ಬೀರೇಶ್ವರ ಕೋ ಆಪ್‌ ಕ್ರೆಡಿಟ್‌ ಸೊಸೈಟಿಯನ್ನು ಮಾಜಿ ಶಾಸಕ ಸುರೇಶ ಮಾರಿಹಾಳ ಉದ್ಘಾಟಿಸಿದರು

0
34
loading...

ಚನ್ನಮ್ಮನ ಕಿತ್ತೂರು : ವಿವಿಧ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಕ್ಕೋಡಿ ತಾಲೂಕು ಯಕ್ಸಂಬಾದ ಶ್ರೀ ಭೀರೇಶ್ವರ ಸಹಕಾರ ಕ್ರೆಡಿಟ್‌ ಸೊಸೈಟಿಯು 140ನೇ ಶಾಖೆಯನ್ನು ಚನ್ನಮ್ಮನ ಕಿತ್ತೂರಿನ ದಡ್ಡಿಯವರ ಮಳಿಗೆಯಲ್ಲಿ ಮಾಜಿ ಶಾಸಕ ಸುರೇಶ ಮಾರಿಹಾಳ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಭೀರೇಶ್ವರ ಸೊಸೈಟಿಯು ಕರ್ನಾಟಕ ಮಹಾರಾಷ್ಟ್ರ ಸೆರಿದಂತೆ 140ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಠೇವಣಿಗೆ ಶೇ 12ರ ಬಡ್ಡಿದರ ಆಂತರಿಕವಾಗಿ ಕೋರ್‌ ಬ್ಯಾಂಕಿಂಗ್‌, ಅಮೂಲ್ಯ ಮೈಕ್ರೋಲೋನ್ಸ್‌, ಸ್ಕಾಲರ್‌ಶಿಪ್‌ ಯೋಜನೆಗಳು ಹೀಗೆ ಗ್ರಾಹಕರಿಗೆ ಉಪಯುಕ್ತ ಆರ್ಥಿಕ ಸೇವೆಯನ್ನು ಸೊಸೈಟಿ ನೀಡಲು ಬದ್ದವಾಗಿದೆ ಎಂದರು. ಸಹಕಾರ ಚಳುವಳಿಯು ಭಾರತದಲ್ಲಿ 1904 ರಲ್ಲಿ ಸಹಕಾರ ಸಂಘಗಳ ಕಾಯ್ದೆಯನ್ನು ಜಾರಿಗೆ ತರುವುದರೊದಿಗೆ ಪ್ರಾರಂಭವಾಗಿದ್ದು, ತದನಂತರ ದೀರ್ಘ ಪ್ರಯಾಣದ ನಂತರ ಅದು ಹೆಚ್ಚು ಆಸೆಗಳೊಂದಿಗೆ ಮತ್ತು ನಿರೀಕ್ಷಣೆಗಳೊಂದಿಗೆ ಹೊಸ ಸಹಸ್ರಮಾನಕ್ಕೆ ಕಾಲಿರಿಸಿದೆ ಎಂದು ಹೇಳಿದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮತ್ತು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವರಾಜ ಕುಗಟಿ, ಬಸವರಾಜ ಹಡಪದ, ಬಾಲು ಸಾಣಿಕೊಪ್ಪ, ಮಂಜುನಾಥ ಭೀಮರಾಣಿ, ಶ್ರೀಧರ ಇಟಗಿ, ಸುರೇಶ ಜಾಂಗಟಿ ಮತ್ತು ಶಾಖಾ ವ್ಯವಸ್ಥಾಪಕ ಚನ್ನವೀರಪ್ಪ ಸಿಂಗಟಾಲೂರ, ಸೊಸೈಟಿಯ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here