ಮೂಡನಂಬಿಕೆ ಹೋಗಲಾಡಿಸುಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ

0
79
loading...

ರಾಮದುರ್ಗ: ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ. ಶಿಬಿರಾರ್ಥಿಗಳು ಗ್ರಾಮಗಳಲ್ಲಿ ಮೂಡನಂಬಿಕೆ ಹೋಗಲಾಡಿಸುಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿ.ಪಂ.ಸದಸ್ಯ ಜಹೂರ ಹಾಜಿ ಹೇಳಿದರು.

ಸ್ಥಳೀಯ ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನ ಎನ್‌.ಎಸ್‌.ಎಸ್‌ ಘಟಕದಿಂದ ದತ್ತು ಗ್ರಾಮ ತಾಲೂಕಿನ ಹಳೇತೊರಗಲ್ಲ ತಾಂಡಾದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಕ್ಷೇತ್ರದಿಂದ ತಾವು ಎರಡು ಭಾರಿ ಆಯ್ಕೆಯಾಗಿದ್ದೇನೆ. ಈ ಗ್ರಾಮವನ್ನು ಸಂಪೂರ್ಣ ಸಾರಾಯಿ ಮುಕ್ತ ತಾಂಡಾ ಮಾಡಲಾಗಿದೆ. ತಾಂಡಾದ ಗ್ರಾಮಸ್ಥರು ಸಾಮಾಜಿಕ ಸೇವೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ. ಶಿಬಿರಾರ್ಥಿಗಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆಂದು ಶಿಬಿರಾರ್ಥಿಗಳಿಗೆ ಧೈರ್ಯ ತುಂಬಿದರು.

ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ. ಸೇವಾ ಮನೋಭಾವ, ಸಮಾನತೆ, ಹೊಂದಾಣಿಕೆ, ಸಹೋದರತ್ವ, ನಾಯಕತ್ವ ಗುಣಗಳು ಸೇರಿದಂತೆ ಅನೇಕ ಮೌಲ್ಯಗಳನ್ನು ರಾಷ್ರೀಯ ಸೇವಾ ಯೋಜನೆ ಒದಗಿಸುತ್ತದೆ. ಶ್ರಮದ ಮಹತ್ವ ಮೂಡಿಸುವದರ ಜೊತೆಗೆ ಬೌಧ್ಧಿಕ ಹಾಗೂ ಸಾಮಾಜಿಕ ಸಾಮರ್ಥ್ಯಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಇಂತಹ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಬಾಬುಸಾಬ ಹುದ್ದಾರ ಮಾತನಾಡಿ, ಶಿಬಿರದ ಯಶಸ್ವಿಗೆ ಅಗತ್ಯವಿರುವ ಸಂಪೂರ್ಣ ಸಹಾಯ ಸಹಕಾರವನ್ನು ಪಂಚಾಯತಿಯಿಂದ ನೀಡುವದಾಗಿ ಭರವಸೆ ನೀಡಿದರು.

ಪ್ರಾಚಾರ್ಯ ಪ್ರೊ| ವಿ.ಬಿ.ಸೋಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ.ಸದಸ್ಯರಾದ ಶಿವಪ್ಪ ಲಮಾಣಿ, ಸಾಧೀಕ ಹುದ್ದಾರ, ವಾಲಪ್ಪ ರಾಠೋಡ, ಕೃಷ್ಣಪ್ಪ ಲಮಾಣಿ, ಪಾಂಡಪ್ಪ ಲಮಾಣಿ, ಈಶ್ವರ ಲಮಾಣಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here