ಮಕ್ಕಳಿಗೆ ತಂದೆತಾಯಿ ಗುರುಗಳೆ ಮಾದರಿಯಾಗಿರಬೇಕು

0
17
loading...

ರಾಮದುರ್ಗಃ ನಮ್ಮಲ್ಲಿ ಪ್ರೀತಿ ಮತ್ತು ಭಕ್ತಿ ಇದ್ದರೆ ದೇವರು ಎಲ್ಲವನ್ನು ದಯಪಾಲಿಸುತ್ತಾನೆ. ವಿದ್ಯೆ ಮತ್ತು ಸಂಸ್ಕೃತಿಯನ್ನು ಕಳವುಮಾಡಲಿಕ್ಕಾಗದು ಹಣ, ಸಂಪತನ್ನು ಕಳೆದುಕೊಳ್ಳಬಹುದು ಆದರೆ ವಿದ್ಯೆಯನ್ನು ಯಾರು ಕಿತ್ತುಕೊಳ್ಳುವದಿಲ್ಲ. ಉತ್ತಮ ಸಂಸ್ಕೃತಿಯನ್ನು ಕಲಿಸದ ತಂದೆ ತಾಯಿಗಳು ಅವರಿಗೆ ಶತ್ರು ಇದ್ದಂತೆ ಮಕ್ಕಳಿಗೆ ತಂದೆತಾಯಿ ಗುರುಗಳೆ ಮಾದರಿಯಾಗಿರಬೇಕು ಎಂದು ದಿವ್ಯ ಸಾನಿಧ್ಯವನ್ನು ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ.ಮ.ನಿ.ಪ್ರ. ಅಮರಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದ ಅವರು ಮಾತನಾಡಿ ಮಕ್ಕಳಾದ ತಾವೆಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಸರಿಯಾದ ಸಂಪನ್ಮೂಲಗಳು ದೊರೆತರೆ ಪ್ರತಿಯೊಬ್ಬರೂ ಉತ್ತಮ ಸಾಧನೆ ತೋರುವಲ್ಲಿ ಸಂದೇಹವಿಲ್ಲವೆಂದರು. ಚಂದರಗಿಯ ಈ ಕ್ರೀಡಾ ಶಾಲೆಯು ಹೆಮ್ಮೆಯ ಸಂಸ್ಥೆಯಾಗಿದ್ದು ಇಲ್ಲಿ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಯಲ್ಲಿಯೂ ಸಾಧನೆ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆಗೈದ ತರಬೇತುದಾರರಾದ ಲಕ್ಷ್ಮಣ ಲಮಾಣಿ, ಸೈಕ್ಲಿಂಗ್‌ ತರಬೇತುದಾರರಾದ ಭೀಮಸಿ ವಿಜಯನಗರ, ವಿಷಯ ಶಿಕ್ಷಕರಾದ ಎ.ಎನ್‌.ಮೋದಗಿ, ಎಸ್‌.ಎ.ಹಿರೇಮಠ, ಈರಣ್ಣ ಸೂಳಿಭಾವಿ, ಎಂ.ಎಂ. ಗೋರಿಖಾನ, ಎಸ್‌. ಎಸ್‌. ಉಮಚಗಿ, ಆರ್‌.ಎಂ.ಬೇವಿನಗಿಡದ, ಎಮ್‌. ಬಿ. ಗಡಾದ, ಅವರನ್ನು ಸತ್ಕರಿಸಲಾಯಿತು. ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್‌ ಎ ಪಾಟೀಲ, ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ ಎಸ್‌ ಉಮರಾಣಿ, ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಎಂ ಎಸ್‌ ಮನೋಳಿ, ಎಂ ಜೆ ತೇರಣೇಕರ, ಶಿವಣ್ಣ ಆರ್‌ ನವರಕ್ಕಿ, ಆರ್‌ ಸಿ ಯಕ್ಕುಂಡಿ, ಬಿ.ಜಿ. ಮರನೂರ, ಎಸ್‌. ಬಿ. ಯರಗಣವಿ, ಎಸ್‌. ಆರ್‌. ಮೇತ್ರಿ, ಶ್ರೀಮತಿ ಆರ್‌ ಎಸ್‌ ಯಾದವಾಡ, ಮೃಣಾಲಿನಿ ಎಸ್‌. ಬಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಮಲ್ಲಪ್ಪ ಸವದಿ ನಿರೂಪಿಸಿದನು ಹಾಗೂ ಪ್ರವೀಣ ಕುಡಸೊಮನ್ನವರ ವಂದಿಸಿದನು.

loading...

LEAVE A REPLY

Please enter your comment!
Please enter your name here