ನಗರಸಭೆಗೆ ಹೆಚ್ಚಿನ ಅನುದಾನ ಬಿಡುಗಡೆ: ಸಚಿವ ಮಹಾದೇವ ಪ್ರಸಾದ

0
50
loading...

ಕನ್ನಡಮ್ಮ ಸುದ್ದಿ-ನಿಪ್ಪಾಣಿ: ರಾಜ್ಯ ಸರಕಾರದ ವತಿಯಿಂದ ನಿಪ್ಪಾಣಿ ನಗರಸಭೆಗೆ ನಗರೋತ್ಥಾನ ಯೋಜನೆಯಡಿ 25 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವುದರೊಂದಿಗೆ ನಿಪ್ಪಾಣಿ ನಗರಸಭೆಗೆ ಸಾಕಷ್ಟು ನಿಧಿ ಒದಗಿಸಲಾಗುವುದು ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌.ಮಹಾದೇವ ಪ್ರಸಾದ್‌ ಭರವಸೆ ನೀಡಿದರು.

ನಿಪ್ಪಾಣಿ ನಗರಸಭೆಗೆ ಭೇಟಿ ನೀಡಿ ಅವರು ಮಾತನಾಡಿ, ಗುಣಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಸಚಿವರಿಗೆ ಮತ್ತು ಸಂಸದೀಯ ಕಾರ್ಯದರ್ಶಿ ಶಾಸಕ ಗಣೇಶ ಹುಕ್ಕೇರಿ ಅವರನ್ನು ಸ್ವಾಗತಿಸಿದರು. ಅಧ್ಯಕ್ಷ ವಿಲಾಸ ಗಾಡಿವಡ್ಡರ ಮಾತನಾಡಿ, ನಗರದಲ್ಲಿ ಕೈಗೊಳ್ಳಲಾಗುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಕೆಲವೇ ದಿನಗಳಲ್ಲಿ ಪಟ್ಟಣದಲ್ಲಿ 24/7 ಕುಡಿಯುವ ನೀರು ಪೊರೈಕೆ ಮಾಡಲಾಗವುದು. ಡಬ್ಬಾ ಅಂಗಡಿಕಾರರಿಗೆ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಗಳು ಪೂರ್ಣತ್ವದೆಡೆ ಸಾಗಿದೆ ಎಂದು ಮಾಹಿತಿ ನೀಡಿದರು.ಸಚಿವರು ಪಟ್ಟಣದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೆಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಸುನೀಲ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಸಂಜಯ ಸಾಂಗಾವಕರ, ಸದಸ್ಯರಾದ ಬಾಳಾಸಾಹೇಬ ದೇಸಾಯಿ, ರಾಜೇಂದ್ರ ಚವ್ಹಾಣ, ಅನೀಸ ಮುಲ್ಲಾ, ಜುಬೇರ ಬಾಗಬಾನ, ಧನಾಜಿ ನಿರ್ಮಳೆ, ಮುನ್ನಾ ಕಾಜಿ, ನಂದಕೀಶೋರ ಕುಂಭಾರ, ಕಿರಣ ಕೊಕರೆ, ನಮ್ರತಾ ಕಮತೆ, ನೀತಾ ಲಾಟಕರ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here