ದಾಂಡೇಲಿಯಲ್ಲಿ ಈದ್ ಮಿಲಾದ್ ಸಂಭ್ರಮ

0
19
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಮುಸ್ಲಿಂರ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮುಸ್ಲಿಂ ಧರ್ಮ ಬಾಂಧವರು ಪರಸ್ಪರ ಶುಭಾಶಯ ಹಂಚಿಕೊಂಡರು.

ಈದ್ ಮಿಲಾದ್ ಪ್ರಯುಕ್ತ ನಗರದ ಜನರು ಜಾತಿ, ಮತ, ಬೇಧವಿಲ್ಲದೆ ಪರಸ್ಪರ ಸೌಹಾರ್ಧತೆಯಿಂದ ಆಚರಿಸಿಕೊಂಡ ಪರಿಯಂತು ವಿಶೇಷವಾದುದು. ಈದ್ ಮಿಲಾದ್ ನಿಮಿತ್ತ ದಾಂಡೇಲಿ ನಗರದಾದ್ಯಂತ ವಿವಿಧ ಕಡೆಗಳ ದರ್ಗಾ, ಮಸೀದಿಗಳ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ನಗರಾದ್ಯಂತ ಸಂಚರಿಸಿ ಸಂಚಲವನ್ನು ಮೂಡಿಸಿತ್ತು.

ನಗರದ ಮೂಲೆ ಮೂಲೆಗಳಿಂದ ಬಂದ ಮೆರವಣಿಗೆಯು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡು ನಂತರ ಬಾಂಬೆಚಾಳದ ಮಸೀದಿಯಲ್ಲಿs ಸೇರಿ ಸಾಮೂಹಿಕ ಪ್ರಾರ್ಥನೆಯ ನಂತರ ಸಂಪನ್ನಗೊಂಡಿತು. ಈ ಅಭೂತ ಪೂರ್ವ ಮೆರವಣಿಗೆಯಲ್ಲಿ ನಗರ ಮುಸ್ಲಿಂ ಧರ್ಮ ಗುರುಗಳು, ಮುಸ್ಲಿಂ ಪ್ರಮುಖರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ವಿವಿಧ ಸ್ಥಬ್ದ ಚಿತ್ರಗಳು ಅಸಂಖ್ಯಾತ ನೋಡುಗರನ್ನು ಆಕರ್ಷಿಸಿತು.

ಸೌಹಾರ್ಧತೆಯ ಕೊಂಡಿ ನಗರದ ಆಟೋ, ಟೆಂಪೆ, ಟ್ರಾಕ್ಸಿ ಚಾಲಕರು :
ನಗರದಲ್ಲಿರುವ ಆಟೋ, ಟೆಂಪೆÇ, ಟ್ರಾಕ್ಸಿ ಚಾಲಕರಂತು ಎಲ್ಲ ಧರ್ಮದ ಹಬ್ಬಗಳನ್ನು ತಮ್ಮ ತಮ್ಮ ವಾಹನ ನಿಲ್ದಾಣದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡು ನಗರದಲ್ಲಿ ಭಾವೈಕ್ಯತೆಯನ್ನು ಮೆರೆಯುತ್ತಿರುವುದು ಇಲ್ಲಿನ ವಿಶೇಷ. ಈ ಬಾರಿಯೂ ಪವಿತ್ರ ಈದ್ ಮಿಲಾದ್ ಹಬ್ಬವನ್ನು ತಮ್ಮ ತಮ್ಮ ವಾಹನ ನಿಲ್ದಾಣಗಳಲ್ಲಿ ಆಚರಿಸಿಕೊಂಡರು. ಸ್ಥಬ್ದ ಚಿತ್ರಗಳನ್ನು ನಿರ್ಮಿಸಿ, ಪೆಂಡಾಲ್ ಹಾಕಿ, ವಿದ್ಯುತ್ ದೀಪಾಲಂಕಾರಗಳಿಂದ ಪ್ರತಿಯೊಂದು ನಿಲ್ದಾಣಗಳು ಕಂಗೊಳಿಸುತ್ತಿತ್ತು. ಕೆಲವು ಕಡೆಗಳಲ್ಲಿ ಸಾರ್ವಜನಿಕರಿಗಾಗಿ ತಂಪು ಪಾನೀಯದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

loading...