ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್‌ ದಿನಾಚರಣೆ

0
20
loading...

ಕನ್ನಡಮ್ಮ ಸುದ್ದಿ ಬೈಲಹೊಂಗಲ

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ಯಾವುದೇ ರೋಗರುಜೀನಗಳು ಹರಡುವದಿಲ್ಲ ಎಂದು ನ್ಯಾಯಾಧೀಶ ಬಾಲಗೋಪಾಲಕೃಷ್ಣ ಹೇಳಿದರು.

ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಕಾನೂನು ನೆರವು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾ ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ದಿ ಇಲಾಖೆ ಆಶ್ರಯದಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಏಡ್ಸ್‌ ಒಂದು ಮಾರಕ ಖಾಯಿಲೆಯಾಗಿದ್ದು ಹಲವಾರು ಬಗೆಯಿಂದ ಜನರಲ್ಲಿ ಹರಡುತ್ತದೆ. ಇದೊಂದು ಸಾಂಕ್ರಾಮಿಕ ರೋಗವಿದ್ದು ಆರೋಗ್ಯದ ಕುರಿತು ನಿಷ್ಕಾಳಜಿ, ಕಡಿಮೆ ಜ್ಞಾನ ಇರುವವರಲ್ಲಿ ಇದು ಹರಡುವ ಸಾಧ್ಯತೆ ಇದೆ ಎಂದರು.

ಸರ್ಕಾರ ಏಡ್ಸ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಜಾಹಿರಾತುಗಳನ್ನು, ತಿಳುವಳಿಕೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದನ್ನು ನಿಯಂತ್ರಿಸಲು ಸಾಕಷ್ಟು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಈ ಕುರಿತು ಆಸ್ಪತ್ರೆಗಳು, ಅಂಗನವಾಡಿ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸುವದು ಅವಶ್ಯವಾಗಿದೆ ಎಂದರು. ವಕೀಲ ಎಫ್‌.ಎಸ್‌.ಸಿದ್ದನಗೌಡರ ಏಡ್ಸ್‌ ಹರಡುವಿಕೆಯ ಕುರಿತು ಉಪನ್ಯಾಸ ನೀಡಿದರು.

ತಾಲೂಕಾ ವೈಧ್ಯಾಧಿಕಾರಿ ಡಾ. ಸಂಜಯ ಸಿದ್ದನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯ ಮೇಲೆ ನ್ಯಾಯಾಧೀಶ ಸಿ.ಎಸ್‌.ಶಿವನಗೌಡರ, ಸರ್ಕಾರಿ ಅಭಿಯೋಜಕರಾದ ರಂಜನಾ ಪಾಟೀಲ, ರಮೇಶ ಕೋಲಕಾರ, ವಕೀಲರ ಸಂಘದ ಅಧ್ಯಕ್ಷ ಎಂ.ವೈ.ಸೋಮಣ್ಣವರ, ಕಾರ್ಯದರ್ಶಿ ದೀಪಕ ಸಂಗೊಳಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿರ್ಮಲಾ ಮಹಾಂತಶೆಟ್ಟಿ, ವಕೀಲರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಶ್ರೀಕಾಂತ ಬೋರಕನವರ, ಆಯ್‌.ಎಫ್‌.ತಡಸಲ, ಮಲ್ಲಯ್ಯ ಅಲ್ಲಯ್ಯನವರಮಠ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು. ಎನ್‌.ಡಿ.ಖಾಡೆ ಸ್ವಾಗತಿಸಿದರು, ಎಸ್‌.ಎಸ್‌.ಮುತ್ನಾಳ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here