ಬರ ಪರಿಹಾರಕ್ಕೆ ಕೇಂದ್ರ ಸರಕಾರಕ್ಕೆ ಕೈ ಮಾಡುವದು ಪರಿಹಾರವಲ್ಲ:ಪವಿತ್ರಾ ರಾಮಯ್ಯ

0
24
loading...

ಯರಗಟ್ಟಿ 12: ನಗರಕ್ಕೆ ಯಡಿಯೂರಪ್ಪನವರ ಬರ ವೀಕ್ಷಣಾ ತಂಡ ಆಗಮಿಸಿ ಹೊಲಗಳ ವೀಕ್ಷಣೆ ಮಾಡಿತು. ರಾಜ್ಯದಲ್ಲಿ ಬೀಕರ ಬರಗಾಲ ಬಂದಿದ್ದು ಜನರಿಗೆ ಕುಡಿಯಲು ನೀರು ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಕುಡಿಯಲು ನೀರಿನ ಅಭಾವಿದೆ ದನಕರುಗಳಿಗೆ ಮೇವು ಇಲ್ಲದೆ ರೈತರು ಅವುಗಳನ್ನು ಮಾರುತ್ತಿದ್ದಾರೆ. ರಾಜ್ಯ ಸರಕಾರವು ಬರ ವೀಕ್ಷಣೆ ಮಾಡಿದೆ ಆದರೆ ಪರಿಹಾರ ಕೊಡಲಿಲ್ಲಾ ಅದು ಕೇಂದ್ರ ಸರಕಾರದ ಕಡೆ ಕೈ ಮಾಡಿ ತೋರಿಸುವದು ಸರಿಯಲ್ಲ ಎಂದು ಬರ ವೀಕ್ಷಣಾ ತಂಡದ ಮುಖ್ಯಸ್ಥೆ ಪವಿತ್ರಾ ರಾಮಯ್ಯ ಅವರು ಮಾತನಾಡಿದರು. ಇಂದು ರೈತರಷ್ಟೆ ಅಲ್ಲದೇ ಕೃಷಿ ಕಾರ್ಮಿಕರು ಕೂಡಾ ಸಂಕಷ್ಟದಲ್ಲಿದ್ದಾರೆ. ರೈತರು ಎಲ್ಲರಿಗೂ ಅನ್ನ ಹಾಕುವ ಅವನೇಕೆ ಕೈಚಾಚಿ ಬೇಡಬೇಕು, ರೈತರು ಯಾವುದೇ ಕಾರಣಕ್ಕೂ ಆತ್ಮ ಹತ್ಯಮಾಡಿಕೊಳ್ಳಬಾರದು. ರಾಜ್ಯ ಸರಕಾರ ಅವರಿಗಾಗಿ ತಾಲೂಕಿಗೊಂದು ಗೋ ಶಾಲೆ ಮೇವು ಬ್ಯಾಂಕ ಮುಂತಾದವುಗಳ ಅನೂಕುಲ ಮಾಡಿಕೊಡಬೇಕೆಂದರು. ನಾವು ಸಂಪೂರ್ಣ ಸಮೀಕ್ಷೆ ನಿಜ ಸತ್ಯಾಂಶವನ್ನು ನಮ್ಮ ಮುಖಂಡರಾದ ಯಡಿಯೂರಪ್ಪನವರಿಗೆ ತಲುಪಿಸುತ್ತೇವೆ ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂದು ಆಶ್ವಾಸನೆ ಕೊಟ್ಟರು. ಶಾಸಕ ಆನಂದ ಮಾಮನಿ ಮಾತನಾಡಿ ರಾಜ್ಯ ಸರಕಾರ ರಚನೆಯಾಗುವಾಗ ಜಗಜಿವನ ರಾಮ ಅವರ ಹೆಸರಿನಲ್ಲಿ ಅನುದಾನ ಬಿಡುಗಡೆ ಮಾಡುವದಾಗಿ ಹೇಳಿದ್ದರು ಅದು ಇನ್ನುವರೆಗೆ ಬಿಡುಗಡೆ ಮಾಡಲಿಲ್ಲ, ರೈತರ ಬಡ್ಡಿ ಸಾಲಕ್ಕೆ ಕೇಂದ್ರದಿಂದ ಬಂದ ಹಣ ಪೂರ್ತಿ ಬಿಡುಗಡೆ ಮಾಡಲಿಲ್ಲಾ ರೈತರಿಗಾಗಿ ಎನೂ ಮಾಡದ ಈ ಸರಕಾರ ಕಳೆದ ಯಡಿಯೂರಪ್ಪ ಸರಕಾರ ಇದ್ದಾಗ ರೈತರು ಸೊಸೈಟಿಗಳಲ್ಲಿ ಮಾಡಿದ ಸಾಲದ ಬಡ್ಡಿ ಸಂಪೂರ್ಣ ಮನ್ನಾ ಮಾಡಿತ್ತು ಆದರೆ ಈ ಸರಕಾರ ರೈತರು ಎಷ್ಟೋ ಜನ ಆತ್ಮಹತ್ಯ ಮಾಡಿಕೊಂಡರು ಮನ್ನಾ ಮಾಡುತ್ತಿಲ್ಲಾ ಎಂದು ದೊರಿದರು. ಯಡಿಯೂರಪ್ಪನವರು ರಾಜ್ಯಕ್ಕೆ ಹತ್ತು ಬರ ವೀಕ್ಷಣಾ ತಂಡವನ್ನು ಕಳಿಸಿದೆ. ಈ ತಂಡದಲ್ಲಿ ಮನೂಹರ ಕಡೊಲ್ಕರ, ಮಲ್ಲಿಕಾರ್ಜುನ ಸತ್ತಿಗೇರಿ, ಗುರಪ್ಪಾ ಚಿಕ್ಕೋಡಿ, ಗೋವಿಂದಪ್ಪಾ ಕೊಪ್ಪದ ಇದ್ದರು. ಈ ತಂಡವು ಬರಗಾಲ ಪಿಡಿತ ಪ್ರದೇಶವಾದ ಸದಾನಂದ ಹನಬರ ಅವರ ಹೊಲಕ್ಕೆ ಬೆಟ್ಟಿಕೊಟ್ಟು ವಿಕ್ಷನೆ ಮಾಡಿತು. ಆಗ ರಾಜು ವಾಲಿ, ಜಿಲ್ಲಾ ರೈತ ಮೊರ್ಚಾ ಉಪಾ-ಅದ್ಯಕ್ಷ ಶ್ರಿಕಾಂತ ಶಿರಹಟ್ಟಿ, ಮುದಕನಗೌಡಾ ದೇವರಡ್ಡಿ, ಕುಮಾರ ಜಕಾತಿ, ನೀಲಪ್ಪಾ ಬಾರ್ಕಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here