ಪಿ.ಎಂ. ಹೈಸ್ಕೂಲ್‌ನಲ್ಲಿ ಉಚಿತ ಸೈಕಲ್‌ ವಿತರಣೆ

0
20
loading...

ಅಂಕೋಲಾ : ಪಟ್ಟಣದ ಕೆನರಾ ವೆಲ್‌ಫೆರ್‌ ಟ್ರಸ್ಟಿನ ಪಿ.ಎಂ. ಹೈಸ್ಕೂಲ್‌ನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಉಚಿತವಾಗಿ ಸೈಕಲ್‌ನ್ನು ವಿದ್ಯಾರ್ಥಿಗಳಿಗೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ದತ್ತಾ ನಾಯ್ಕ ವಿತರಿಸಿದರು.

ಪ್ರಾಚಾರ್ಯ ಆರ್‌.ವಿ. ಕೇಣಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಬೊಬ್ರುವಾಡ ಗ್ರಾ.ಪಂ. ಸದಸ್ಯ ಗಣೇಶ ಎಂ. ನಾಯ್ಕ, ರೇಷ್ಮಾ ಎನ್‌. ಭೋವಿ, ಹೆಸ್ಕಾಂ ಇಲಾಖೆಯ ಸಲಹ ಸಮಿತಿ ಸದಸ್ಯ ರಾಜು ಟಿ. ಹರಿಕಂತ್ರ ಕಣಗಿಲ್‌ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಕಾಶ ಕುಂಜಿ ಸ್ವಾಗತಿಸಿದರು. ಪ್ರಕಾಶ ಮಲ್ಯ ವಂದಿಸಿ ದರು. ಕ್ಷಮಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎನ್‌.ಸಿ.ಸಿ. ಕಮಾಂಡರ ಜಿ.ಆರ್‌.ತಾಂಡೇಲ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here