ಮುನ್ನೆಚ್ಚರಿಕೆಯಿಂದ ಏಡ್ಸ್‌ ನಿಯಂತ್ರಣ ಸಾಧ್ಯ: ಡಾ.ವಿವೇಕ

0
26
loading...

ಚಿಕ್ಕೋಡಿ: ತಾಲೂಕಿನಲ್ಲಿ ಏಡ್ಸ್‌ ರೋಗ ಕಡಿಮೆಗೊಳ್ಳುತ್ತಿದ್ದು, ಮುನ್ನೆಚ್ಚರಿಕೆಯಿಂದ ಏಡ್ಸ್‌ ರೋಗ ನಿಯಂತ್ರಣದ ಕುರಿತು ಕಾಳಜಿ ವಹಿಸಬೇಕೆಂದು ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ. ವಿವೇಕ ಹೊನ್ನಳ್ಳಿ ತಿಳಿಸಿದರು.

ಪಟ್ಟಣದ ಸಿ.ಎಲ್‌.ಇ. ಸಂಸ್ಥೆಯ ಎಂ.ಕೆ.ಕವಟಗಿಮಠ ಕನ್ನಡ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್‌ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಜಂಟಿ ಕಾರ್ಯದರ್ಶಿ ಎನ್‌.ಎಸ್‌.ವಂಟಮುತ್ತೆ ಅಧ್ಯಕ್ಷತೆ ವಹಿಸಿದ್ದರು. ಡಾ. ಲಕ್ಷ್ಮೀಕಾಂತ ಕಡ್ಲ್ಯಾಪಗೋಳ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವಾಯ್‌.ಎಸ್‌.ಪಾಟೀಲ ಮಾತನಾಡಿದರು.

ಸಂಸ್ಥೆಯ ಆಡಳಿತಾಕಾರಿ ಎಸ್‌.ಐ.ಬಿಸ್ಕೋಪ್‌, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಡಿ.ಎಸ್‌.ಕೋಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಐಶ್ವರ್ಯಾ ಪಾಟೀಲ ಸ್ವಾಗತಿಸಿದರು. ಕಾರ್ತಿಕ ಖೋತ ನಿರೂಪಿಸಿದರು. ಪ್ರತೀಕ್ಷಾ ಮೇದಾರ ವಂದಿಸಿದರು.

loading...

LEAVE A REPLY

Please enter your comment!
Please enter your name here