ನಾಲತವಾಡ ಪಟ್ಟಣದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ತಬಲಾ ಮೂಲಕ ಹಾಡುಗಳನ್ನು ಹಾಡಿದ ಬಾವೂರ ಗ್ರಾಮದ ಲಾಳೇಸಾ ಕಾಳಗಿ. — ಅಂಧ ವೃದ್ದ 60 ವರ್ಷದ ಲಾಳೇಸಾಬ ಅವರ

0
26
loading...

ಮೈಬೂಬ ಕುಳಗೇರಿ
ನಾಲತವಾಡ.13 ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಸಂಗೀತದಲ್ಲಿ ಪ್ರಭಾವಿತರಾದ ಮುದ್ದೇಬಿಹಾಳ ತಾಲೂಕಿನ ಬಾವೂರ ಗ್ರಾಮದ ಹುಟ್ಟು ಕುರುಡರು 60 ವರ್ಷದ ಇಳಿವಯಸ್ಸಿನ ಲಾಳೇಸಾಬ ಕಾಳಗಿ ಎಂಬುವರು ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಗೆ ಆಗಮಿಸಿ ಗಮನ ಸೆಳೆದರು. ಸಂಪೂರ್ಣ ಕಣ್ಣು ಕಾಣಿಸದಿದ್ದರೂ ತಮ್ಮ ಹೆಗಲಲ್ಲಿ ತಬಲಾ ಇತರೇ ಸಂಗೀತದ ಸಾಮಾನುಗಳನ್ನು ಹೊತ್ತು ಶಾಲಾ ಮಕ್ಕಳಿಗೆ ಸಂಗೀತದ ರಸದೌತಣ ನೀಡಲು ಬಂದರು. ಹಾಡುವದುಕ್ಕೂ ಮುನ್ನ ಕೆಲ ಸಮಯ ತಮ್ಮ ಪರಿಚಯ ಹಂಚಿಕೊಂಡರು. ಹುಟ್ಟು ಕುರುಡರಾದರೂ ಎದೆಗುಂದದೆ ಸಾಧನೆ ಮಾಡುವ ಛಲ ಹೊಂದಿ ಸಂಗೀತ ಕ್ಷೇತ್ರವನ್ನು ಆಯ್ದುಕೊಂಡೆ ಎಂದರು. ಚಿಕ್ಕಂದಿನಿಂದಲೇ ಸಂಗೀತಕ್ಕೆ ಹೊಂದಿಕೊಂಡ ಲಾಳೇಸಾಬ ಕಾಳಗಿ ಅವರು ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಸಂಗೀತ ಶಾಲೆಯಲ್ಲಿ ಹಾಗೂ ತಾಳಿಕೋಟಿ ಖಾಸ್ಗತೇಶ್ವರ ಮಠದಲ್ಲಿ ಸುಮಾರು 40 ವರ್ಷಗಳ ಕಾಲ ವಿದ್ಯೆ ಕಲಿತಿದ್ದು ಅದೂ ಬ್ರಹ್ಮಿಲಿಪಿ ಮೂಲಕ ಎಂದರು.
ಈಚೆಗೆ 30 ವರ್ಷಗಳಿಂದ ರಾಜ್ಯದ ನಾನಾ ಕಡೆಗಳಲ್ಲಿ ನಾಟಕ ಕಂಪನಿಗಳಲ್ಲಿ ಸಂಗೀತ ನೀಡಿದ್ದ ಲಾಳೇಸಾಬ ಗುಲಬರ್ಗಾ, ರಾಯಚೂರ, ಬಾಗಲಕೋಟ ವಿಜಯಪುರ ಹಾಗೂ ಗದಗ ಸೇರಿದಂತೆ ಇನ್ನೂ ಹಲವಡೆ ಅಂಧನಿದ್ದರೂ ಚಿಂತಿಸಿದೇ ಹಲವು ಕಾರ್ಯಕ್ರಮಗಳಲ್ಲಿ ತಬಲಾ ನುಡಿಸಿ ಮನ ಸೆಳೆದಿರುವದಾಗಿ ತಿಳಿಸಿದ ಅವರು ಇದೇ ಕಾಯಕದಿಂದ ಅಲ್ಲಲ್ಲಿ ನೀಡುವ ಕಾರ್ಯಕ್ರಮದ ಅಲ್ಪ ಕಾಣಿಕೆಯಿಂದ ಜೀವನ ಸಾಗಿಸುತ್ತೀದ್ದೇನೆ ಎಂದರು. ಸಂದ ಪ್ರಶಸ್ತಿಗಳು: ಸಂಗೀತ ಹಾಗೂ ನಾಟಕ ಇತರೇ ಹಲವು ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ ಲಾಳೇಸಾಬ ಕನ್ನಡ ಮತ್ತು ಸಂಸೃತಿ ಇಲಾಖೆಯಿಂದ, ನಿಡಗುಂದಿಯ ಹಿರೇಮಠ, ತಾಳಿಕೋಟಿಯ ಖಾಸ್ಗತೇಶ್ವರ ಮಠದ, ಘತ್ತರಗಿಯ ಭಾಗ್ಯವಂತಿ ಮಠದಿಂದ ಕೆಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಮನರಂಜಿಸಿದ ಅಜ್ಜ: ನಂತರ ಶಾಲಾ ಕೊಠಡಿಗಳಿಗೆ ತೆರಳಿದ ಲಾಳೇಸಾಬ ತಬಲಾ ಮೂಲಕ ಜಾನಪದ, ಭಾವಗೀತೆಗಳಾದ ಗುಣವಂತಿ ಹೆಣ್ಣು, ಹಕ್ಕಿಗೂಡು ಬಿಟ್ಟಮೇಲೆ, ನಿಂತ ಕುಡಿ ಬಾಗಿಲಲ್ಲಿ ನಿನಗಾಗಿ ಯಾವ ಹಾಡು ಹಾಡಲಿ, ಹಾಸ್ಯ ಜನಪದ, ಕುಲಗೋತ್ರ, ಹೈಬ್ರಿಡ್‌ ಜೋಳ ಬಂತಲ್ಲ, ಬಾಳ ದಿನಕ ಬಂದ್ರಿ, ದಿಬ್ಬಲ ಮನಿ ಕರಬಸವ್ವ ಹಾಗೂ ಹಬ್ಬ ಮಾಡ್ಯಾಳ ಹುಬ್ಬುಬ್ಬಿ ಎಂಬ ಹಾಡುಗಳನ್ನು ಮೈದೂಡಿಸಿಕೊಂಡಿದ್ದ ಲಾಳೇಸಾಬ ತಮ್ಮ ತಬಲಾ ಮೂಲಕ ಹಾಡಿ ವಿದ್ಯಾರ್ಥಿಗಳನ್ನು ತಲೆ ಅಲ್ಲಾಡಿಸುವಂತೆ ಮೋಡಿ ಮಾಡಿ ಹಾಡಿದರು.

loading...

LEAVE A REPLY

Please enter your comment!
Please enter your name here