ನಾಗೂರ ರಸ್ತೆ ಸುಧಾರಣೆಗೆ ವಾಲಿಕಾರ ಆಗ್ರಹ

0
26
loading...

ಬಸವನಬಾಗೇವಾಡಿ : ತಾಲೂಕಿನ ನಾಗೂರ ಗ್ರಾಮದ ಸಂಪರ್ಕ ರಸ್ತೆಯ ಸುಧಾರಣೆ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳಬೇಕೆಂದು ಮಣ್ಣೂರ ಗ್ರಾಪಂ ಅಧ್ಯಕ್ಷ ಮಹೇಶ ಮುಳವಾಡ, ಉರ್ದು ಪ್ರಾಥಮಿಕ ಶಾಲೆ ಎಸ್‌.ಡಿ.ಎಂ.ಸಿ ಅಧ್ಯಕ್ಷ ರಾಜೇಸಾಬ ವಾಲಿಕಾರ ಆಗ್ರಹಿಸಿದ್ದಾರೆ.

ತಾಲೂಕಿನ ನಾಗೂರ ಗ್ರಾಮದ ಶ್ರೀಯೋಗಿ ಚಕ್ರವರ್ತಿ ಯಮನೂರೇಶ್ವರ ದೇವಾಲಯ ಜಾತ್ರೆ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದು 25ಸಾವಿರಕ್ಕೂ ಹೆಚ್ಚು ಜನತೆ ಪಾಲ್ಗೊಳ್ಳುತ್ತಿದ್ದು ಈ ವರ್ಷ ನೂತನ ಕಟ್ಟಡ ಉದ್ಘಾಟನೆ ಹಾಗೂ ಬೃಹತ್‌ ಧಾರ್ಮಿಕ ಕಾರ್ಯಕ್ರಮವನ್ನು ಮುಂಬರುವ 2017ರಲ್ಲಿ ಆಯೋಜಿಸಲಿದ್ದು 50ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಈಗಾಗಲೇ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಸೇರಿದಂತೆ ಜನತೆಗೆ ತೀವ್ರ ತೊಂದರೆಯಾಗುತ್ತಿದ್ದು ರಸ್ತೆ ಹದಗೆಟ್ಟ ಕುರಿತಾಗಿ ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಕೂಡಾ ನಡೆದಿದ್ದು ತಕ್ಷಣ ನಾಗೂರ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here