಆಚಾರ, ವಿಚಾರಗಳ ಬಗ್ಗೆ ಮತ್ತು ಅದರ ಮೂಲಸತ್ವಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ ಡಾ: ರಾಜಶೇಖರ ಜಮದಂಡಿಯವರ ನೂತನ ಕೃತಿ ಜಾನಪದ ಸಾಹಿತ್ಯ ಮತ್ತು ಸಂಸ್ಕøತಿಯ ಸಂರಕ್ಷಣೆಗೆ ಮಹತ್ವದ ಕೊಡುಗೆಯಾಗಲೆಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಅವರು ತಮ್ಮ ನೋವು ನಲಿವುಗಳನ್ನು ಜಾನಪದ ಸಾಹಿತ್ಯದ ಮೂಲಕ ಬಾಯಿಂದ ಬಾಯಿಗೆ ಹರಡಿ ಜಾನಪದ ಲೋಕವನ್ನು ಕಟ್ಟಿಕೊಟ್ಟ ಜನಪದರ ನಾಡು, ನುಡಿ ಮತ್ತು ಸಂಸ್ಕøತಿ, ಸಂಸ್ಕಾರ ಎಲ್ಲರಿಗೂ ಅನುಕರಣೀಯ. ಜಾನಪದ ಸಂಪತ್ತು ಕೃತಿಯ ಮೂಲಕ ಜಾನಪದ ಮಹಿಮೆ ಸಾರುವ ಕಾರ್ಯ ನೂತನ ಕೃತಿಯಿಂದ ಆಗಲೆಂದರು.

ಕೃತಿಕಾರ ಡಾ: ರಾಜಶೇಖರ ಜಮದಂಡಿ ಮಾತನಾಡಿ ಈ ನಾಡಿನ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಕ್ಕೆ ವೈವಿದ್ಯಮವಾದ ಕೊಡುಗೆ ನೀಡಿದ ಜಾನಪದದ ಮೂಲಸತ್ವವನ್ನು ದಾಖಲಿಸುವ ಸಣ್ಣ ಪ್ರಯತ್ನವಾಗಿ ಈ ಕೃತಿಯನ್ನು ಹೊರತರಲಾಗಿದೆ ಎಂದರು.

ಹಳಿಯಾಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಪೇಂದ್ರ ಘೋರ್ಪಡೆ ಅಧ್ಯಕ್ಷತೆ ವಹಿಸಿದ್ದರು. ಜಾನಪದ ತಜ್ಷ ಡಾ: ಎನ್.ಆರ್.ನಾಯಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಯ ಕಲ್ಯಾಣ ಧುಮೆ ಮತ್ತು ಹರ್ಷ ಪಟಗಾರ ಅವರಿಂದ ಜಾನಪದ ಗಾಯನ ನಡೆಯಿತು.

ಉಪನ್ಯಾಸಕಿ ಜಾಹ್ನವಿ ಭಟ್ಟ ನಾಡಗೀತೆ ಹಾಡಿದರು. ನಿವೃತ್ತ ಉಪನ್ಯಾಸಕ ಎಸ್.ವೈ.ಹಾದಿಮನಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಡಿದರು. ಪ್ರಾಚಾರ್ಯ ನಾಗೇಶ ನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು. ಕಸಾಪ ಖಜಾಂಚಿ ಮನೋಹರ ಜನ್ನು ವಂದಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಆಶಾ ದೇಶಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

loading...