ಮುಡೆಣ್ಣವರ ಅವರಿಗೆ ಡಾ.ಅಂಬೇಡ್ಕರ ನ್ಯಾಷನಲ್ ಪೆಲೋಶಿಪ್ ಅವಾರ್ಡ

0
30
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಇಲ್ಲಿಯ ಆದಿಜಾಂಬವ ಪ್ರೌಡ ಶಾಲೆ ಮುಖ್ಯಾಧ್ಯಾಪಕ ಎಸ್.ಡಿ.ಮುಡೆಣ್ಣವರ ಅವರಿಗೆ ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿ ಯವರು ನೀಡುವ ಬಾಬಾ ಸಾಹೇಬ ಡಾ. ಅಂಬೇಡ್ಕರ ನ್ಯಾಷನಲ್ ಪೆಲೋಶಿಪ್ ಅವಾರ್ಡ ನೀಡಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ಡಾ. ಅಂಬೇಡ್ಕರ ಅವರ 125 ನೇ ಜನ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್.ಪಿ ಸುಮನಾಕ್ಷರ ಹಾಗೂ ಮಹಾರಾಷ್ಟ್ರ ಸರ್ಕಾರದ ಸಮಾಜಕಲ್ಯಾಣ ಸಚಿವ ಬಬನರಾವ್ ಲೋನಿಕರ ಅವರಿಂದ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

loading...