ತಾಲೂಕು ಕ್ರೀಡಾಂಗಣವಿಲ್ಲದೆ ಅಲೆದಾಡುತ್ತಿರುವ ವಿಧ್ಯಾರ್ಥಿಗಳು

0
24
loading...

ಮುತ್ತು. ಅರ್‌.ಕಮ್ಮಾರ

ರಾಮದುರ್ಗ: ಕ್ರೀಡಾಂಗಣ ಇಲ್ಲದ ಶಾಲೆಗಳು ಆತ್ಮವಿಲ್ಲದ ದೇಹವಿದ್ದಂತೆ ಎಂದು ಸ್ವಾಮಿ ವಿವೇಕಾಂದರ ವಾಣಿಯಂತೆ ದೇಶ ಕ್ರೀಡಾಕೂಟದಲ್ಲಿ ಹಿಂದೆ ಉಳಿಯಲು ಕಾರಣ ಮೊದಲು ದೈಹಿಕ ಶಿಕ್ಷಕರ ಕೊರತೆ. ಪ್ರಾಥಮಿಕ ಹಂತದಲ್ಲಿ ಸಮರ್ಪಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲದಂತಾಗಿದೆ. ಕರ್ನಾಟಕ ಸರಕಾರ ಪ್ರತಿವರ್ಷ ಇಲಾಖೆಯಿಂದ ಕ್ರೀಡಾಕೂಟಗಳು ನಡೆಯುತ್ತವೆ. ಆದರೆ ಕ್ರೀಡಾಂಗಣ ಇಲ್ಲದಿದ್ದರೆ ಇವುಗಳನ್ನು ನಡೆಸುದಾದರು ಎಲ್ಲಿ, ಹಾಗಾದರೆ ಇಲ್ಲಿ ನೊಡಿ ತಾಲೂಕಿನ ಸುಂದರವಾದ ಓಲಂಪಿಕ ಕ್ರೀಡಾಕೂಟದಲ್ಲಿ ಇಷ್ಟೊಂದು ಸುಂದರವಾಗುರುತ್ತದೆ ಇಲ್ಲವೋ ಗೊತ್ತಿಲ್ಲ. ಹಾಗಾದರೆ ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ವಲ್ಪ ಇತ್ತ ನೊಡಿ.

ತಾಲೂಕಾ ಕ್ರೀಡೆಗಳು ನಡೆಯಬೇಕಾದರೆ ನಗರದಿಂದ ಸುಮಾರು 35 ಕಿ.ಮೀ. ದೂರದ ಚಂದರಗಿ ಕ್ರೀಡಾ ಶಾಲೆಗೆ ಹೊಗಬೇಕು. ಆದರೆ ಪ್ರತಿ ವರ್ಷ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೊಗುವದು ಕಷ್ಟ ಆದ್ದರಿಂದ ಕ್ರೀಡಾಕೂಟಗಳು ಮುಗಿಯುವವರಿಗೆ ಬಹಳ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆದರೆ ಸ್ವಾತಂತ್ರ್ಯ ಸಿಕ್ಕು ಸುಮಾರು ವರ್ಷವು ಕಳೆದರು ಯಾವೊಬ್ಬ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸದೆ ಇರವುದು ವಿಪರ್ಯಾಸದ ಸಂಗತಿ.

ತಾಲೂಕು ಕ್ರೀಡಾಂಗಣವಿಲ್ಲದೆ ಪ್ರತಿವರ್ಷ ಕ್ರೀಡಾ ವಿದ್ಯಾರ್ಥಿಗಳು ಅಲ್ಲಿ ಇಲ್ಲಿ ಅಲೆದಾಡುವ ಸ್ಥಿತಿ ಉಂಟಾಗಿದೆ. ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಾತ್ರ ಕ್ರೀಡಾಂಗಣಗಳಿವೆ. ಆದರೆ ನಗರದೊಳಗೆ ಸುಮಾರು 30 ಕ್ಕೂ ಹೆಚ್ಚು ಪ್ರಾಥಮಿಕ ಶಾಲೆ, ಹಾಗೂ 10 ಪ್ರೌಢ ಶಾಲೆಗಳು 6 ಕಾಲೇಜಗಳಿವೆ ಸಾವಿರಾರು ಕ್ರೀಡಾ ಪಟುಗಳಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಹ ಸಾಮರ್ಥ್ಯ ಹೊಂದಿರುವ ಕ್ರೀಡಾ ಪಟುಗಳಿದ್ದಾರೆ. ಸೂಕ್ತ ಸ್ಥಳಾವಕಾಶವಿರದೆ ಪರದಾಡುವಂತಾ ಸ್ಥಿತಿ ಉಂಟಾಗಿದೆ. ಇದರಿಂದ ತಾಲೂಕಿನಲ್ಲಿ ಕ್ರೀಡೆಯಿಂದ ವಿದ್ಯಾರ್ಥಿಗಳು ಹಿಂದೆ ಸರಿಯುವಂತ ಪರಿಸ್ಥಿತಿ ಉದ್ಬವವಾಗಿದೆ.

ಶಿಕ್ಷಣ ಇಲಾಖೆ ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು ಮತ್ತು 6 ರಿಂದ 10ನೇಯ ತರಗತಿಯವರೆಗೆ ಪಠ್ಯಯನ್ನು ಹೊರತಂದಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಾಯೋಗಿಕ ಪರೀಕ್ಷೆಯನ್ನು ತಗೆಕೊಂಡು ಕ್ರೀಡೆಗಳ ಕ್ರೀಡಾಂಗಣಗಳ ಮಾಹಿತಿ ತಿಳಿಸಬೇಕಾಗಿದೆ, ಅಂದಾಗ ಮಾತ್ರ ದೈಹಿಕ ಶಿಕ್ಷಣದಲ್ಲಿ ಬದಲಾವಣೆ ತರಲು ಸಾಧ್ಯ. ಉತ್ತಮ ಕ್ರೀಡಾ ಪಟುಗಳನ್ನು ನಿರ್ಮಾಣ ಮಾಡುವ ಉತ್ತಮ ತರಬೇತಿ ಹೊಂದಿದ್ದ ದೈಹಿಕ ಶಿಕ್ಷಕರಿದ್ದಾರೆ. ಏನಾದರು ಸಾಧನೆ ಮಾಡಬೇಕು ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆಯಬೇಕು, ಅವರ ಶಾಲೆಯ ಮಕ್ಕಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅವರನ್ನು ಗುರುತಿಸು ಕಾರ್ಯವನ್ನು ಮಾಡಬೇಕು ಎಂಬ ಹಂಬಲದಲ್ಲಿರುವ ದೈಹಿಕ ಶಿಕ್ಷಕರಿಗೆ ತಾಲೂಕಿನಲ್ಲಿ ಕ್ರೀಡಾಂಗಣ ಇಲ್ಲದಿರುವುದರಿಂದ ಬರಿ ಕಾಟಾಚಾರಕ್ಕೆ ಕ್ರೀಡಾಕೂಟವನ್ನು ಮಾಡುವಂತ ಪರಿಸ್ಥಿತಿ ಉಂಟಾಗಿದೆ.

ನಗರದಲ್ಲಿ ಖುದರೆ ಬೈಲ್‌ ಜಾಗಾ ಖಾಲಿ ಇದೆ, ಆದರೆ ಎರಡು ಪ್ರಮುಖ ಸಂಸ್ಥೆಗಳ ಜಗಳದಲ್ಲಿ ಮೂರನೆಯವರಿಗರ ಲಾಭ ಎಂಬತೆ ಇಂದು ಹಂದಿ, ನಾಯಿ, ಧನಗಳು ವಾಸಿಸಲು ಯೋಗ್ಯವಾದ ಸ್ಥಳವಾಗಿದೆ ಮತ್ತು ಅಕ್ಕ ಪಕ್ಕದಲ್ಲಿ ವಾಸಿಸುವ ಜನರಿಗೆ ಬಯಲು ಬಹಿರ್ದೆಸೆಯ ಪ್ರಸಿದ್ಧ ಸ್ಥಳವಾಗಿದೆ. ಹಾಗೂ ಅನೇಕ ದೊಡ್ಡ ಪೈಪುಗಳು ರಾಶಿಗಳು ಬಿದ್ದಿವೆ, ಎದುರಿಗೆ ಮೀನಿ ವಿಧಾನ ಸೌಧ ಮತ್ತು ಅಥಿತಿ ಗೃಹ ಕೂಡಾ ಇದೆ. ಆದರೆ ಇತ್ತ ಕಡೆ ಯಾರು ಗಮನಹರಿಸುತ್ತಿಲ್ಲ.

—-ಬಾಕ್ಸ್‌—–

ನಮಗೆ ಯಾರಾದರು ಸೂಕ್ತ ಸ್ಥಳವನ್ನು ನೀಡಿದರೆ ಕ್ರೀಡಾ ಇಲಾಖೆ ವತಿಯಿಂದ ಸುಮಾರು 80 ಲಕ್ಷ ಹಣವನ್ನು ಕ್ರೀಡಾಂಗಣ ನಿರ್ಮಾಣ ಮಾಡಲು ದೊರಕಿಸಿಕೊಡುತ್ತವೆ. ತಾಲೂಕಿನಲ್ಲಿ ಕ್ರೀಡಾಂಗಣ ವಿಲ್ಲದೆ ಇರುವುದರಿಂದ ನಮಗೂ ಬಹಳ ನೋವಾಗಿದೆ ನಮ್ಮ ದೈಹಿಕ ಶಿಕ್ಷಕರಿಗೆ ತೊಂದರೆಯಾಗುತ್ತಿದೆ.

ಆರ್‌. ಎಸ್‌. ವಾಸನದ.

ದೈಹಿಕ ಶಿಕ್ಷಣ, ವಿಷಯಪರಿವಿಕ್ಷಕರು.

—————

ತಾಲೂಕಿನಲ್ಲಿ ಒಂದು ಸುಂದರವಾದ ಕ್ರೀಡಾಂಗಣ ನಿರ್ಮಾಣ ಮಾಡು ಹಂತದಲ್ಲಿದ್ದವೆ, ಸೂಕ್ತವಾದ ಸ್ಥಳ ಪರಿಶೀಲನೆ ಮಾಡಿದ್ದೆವೆ ಅದನ್ನು ಸರಿ ಮಾಡಿ ಒಂದು ಕ್ರೀಡಾಂಗಣ ಬರುವ ದಿನಗಳಲ್ಲಿ ನಿರ್ಮಾಣ ಮಾಡಲಾಗುವದು.

ಅಶೋಕ ಪಟ್ಟಣ ಶಾಸಕರು,

ಮುಖ್ಯ ಸಚೇತಕರು ಕರ್ನಾಟಕ ಸರಕಾರ.

—————

ಕ್ರೀಡೆಯಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂಬ ಆಸೆ ಇದೆ ಆದರೆ ನಮ್ಮ ತಾಲೂಕಿನಲ್ಲಿ ಒಂದು ಕ್ರೀಡಾಂಗಣವಿಲ್ಲ ಆದ್ದರಿಂದ ನಾವು ಕ್ರೀಡಾಕೂಟದಿಂದ ವಂಚಿತರಾಗುತ್ತಿದ್ದವೆ ಮುಂದಿನ ದಿನಗಳಲ್ಲಿ ಕ್ರೀಡೆಗಳು ಉಳಿಯಬೇಕಾದರೆ ನಮ್ಮ ತಾಲೂಕಿಗೆ ನಮಗೆ ಒಂದು ಸುಂದರವಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಿಸಿಕೊಡಬೆಕೇಂದು ಅವರಿಗೆ ಕಳಕಳಿಯಿಂದ ಕೇಳಿಕೊಳ್ಳುತ್ತವೆ.

ಕರೀಮಸಾಬ್‌ ಪೈಲವಾನ

ಕ್ರೀಡಾಪಟು (ಯುನಿರ್ವಸಿಟಿ ಬ್ಲೂ )

loading...

LEAVE A REPLY

Please enter your comment!
Please enter your name here