ತಂದೆ ತಾಯಿಯಲ್ಲಿ ದೇವರನ್ನು ಕಾಣಬಹುದು: ಅಪ್ಪುಗೋಳ

0
26
loading...

ಮೂಡಲಗಿ: ತಂದೆ ತಾಯಿಯನ್ನು ಪ್ರೀತಿಯಿಂದ ಕಾಣುವುದರಿಂದÀ ಅವರಲ್ಲಿ ದೇವರನ್ನು ಕಾಣಬಹುದು ಎಂದು ಬೆಳಗಾವಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸಹಕಾರಿ ಬ್ಯಾಂಕನ ಅಧ್ಯಕ್ಷ ಆನಂದ ಅಪ್ಪುಗೋಳ ಹೇಳಿದರು. ಅವರು ಸಮೀಪದ ಪಟಗುಂದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಗ್ರಾಮಭಿವೃದ್ಧಿ ಮತ್ತು ಸೇವಾ ಸಂಘದ ಆಶ್ರಯದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಜೀವನದಲ್ಲಿ ಏನಾದರು ಸಾಧನೆಮಾಡಿ ದೇಶ ಸೇವೆ ಮಾಡಿದಲ್ಲಿ ರಾಯಣ್ಣನಿಗೆ ಭಕ್ತಿ ಸಲ್ಲಿಸಿದಂತಾಗುತ್ತದೆ.
ರಾಜ್ಯದಲ್ಲಿ ಒಟ್ಟು 125 ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸುವ ಗುರಿ ಹೊಂದಿದ್ದು ಈಗಾಗಲೇ 9 ಕಡೆಗಳಲ್ಲಿ ನಿರ್ಮಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಮಾತನಾಡಿ ಸಂಗೋಳ್ಳಿ ರಾಯಣ್ಣ ಕೇವಲ ಒಂದು ಜಾತಿಗೆ ಸೀಮಿತವಲ್ಲ ದೇಶಕ್ಕೆ ಸೀಮಿತವಾದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನನ್ನು ಪ್ರತಿ ಮನೆ ಮನೆಯಲ್ಲೂ ಸ್ಮಾರಣೆ ಮಾಡಬೇಕು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಕೆಲಸ ಮಾಡಬೇಕು ಮುಂದಿನ ಒಂದು ವರ್ಷದಲ್ಲಿ ಎಲ್ಲ ಗ್ರಾಮದ ಮುಖಂಡರು ಗ್ರಾಮಗಳಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಎಂದು ಕರೆ ನೀಡಿದರು.
ಸಾನಿಧ್ಯವಹಿಸಿದ ಅಥಣಿ ಕೌಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಹಾಗು ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮಿಗಳೂ ಮನುಷ್ಯನಾದವನು ಮೊದಲು ಸಂಸ್ಕಾರ ಕಲಿಯಬೇಕು ಬೇರೆಯವರ ಕನಸು ನನಸು ಮಾಡುವುದಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತಾರೆ ಅದಕ್ಕೆ ಅಸ್ಪದ ನೀಡದೇ ಬದುಕಬೇಕು. ವ್ಯಸನಕ್ಕಾಗಿ ಹಣ ಹಾಳು ಮಾಡದೇ ಧರ್ಮದ ಕಾರ್ಯಗಳಿಗೆ ಖರ್ಚಿಮಾಡಿ ಎಂದು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಅಪ್ಪಣ್ಣ ಪೂಜೇರಿ, ರಾಮಗೌಡ ಪಾಟೀಲ, ಪಿ.ಕೆ.ಪಿ.ಎಸ್‌ ಮಾಜಿ ಅಧ್ಯಕ್ಷ ರಾಮಗೌಡ ಪಾಟೀಲ, ಜಿ.ಪಂ ಸದಸ್ಯೆ ವಾಸಂತಿ ತೇರದಾಳ, ತಾ.ಪಂ ಸದಸ್ಯೆ ಪ್ರೇಮಾ ಸನದಿ, ಗ್ರಾ.ಪಂ ಅಧ್ಯಕ್ಷೆ ಉಜ್ವಾಲ ಪಾಟೀಲ, ಉಪಾಧ್ಯಕ್ಷೆ ಭಾರತಿ ಪೂಜೇರಿ, ಮೂಡಲಗಿ ಪುರಸಭೆ ಸದಸ್ಯ ಎಸ್‌.ಎಸ್‌.ಪಾಟೀಲ್‌, ಮಾಜಿ ಜಿ.ಪಂ ಸದಸ್ಯ ಭೀಮಶಿ ಮಗದುಮ್ಮ, ಲಕ್ಷ್ಮಣ ಮುಸಗುಪ್ಪಿ, ಎಸ್‌.ಎಮ್‌.ಕಮದಾಳ, ರಾಮಪ್ಪ ತುಬಾಕಿ, ಮಾಣಿಕ ಬೋಳಿ, ಮುತ್ತಪ್ಪ ಡಾಂಗೆ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಗ್ರಾಮಭಿವೃದ್ಧಿ ಮತ್ತು ಸೇವಾ ಸಂಘದ ಅಧ್ಯಕ್ಷ ಜಡೆಪ್ಪ ಮಂಗಿ, ಉಪಾಧ್ಯಕ್ಷ ಬಸಪ್ಪ ಮನ್ನಿಕೇರಿ, ಸಂತೋಷ ಕಮತಿ, ಲಕ್ಷ್ಮಣ ಕರಮಶಿ, ಪರಮಾನಂದ ತುಬಾಕಿ, ಸಿದ್ದಪ್ಪ ಲೋಕುರಿ, ಪರಮಾನಂದ ಮನ್ನಿಕೇರಿ, ಮಾರುತಿ ಪಾಲಕಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಜಡಿಸಿದ್ದೆಶ್ವರ ಗುಡಿಯಿಂದ ವಿಠ್ಠಪ್ಪನಕೋಡಿಯವರೆಗೆ ಸಂಗೊಳಿರಾಯಣ್ಣಾ ಮೂರ್ತಿಯನ್ನು, ಡೊಳ್ಳು ಕುಣಿತ, ಹಲಗೆ ವಾದ್ಯ ಹಾಗೂ ವಿವಿಧ ವಾದ್ಯಗಳೊಂದಿಗೆ ಮಹಿಳೆಯರಿಂದ ಕುಂಭಮೇಳ ಮೆರವಣಿಗೆ ನೇರವೇರಿತು. ಕಾರ್ಯಕ್ರಮವನ್ನು ಸಿದ್ದು ದುರದುಂಡಿ ಸ್ವಾಗತಿಸಿದರು. ಎ.ಜಿ.ಕೋಳಿ ನಿರೂಪಿಸಿದರು. ಅಜೀತ ಹೊಸಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here