ಪಡಿತರ ಆಹಾರ ಧಾನ್ಯ ವಿತರಣೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ

0
33
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ಪಟ್ಟಣದಲ್ಲಿ ಬಹಳಷ್ಟು ಜನತೆಯು ಕಡುಬಡವರಿದ್ದು, ದಿನನಿತ್ಯದ ಜೀವನೋಪಾಯಕ್ಕಾಗಿ ಪಡಿತರ ಆಹಾರ ಧಾನ್ಯದ ಮೇಲೆಯ ಅವಲಂಬಿತವಾಗಿವೆ ಆದರೆ ಡಿಶೆಂಬರ ತಿಂಗಳ ಮುಗಿಯುತ್ತಾ ಬಂದರೂ ಸಹಿತ ಇನ್ನೂವರೆಗೂ ಪಡಿತರ ಅಕ್ಕಿ, ಸಕ್ಕರೆ, ಉಪ್ಪು, ಎಣ್ಣೆ ಸಿಕಿಲ್ಲ ಹೀಗಾದರೆ ನಾವೂ ಬದುಕುವದಾದರು ಹೇಗೆ ಹೊಟ್ಟೆಗೆ ತಣ್ಣಿರೇ ಗತಿಯಾಗಿದೆ ಎಂದು ಆರೋಪಿಸಿ ಕಳೆದ ಮೂರು ನಾಲ್ಕು ದಿನಗಳಿಂದ ಪಟ್ಟಣದ ಸಾರ್ವಜನಿಕರು ತಮ್ಮಲ್ಲಿ ಬಂದು ಮನವಿ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಶೀಘ್ರದಲ್ಲಿ ತ್ವರಿತವಾಗಿ ರೇಷನ್ ನೀಡಬೇಕೆಂದು ಆಗ್ರಹಿಸಿ 4ನೇ ವಾರ್ಡಿನ ಮಹಿಳೆಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಬುಧವಾರ ಪಟ್ಟಣದ ಮ್ಯಾಗೇರಿ ಓಣಿಯಿಂದ ಪ್ರತಿಭಟನಾ ರ್ಯಾಲಿ ಮೂಲಕ ನೆಹರು ವೃತ್ತದಲ್ಲಿ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ನಂತರ ತಹಶಿಲದಾರ ಕಚೇರಿಗೆ ತೆರಳಿ ಶಿರಸ್ತೆದಾರ ಕೆ.ಬಿ.ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಪಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗರಾಜ ಲಕ್ಕುಂಡಿ ಮಾತನಾಡಿ, ಪಡಿತರ ಚೀಟಿಗಳ ಆಹಾರ ದಾನ್ಯವನ್ನು ನಂಬಿಕೊಂಡು ಬಹಲಷ್ಟು ಕುಟುಂಬಗಳು ತಮ್ಮ ಜೀವನ ನಿರ್ವಃನೆಯನ್ನು ಸಾಗಿಸುತ್ತಿದ್ದಾರೆ. ಆದರೆ ಈ ತಿಂಗಳಲ್ಲಿ ಆಹಾರ ಧಾನ್ಯ ವಿತರಣೆ ಮಾಡುವಲ್ಲಿ ವಿಳಂಬವಾಗಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು, 2 ದಿನಗಳೊಳಗಾಗಿ ಆಹಾರ ಧಾನ್ಯ ವಿತರಣೆ ಮಾಡಲಿಲ್ಲವಾದರೆ ತಹಶೀಲದಾರ ಕಾರ್ಯಾಲಯಕ್ಕೆ ಬೀಗ ಜಡಿದು ಅನಿರ್ಧಿಷ್ಟ ಮುಸ್ಕರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಶಿರಸ್ತೆದಾರ ಕೆ.ಬಿ.ಬಡಿಗೇರ ಮಾತನಾಡಿ, ಸಂಗ್ರಹ ತೋರಿಸುವಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆ ತಲೆದೊರಿದೆ. ಇದನ್ನು ಸರಿಪಡಿಸಿ ಶನಿವಾರದೊಳಗೆ ಪಡಿತರ ಹಂಚಲು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಅಕ್ಬರಸಾಬ ಯಾದಗೇರಿ, ನಜೀರ ಡಂಬಳ, ಮುತ್ತು ಬಾವಿಮನಿ, ರಾಜೇಸಾಬ ಲಕ್ಷ್ಮೇಶ್ವರ, ಅಮೀನ ಕಾರಬೂದಿ, ಇಬ್ರಾಹಿಂ ಶಿವಳ್ಳಿ, ಮಹೇಶ ಕಲ್ಲಪ್ಪನವರ, ಯಲ್ಲಪ್ಪ ಗೂಳಪ್ಪನವರ, ಕರಿಯಪ್ಪ ಬಳ್ಳುಟಗಿ, ರಾಮನಗೌಡ ಮರಿಗೌಡ್ರ, ಮನ್ಸೂರ ಮಕಾನದಾರ, ಬಸವರಾಜ ಚಿಕ್ಕತೋಟದ, ದೇವಕ್ಕ ವರವಿ, ಮಲ್ಲವ್ವ ಮಾಬಳಿ, ಅನಸವ್ವ ತುಳಿ, ಗಂಗವ್ವ ಬುಳ್ಳಣವರ, ಹನಮಪ್ಪ ವಗ್ಗರ, ಪರಶುರಾಮ ಹಾಲಪ್ಪನವರ, ಜಗದೀಶ ಇಟ್ಟೆಕಾರ, ಮಾದೇವಪ್ಪ ವರವಿ, ರಮೇಶ ಮಲಕಶೆಟ್ಟಿ ಪ್ರವೀಣ ಹಾಲಪ್ಪನವರ, ಲಕ್ಷ್ಮವ್ವ ವರವಿ, ಬಸವಣ್ಣವ್ವ ಕಳ್ಳಿಮನಿ, ಯಲ್ಲವ್ವ ತುಳಿ, ಫಕ್ಕೀರವ್ವ ಛಬ್ಬಿ, ನಿಂಗವ್ವ ರಟ್ಟಿಹಳ್ಳಿ, ರಂಗಪ್ಪ ಗುಡಿಮನಿ ಸೇರಿದಂತೆ ನೂರಾರು ಸಾರ್ವಜನಿಕರು ಪಾಲ್ಗೋಂಡಿದ್ದರು.

loading...