ಬೇಕಾಬಿಟ್ಟಿಯಾಗಿ ಎಸೆದ ಆಹಾರ ತಿಂದು 1 ಆಕಳು ಸಾವು 4 ಆಕಳು ಅಸ್ವಸ್ಥ

0
15
loading...

ಶಿರಸಿ: ಕಲ್ಯಾಣ ಮಂಟಪದಲ್ಲಿ ಹೆಚ್ಚಾದ ಆಹಾರವನ್ನು ಬೇಕಾಬಿಟ್ಟಿ ಎಸೆದ ಪರಿಣಾಮ ಇದನ್ನು ತಿಂದ ಒಂದು ಆಕಳು ಸಾವಿಗೀಡಾಗಿ 4 ಆಕಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಸುಬ್ರಾಯಕೊಡ್ಲಿನಲ್ಲಿ ಮಂಗಳವಾರ ನಡೆಸಿದೆ.

ನಗರದ ಅಂಚಿನ ಗ್ರಾಮೀಣ ಪ್ರದೇಶವಾದ ಸುಬ್ರಾಯಕೊಡ್ಲು ಮತ್ತು ದೇವನಿಲಯದ ಜನತೆ ಈ ರೀತಿಯ ಸಮಸ್ಯೆಯನ್ನು ಸದಾ ಎದುರಿಸಿಕೊಂಡು ಬಂದಿದ್ದಾರೆ. ನಗರಸಭೆ ಮನೆ ಮನೆ ಕಸ ಸಂಗ್ರಹಣೆಯನ್ನು ಯಶಸ್ವಿಯಾಗಿ ನಡೆಸಿದ್ದರೂ ಕೆಲ ಕಲ್ಯಾಣ ಮಂಟಪ, ಖಾಸಗಿಯರು ಇಲ್ಲಿ ಕಸ ನೀಡದೇ ರಾತ್ರಿಯ ವೇಳೆ ನಿರ್ಜನ ಪ್ರದೇಶವಾದ ಚಿಪಗಿ ತಗ್ಗಿನಲ್ಲಿ ಕಸ ಎಸೆದುಹೋಗುತ್ತಿದ್ದಾರೆ. ಇದರಿಂದಾಗಿ ಇಲ್ಲಿಯ ಬೆಟ್ಟ ಬೇಣಗಳು ತ್ಯಾಜ್ಯದಿಂದ ತುಂಬಿಕೊಂಡಿವೆ. ಬೇಕಾಬಿಟ್ಟಿ ಕಸ ಎಸೆಯುವುದನ್ನು ತಡೆಯುವ ಸಲುವಾಗಿ ನಗರಸಭೆ ಕೆಲ ವರ್ಷಗಳ ಹಿಂದೆ ವಾಚ್‌ಮನ್‌ ನೇಮಕ ಮಾಡಿತ್ತು. ಆದರೆ, ಮತ್ತೆ ಈಗ ಅದೇ ಸ್ಥಿತಿ ಮರುಕಳಿಸಿದೆ.

ಸೋಮವಾರ ಇದೇ ರೀತಿಯಲ್ಲಿ ಕಲ್ಯಾಣಮಂಟಪದ ತ್ಯಾಜ್ಯ ಆಹಾರವನ್ನು ರಸ್ತೆ ಬದಿ ಎಸೆಯಲಾಗಿತ್ತು. ಸುಬ್ರಾಯಕೊಡ್ಲಿನ ಕೃಷ್ಣ ಶಿವು ಭಟ್ಟ ಅವರಿಗೆ ಸೇರಿದ ಆಕಳು ಈ ತ್ಯಾಜ್ಯವನ್ನು ತಿಂದು ಅಸು ನೀಗಿದ್ದರೆ ಪರಮೇಶ್ವರ ರಾಮನಾಥ ಭಟ್ಟ ಹಾಗೂ ಇನ್ನಿತರರ 4 ಆಕಳು ಅಸ್ವಸ್ಥಗೊಂಡಿದೆ. ಡಾ. ಮಾರ್ಕಂಡೆ ಈ ಆಕಳಿಗೆ ಶುಶ್ರೂಷೆ ನೀಡುತ್ತಿದ್ದಾರೆ. ಮನುಷ್ಯರು ತಿನ್ನುವ ಆಹಾರ ಜೀರ್ಣೀಸಿಕೊಳ್ಳುವ ಶಕ್ತಿ ಆಕಳಿಗೆ ಇರುವುದಿಲ್ಲ. ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ತಿಂದಲ್ಲಿ ಅವುಗಳ ಆರೋಗ್ಯ ಕೆಡುತ್ತವೆ ಎನ್ನುತ್ತಾರೆ ಡಾ. ಮಾರ್ಕಂಡೆ.

loading...

LEAVE A REPLY

Please enter your comment!
Please enter your name here