ರಾಜಕಾಲುವೆಯ ಮೇಲಿನ ಅಪಾರಮೆಂಟ್‌ ತೆರವುಗೊಳ್ಳಿಸಿ

0
26
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:20 ನಗರ ಪ್ರದೇಶದಲ್ಲಿರುವ ಬಹುತೇಕ ರಾಜಕಾಲುವೆಗಳ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಶಹಾಪುರದಲ್ಲಿನ ಸಿಂಡಿಕೇಟ್‌ ಬ್ಯಾಂಕ್‌ನ ಎದುರಿಗೆ ಅಪಾರಮೆಂಟನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಅದನ್ನು ತೆರವುಗೊಳ್ಳಿಸುವಂತೆ ನಗರ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಾಯಕ ಗುಂಜಟ್ಕರ ಇಂದಿಲ್ಲಿ ಸೂಚಿಸಿದರು.
ಅವರು ಮಂಗಳವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಗರ ಯೋಜನೆ ಹಾಗೂ ನಗರ ಅಭಿವೃದ್ಧಿ ಸ್ಥಾಯಿ ಸಮಿತಿಯ ಸಭೆಯಲ್ಲಿ ಮಾತನಾಡುತ್ತ, ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ಅಕ್ರಮವಾಗಿ ನಗರದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿವೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುವುದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜಕಾಲುವೆಗಳ ಮೇಲೆ ನಿರ್ಮಾಣ ಮಾಡಿರುವ ಕಟ್ಟಡಗಳ ಸಮೀಕ್ಷೆ ನಡೆಸಿ ಅವುಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶಹಾಪುರ ಪ್ರದೇಶದಲ್ಲಿನ ಸಿಂಡಿಕೇಟ್‌ ಬ್ಯಾಂಕ್‌ ಎದುರಿನ ಸರ್ವೇ ನಂಬರ 173ನಲ್ಲಿ ನೀಲನಕ್ಷೆಯ ಪ್ರಕಾರ ಅಲ್ಲಿ ರಾಜಕಾಲುವೆಯ ರಸ್ತೆ ಇದೆ. ಆದರೆ ಅಕ್ರಮವಾಗಿ ಅಪಾರಮೆಂಟ್‌ ನಿರ್ಮಿಸುತ್ತಿದ್ದಾರೆ. ಇದು ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿ. ಕೂಡಲೇ ಆ ಕಟ್ಟಡದ ಮಾಲೀಕರ ಮೇಲೆ ಕ್ರಮಕೈಗೊಂಡು ಅದನ್ನು ತೆರವುಗೊಳ್ಳಿಸಿ ರಸ್ತೆ ನಿರ್ಮಾಣ ಮಾಡಬೇಕೆಂದು ಹೇಳಿದರು.
ರೇಲ್ವೆಗೆಟ್‌ 3 ರಿಂದ 4ನೇ ಗೆಟ್‌ ವರೆಗೆ ಅಕ್ರಮವಾಗಿ ಮಳಿಗೆಗಳನ್ನು ಕಟ್ಟುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಕೆ ಎಂದು ಪ್ರಶ್ನಿಸಿದ ಅವರಿಗೆ ನಗರ ಅಭಿಯಂತ ಆರ್‌.ಎಸ್‌.ನಾಯಕ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್‌ ಮಾಡಿಸಿಲ್ಲ ಕೂಡಲೇ ಅವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಾತನಾಡಿ, ಯಾವುದೇ ಕಾರಣಕ್ಕೂ ಅಲ್ಲಿ ಕಾಮಗಾರಿಗಳು ನಡೆಯದಂತೆ ಕ್ರಮಕೈಗೊಂಡು ತೆರವುಗೊಳಿಸಬೇಕೆಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರಕಾರದ 100 ಕೋಟಿ ಅನುದಾನದಲ್ಲಿ ಉತ್ತರ ಕ್ಷೇತ್ರದಕ್ಕೆ ಹಾಗೂ ದಕ್ಷಿಣ ಕ್ಷೇತ್ರಕ್ಕೆ ಇಂತಿಷ್ಟು ಅನುದಾನದಿಂದ ಅಭಿವೃದ್ಧಿಗೆ ಹಂಚಿಕೆ ಮಾಡಲು ಸಾಧ್ಯವಿದ್ದರೆ ನಗರವನ್ನು ಅಭಿವೃದ್ಧಿ ಪಡೆಸಬೇಕೆಂದು ಹೇಳಿದ್ದಕ್ಕೆ ಆರ್‌,ಎಸ್‌.ನಾಯಕ ಮಾತನಾಡಿ, ಈ ಕುರಿತು ಜಿಲ್ಲಾಉಸ್ತುವಾರಿ ಸಚಿವರ ನಿರ್ಣಯ ತೆಗೆದುಕೊಳ್ಳಬೇಕು. ಅಲ್ಲದೆ ಪಾಲಿಕೆಯ ಕೌನ್ಸಿನಲ್‌ ಸಭೆಯಲ್ಲಿ 14ನೇ ಹಣಕಾಸು ಆಯೋಗದಂತೆ ನಗರದ ಪ್ರದೇಶದ ಅಭಿವೃದ್ಧಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಸರಕಾರದ 100 ಕೋಟಿ ರೂ,ಗಳ ಅನುದಾನದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅದರಲ್ಲಿ ಜಿಲ್ಲಾಧಿಕಾರಿಗಳು, ಸಂಸದರು ಹಾಗೂ ಸ್ಥಳೀಯ ಶಾಸಕರು ಆ ಸಮಿತಿಯಲ್ಲಿರುತ್ತಾರೆ. ಅವರು ಈ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ನಗರದಲ್ಲಿರುವ ಉದ್ಯಾನ ವನಗಳು ನೆನೆಗುದಿಗೆ ಬಿದ್ದಿವೆ. ಅವುಗಳ ಅಭಿವೃದ್ಧಿಗಾಗಿ ಸರಕಾರದ 100 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡೆಸಬೇಕೆಂದು ಗುಂಜಟ್ಕರ ಹೇಳಿದರು. ಇದಕ್ಕೆ ಆಕ್ಷೇಪವ್ಯಕ್ತಪಡಿಸಿದ ನಗರ ಅಭಿಯಂvಆರ್‌.ಎಸ್‌,ನಾಯಕ ಈಗಾಗಲೇ ನಗರದಲ್ಲಿರುವ ಉದ್ಯಾನ ವನಗಳು ಹಾಗೂ ಕ್ರೀಡಾಂಗಣ ಅಭಿವೃದ್ಧಿಗಾಗಿ 14ನೇ ಹಣಕಾಸಿನಲ್ಲಿ ಅನುದಾನ ಬಿಡುಗಡೆಯಾಗಿದೆ. ಕಣಬರ್ಗಿ ಉದ್ಯಾನವನಕ್ಕೆ 30 ಲಕ್ಷ, ಹಿಂಡಲಗಾ ಉದ್ಯಾನ 35, ರುಕ್ಮೀಣಿ ನಗರಕ್ಕೆ 25 ಲಕ್ಷ, ರಾಮತೀರ್ಥ ನಗರ 35 ಲಕ್ಷ, ಶ್ರೀನಗರ 50 ಲಕ್ಷ, ಸದಾಶಿವ ನಗರ 50 ಲಕ್ಷ, ಅಯೋಧ್ಯಾನಗರ 40 ಲಕ್ಷ ಹಾಗೂ ದೇವರಾಜ ಅರಸ ಕಾಲೋನಿಗೆ 50 ಲಕ್ಷ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಮೇಯರ್‌ ಸರಿತಾ ಪಾಟೀಲ, ಉಪಮೇಯರ್‌ ಸಂಜಯ ಶಿಂಧೆ, ನಗರ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ, ನಗರ ಅಭಿವೃದ್ಧಿ ಅಧಿಕಾರಿ ಎ.ಎಸ್‌.ಕಾಂಬಳೆ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here