ಪಾರವಾಡೇಶ್ವರ ಮಠದಲ್ಲಿ ದತ್ತ ಜಯಂತಿ ಸಂಪನ್ನ

0
26
loading...

ಖಾನಾಪುರ: ತಾಲೂಕಿನ ಪಾರವಾಡ ಗ್ರಾಮದ ಪಾರವಾಡೇಶ್ವರ ಮಠದಲ್ಲಿ ಈಚೆಗೆ ದತ್ತ ಜಯಂತಿ ಉತ್ಸವ ಶೃದ್ಧಾ ಭಕ್ತಿಗಳಿಂದ ನಡೆಯಿತು. ಜಯಂತಿಯ ಅಂಗವಾಗಿ ಮಠದ ಆವರಣದಲ್ಲಿ ಧರ್ಮ ಧ್ವಜಾರೋಹಣ, ಪ್ರಾರ್ಥನೆ, ಉಪನ್ಯಾಸ ಹಾಗೂ ಕೀರ್ತನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಜಯಂತಿ ಉತ್ಸವವನ್ನು ಸದ್ಗುರು ಪಾರವಾಡೇಶ್ವರ ಭಾವು ಮಹಾರಾಜರು ಉದ್ಘಾಟಿಸಿದರು. ನಂತರ ಭಕ್ತರನ್ನುದ್ದೇಶಿಸಿ ನೀಡಿದ ಆಶೀರ್ವಚನದಲ್ಲಿ ಧರ್ಮ ರಕ್ಷಣೆ ಮತ್ತು ರ್ಧ ಪಾಲನೆಯ ಕುರಿತು ಉಪನ್ಯಾಸ ನೀಡಿದರು. ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್‌ ಸಂಸ್ಥಾಪಕ ವಿಠ್ಠಲ ಹಲಗೇಕರ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಸೇರದಂತೆ ಪಾರವಾಡ, ಕಣಕುಂಬಿ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

loading...

LEAVE A REPLY

Please enter your comment!
Please enter your name here