ಮೂಡ ನಂಬಿಕೆ ವಿರೋಧಿ ಪರಿವರ್ತನಾ ಜಾಥಾ

0
39
loading...

ಕನ್ನಡಮ್ಮ ಸುದ್ದಿ-ದಾಂಡೇಲಿ ; ಮಾನವ ಬಂದುತ್ವ ವೇದಿಕೆಯ ಅಶ್ರಯದಲ್ಲಿ, ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ, ಡಾ. ಬಿ.ಆರ್. ಅಂಬೇಡ್ಕರವರ ಮಹಾ ಪರಿ ನಿರ್ವಾಣದ ಪ್ರಯುಕ್ತ, ಡಿಸೆಂಬರ್ 6 ರಂದು ಬೆಳಗಾವಿಯಲ್ಲಿ ನಡೆಯಲಿರುವ ಮೂಡ ನಂಬಿಕೆ ವಿರೋಧಿ ಪರಿವರ್ತನಾ ದಿನಾಚಣೆಯ ಭಾಗವಾಗಿ ಆಗಮಿಸಿದ ವಾಹನ ಜಾಥಾ ದಾಂಡೇಲಿಯಲ್ಲಿ ಕಾರ್ಯಕ್ರಮ ನೀಡಿ ಸೋಮವಾರ ಮುನ್ನಡೆಯಿತು.
ರವಿವಾರ ಸಂಜೆ ದಾಂಡೇಲಿಗಾಮಿಸಿದ್ದ ಜಾಥಾವನ್ನು ಸ್ಥಳೀಯರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಾಹಿತಿಗಳಾದ ಭೀಮಾಶಂಕರ ಅಜನಾಳ, ಉಪನ್ಯಾಸಕ ಹನ್ಮಂತ ಕುಂಬಾರ, ಯುವಜನ ಮುಖಂಡ ನಗರಸಭಾ ಸದಸ್ಯ ಡಿ. ಸ್ಯಾಮಸನ್, ಎ.ಎಮ್. ಜಾಫರ್ ಮುಂತಾದವರು ಮಾತನಾಡಿ ಜಾಥಾಕ್ಕೆ ಶುಭ ಹಾರೈಸಿದರು. ಇಂದು ಮೂಡ ನಂಬಿಕೆಯನ್ನು ನೀರ್ಮೂಲನೆ ಮಾಡುವ ಕೆಲಸವಾಗಭೆಕಾಗಿದೆ ಎಂದರು.
ಜಾಥಾ ಜೊತೆಯಲ್ಲಿ ಶ್ರೀ ನಾರಾಯಣ ಗುರು ಕಲಾ ತಂಡದ ಸಂಚಾಲಕ ಕೆ. ಬಾನಪ್ಪ, ರಂಗನಾಥ, ಪ್ರಶಾಂತ, ರಂಗಮ್ಮ, ಕೃಷ್ಣಯ್ಯ ಮುಂತಾದವರಿದ್ದರು.

loading...

LEAVE A REPLY

Please enter your comment!
Please enter your name here