ದಿ.12 ರಂದು ಪೈಗಂಬರ್‌ ಜಯಂತಿ ಆಚರಣೆ

0
24
loading...

ಜಮಖಂಡಿ: ನಗರದ ಮೊಮೀನ ಗಲ್ಲಿಯಲ್ಲಿ ಜಶ್ನೆ ಇದ್‌-ಎ-ಮಿಲಾದುನ್ನಬಿ ಆಡಳಿತ ಮಂಡಳಿ ಆಶ್ರಯದಲ್ಲಿ ಮಹಮ್ಮದ ಪೈಗಂಬರ ಜಯಂತಿ ನಿಮಿತ್ತ ಡಿಸೆಂಬರ್‌ 11 ರಂದು ಚಿಕ್ಕ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ನಡೆಯಲಿದೆ.

ಡಿಸೆಂಬರ್‌ 12ರಂದು ಬೆಳಗ್ಗೆ 8 ಗಂಟೆಗೆ ನಗರದ ಶಾಲಂ ಗೇಟ್‌ದಿಂದ ಪ್ರಾರಂಭಗೊಳ್ಳುವ ಭವ್ಯ ಮೆರವಣಿಗೆಯು ನಗರದ ಹನುಮಾಕ ಚೌಕ, ಸುವರ್ಣ ಚಿತ್ರಮಂದಿರ, ಅಶೋಕ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ ವೃತ್ತ, ಕಿರಾಣಾ ಬಜಾರ ಮೂಲಕ ಸಂಚರಿಸಿ ಮೋಮಿನ ಗಲ್ಲಿಯಲ್ಲಿ ನಿರ್ಮಾಣಗೊಂಡ ವೇದಿಕೆಗೆ ತಲುಪಲಿದೆ.

ನಂತರ 11 ಗಂಟೆಗೆ ಜರುಗುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜನಾಬ ಮಹ್ಮದಲಿ ಹಾಜಿ ಮುಬಾರಕ ಖಾಜಿ ಹಾಗೂ ಮುತ್ತಿನಕಂತಿ ಹಿರೇಮಠದ ಶ್ರೀ ಷ.ಬ್ರ. ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಮೌಲಾನಾ ಹಾಜಿ ಮುರ್ತುಜಾ ಹಸನ ರಝವಿ ಅಧ್ಯಕ್ಷತೆ ವಹಿಸುವರು.

ಶಾಸಕ ಸಿದ್ದು ನ್ಯಾಮಗೌಡ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ವಿ.ಪ. ಸದಸ್ಯ ಜಿ.ಎಸ್‌. ನ್ಯಾಮಗೌಡ, ಶ್ರೀಶೈಲ ದಳವಾಯಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ ಹಾಗೂ ಆರ್‌.ಎಂ.ಕಲೂತಿ, ಡಾ. ಉಮೇಶ ಮಹಾಬಳಶೆಟ್ಟಿ, ಅರ್ಬನ ಬ್ಯಾಂಕ ಉಪಾಧ್ಯಕ್ಷ ರುದ್ರಯ್ಯ ಕರಡಿ, ಕಾಡು ಮಾಳಿ, ಇಲಾಹಿ ಕಂಗನೊಳ್ಳಿ, ಶ್ಯಾಮ ಘಾಟಗೆ ಹಲವರು ಗಣ್ಯರು ಆಗಮಿಸುವರು.

ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರಾಜು ಪಿಸಾಳ ಹಾಗೂ ರಾಜ್ಯ ಜವಳಿ ನಿಗಮ ಮಂಡಳಿಯ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಅವರಿಗೆ ವಿಶೇಷ ಸನ್ಮಾನ ಜರುಗಲಿದೆ ಎಂದು ಜಶ್ನೆ ಇದ್‌-ಎ-ಮಿಲಾದುನ್ನಬಿ ಸಂಸ್ಥೆಯ ಅಧ್ಯಕ್ಷ ಶಕೀಲ ರಾಯಭಾಗ ಹೇಳಿದರು. ಇದೇ ಸಂದರ್ಭದಲ್ಲಿ ದಿಲಾವರ ಶಿರೋಳ, ರಫೀಕ ಬಾರಿಗಡ್ಡಿ, ಆಜಂ ಅವಟಿ, ಇಲಾಹಿ ಆಸಂಗಿ, ಇಲಿಯಾಸ ಮುಜಾವರ, ಎಚ್‌.ಡಿ. ಮುಧೋಳ, ನಿಸಾರ ಮೋಮಿನ, ಸೈಯ್ಯದ ಬಿಜಾಪೂರ, ಅಬುಬಕ್ಕರ ಮುಜಾವರ, ಅನ್ವರ ಮೋಮಿನ, ಅಶ್ಪಾಕ ಪಕಾಲಿ ಸೇರಿದಂತೆ ಹಲವರು ಇದ್ದರು.

loading...

LEAVE A REPLY

Please enter your comment!
Please enter your name here