ಮಾಜಿ ಪ್ರಧಾನಿ ವಾಜಪೇಯಿ ಜನ್ಮ ದಿನಾಚರಣೆ

0
29
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮ ದಿನಾಚರಣೆಯ ನಿಮಿತ್ತ ನಗರದ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ ಮಾತನಾಡಿ ಈ ದೇಶ ಕಂಡ ಮೇರು ವ್ಯಕ್ತಿತ್ವದ ರಾಜಕಾರಣಿ ಅಟಲ್‍ಜೀಯವರಾಗಿದ್ದರು. ಅವರ ಜೀವನಾದರ್ಶ ಮತ್ತು ಶಿಸ್ತುಬದ್ದ ರಾಜಕೀಯ ನಡೆ ಪ್ರತಿಯೊಬ್ಬರಿಗೂ ಆದರ್ಶ ಎಂದ ಅವರು ಅಟಲ್‍ಜೀಯವರು ಹಾಕಿಕೊಟ್ಟ ರಾಜಕೀಯ ಮಾರ್ಗದಲ್ಲಿ ಬಿಜೆಪಿ ನಡೆಯುವುದರ ಮೂಲಕ ಸ್ಮರಣೀಯ ರಾಷ್ಟ್ರ ಕಟ್ಟಲು ಮುಂದಾಗಿರುವುದು ಈ ದೇಶದ ಸೌಭಾಗ್ಯ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುಧಾಕರ ರೆಡ್ಡಿ, ನಗರದ ಘಟಕದ ಕಾರ್ಯದರ್ಶಿ ಸುಭಾಷ ಅರ್ವೇಕರ, ಎಸ್.ಸಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ, ಶಕ್ತಿ ಕೇಂದ್ರದ ಶಶಿಕಾಂತ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಯ್ಯಾ ಸಾಲೀಮಠ, ಉಪಾಧ್ಯಕ್ಷ ರಮೇಶ ಹೊಸಮನಿ, ಬುದ್ದಿವಂತ ಪಾಟೀಲ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

loading...