ತಾಯಂದಿರ ಸಭೆ ಮತ್ತು ತಾಯಂದಿರ ಪಾದ ಪೂಜೆ ವಿನುತನ ಕಾರ್ಯಕ್ರಮ

0
48
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ತೊಟ್ಟಿಲನ್ನು ತೂಗುವ ಕೈ ಜಗತ್ತನೆ ತೂಗಬಲ್ಲದು ಎನ್ನುವ ನಾನ್ನುಡಿಯಂತೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವದ್ದು. ಈ ದಿಶೆಯಲ್ಲಿ ಬಾರತಿಯ ಸಂಸ್ಕ್ರತಿ ಹಾಗೂ ಪರಂಪರೆಯನ್ನು ಇಂದಿನ ತಾಯಂದಿರು ತಮ್ಮ ಮಕ್ಕಳಿಗೆ ತುಂಬಬೇಕು ಎಂದು ಮಾಜಿ ತಾಲೂಕಾ ಪಂಚಾಯತ ಸದಸ್ಯೆ ರುಕ್ಮಿಣಿಬಾಯಿ ಹುಲ್ಮನಿ ಹೇಳಿದರು.
ಅವರು ತಾಲೂಕಿನ ಸರಕಾರಿ ಪ್ರೌಡ ಶಾಲೆ ಚಿಗಳ್ಳಿಯಲ್ಲಿ ನಡೆದ ತಾಯಂದಿರ ಸಭೆ ಮತ್ತು ತಾಯಂದಿರ ಪಾದ ಪೂಜೆ ಮಾಡಿಸುವ ವಿನುತನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿ ನಂತರ ಶಾಲಾ ಮಕ್ಕಳಿಗೆ ಹಿತವಚನ ನುಡಿದರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ದಾಸಪ್ಪ.ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರ ಕರುಣಾಕರ ಖೇಮೋಜಿಯವರ ತಾಯಿ ಸಂಗೀತಾ ಖೇಮೋಜಿಯವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ತರಗತಿ ಶಿಕ್ಷಕರಾದ ಶ್ರೀ ಸಂತೋಷ ಮಾಲಿಂಗಣ್ಣನವರ ಹಾಗೂ ಕುಮಾರಿ ದಿವ್ಯಾ ಗೋಪಾಲ್ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಮಾಡಿದರು. ಶ್ರೀಮತಿ ವಿದ್ಯಾ ಪಾಠಣಕರ ಅವರು ಫಲಿತಾಂಶ ಸುದಾರಿಸಲು ಶಾಲೆಯಲ್ಲಿ ಶಿಕ್ಷಕರು ಕೈಗೊಂಡಿರುವ ಕ್ರಮಗಳ ಬಗ್ಗೆ ತಾಯಂದಿಯರಿಗೆ ತಿಳಿಸಿದರು. ಶ್ರೀ ನಾಗೇಶ ಆಗೇರ ಅವರು ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ತಾಯಂದಿರ ಪಾತ್ರ ಏನೆಂಬುವುದನ್ನು ತಿಳಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಎನ್.ಎಸ್.ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ಹಿಂದಿ ಶಿಕ್ಷಕರಾದ ಶ್ರೀ ಶಂಕರ ನಾಯ್ಕ ರವರು ವಂದಿಸಿದರು.

loading...

LEAVE A REPLY

Please enter your comment!
Please enter your name here