ಫಸಲ್‌ ಬಿಮಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ತಹಶೀಲ್ದಾರ ರತ್ನಾಕರ

0
14
loading...

ಚನ್ನಮ್ಮನ ಕಿತ್ತೂರು : ಸರ್ಕಾರ ರೈತರ ಹಿತಕಾಪಾಡುವ ದೃಷ್ಠೀಯಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ರೂಪಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಹಿಂಗಾರು ಹಾಗೂ ಬೆಸಿಗೆ ಅವಧಿಯ ಬೆಳೆಗಳಿಗೆ ಸರ್ಕಾರ ನಿಗದಿ ಪಡಿಸಿದಂತೆ ವಿಮೆ ಕಂತನ್ನು ಪಾವತಿಸಿ ಯೋಜನೆಯನ್ನು ಸದುಪಯೋಗ ಪಡಿಕೊಳ್ಳುವಂತೆ ರೈತರು ಮುಂದಾಗಬೇಕೆಂದು ಕಿತ್ತೂರು ತಹಶೀಲ್ದಾರ ಜಿ..ಕೆ.ರತ್ನಾಕರ ಹೇಳಿದರು.

ಸಮೀಪದ ಬೈಲೂರ ಗ್ರಾಮ ಪಂಚಾಯತಿಯಲ್ಲಿ ಸೋಮವಾರ ರೈತರು ಹಾಗೂ ಗ್ರಾಮಸ್ಥರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಅವರು, ತಾಲೂಕಿನ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ, ರೈತರು ಬೆಳೆದ ಬೆಳೆಗಳು ಪ್ರಕೃತಿ ವಿಕೋಪ, ಕೀಟ, ರೋಗಬಾದೆಯಿಂದ ಅಧಿಸೂಚಿತ ಬೆಳೆಗಳು ವಿಫಲವಾದ ಸಂದರ್ಬದಲ್ಲಿ ರೈತರು ಧೈರ್ಯ ಕಳೆದುಕೊಳ್ಳುವಂತಾಗುತ್ತದೆ.

ಇದನ್ನು ಹೋಗಲಾಡಿಸಲು ಬೆಳೆಗಳ ಮೇಲೆ ವಿಮಾ ರಕ್ಷಣೆ ಮಾಡಿಸಿಕೊಂಡು ತಮ್ಮ ಕೃಷಿ ವರಮಾನವು ಸ್ಥಿರವಾಗಿರುವಂತೆ ಕಾಳಜಿ ವಹಿಸಿಕೊಳ್ಳಬೇಕೆಂದರು. ಪ್ರಭಾರಿ ಕೃಷಿ ಅಧಿಕಾರಿ ಪಿ.P.ೆಇಟ್ನಾಳ ಮಾತನಾಡಿ, ಕಿತ್ತೂರು ಭಾಗದಲ್ಲಿ ಮಳೆ ಆಶ್ರಿತ ಬೆಳೆಗಳಾದ ಗೋಧಿ, ಕಡಲೆ, ಹುರುಳಿ, ಕುಸುಮೆ, ಸೇರಿದಂತೆ ನೀರಾವರಿ ಬೆಳೆಗಳಾದ ಗೋಧಿ, ಕಡಲೆ, ಮುಸುಕಿನ ಜೋಳ, ಹಾಗೂ ತೋಟಗಾರಿಕೆ ಬೆಳೆಗಳಾದ ಟೋಮ್ಯಾಟೊ, ಬೆಳೆಗಳ ಮೇಲೆ ವಿಮೆ ಮಾಡಿಸುವ ಕುರಿತು ತಾಲೂಕಿನ ಗ್ರಾಮಗಳಿಗೆ ಭೇಟಿ ನಡೆಸಲಾಗುವುದು, ಹಾಗೂ ಬೆಳೆಗಳ ವಿಮೆ ಮಾಡಿಸಲು ಡಿ.30 ರಂದು ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದರು.

ಸಹಾಯಕ ಕೃಷಿ ಅಧಿಕಾರಿ ಎಸ್‌.ಎಸ್‌.ಹಂಚಿನಮನಿ, ಕಂದಾಯ ನಿರೀಕ್ಷಕ ಎಮ್‌.ಎ.ಜಕಾತಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಬಸವ್ವ ಕರಡಿಗುದ್ದಿ, ಉಪಾಧ್ಯಕ್ಷೆ ಶಾಂತವ್ವ ಹೊಸಮನಿ, ಪಿಡಿಓ ಜಯರಾಂ ಕಾದ್ರೋಳ್ಳಿ, ಕಾರ್ಯದರ್ಶಿ ಎಸ್‌.ಎಸ್‌.ಹೀರೆಮಠ ಸೇರಿದಂತೆ ರೈತರು ಹಾಗೂ ಇತತರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here