ರಾಷ್ಟ್ರೀಕೃತ ಬ್ಯಾಂಕ್‌ ಸ್ಥಾಪನೆಗಾಗಿ ಆಗ್ರಹ

0
42
loading...

ಕನ್ನಡಮ್ಮ ಸುದ್ದಿ-ಪಾಲಭಾವಿ: ಮುಗಳಖೋಡ ಪಟ್ಟಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಶಾಖೆ ಒಂದು ಬಿಟ್ಟರೆ ರಾಷ್ಟ್ರೀಕೃತ ಬ್ಯಾಂಕ್‌ ಮತ್ತೊಂದು ಇರುವುದಿಲ್ಲ. ಕಾರಣ ಪಟ್ಟಣದಲ್ಲಿ 3 ಪೆಟ್ರೋಲ್‌ ಬಂಕ್‌ಗಳು, 4 ಬಾರ್‌ಗಳು, 10 ರಿಂದ 15 ಕೀರಾಣಿ ಅಂಗಡಿಗಳು ಹಾಗೂ ಇತರೆ ವ್ಯಾಪಾರಿಗಳು ಇದ್ದು, ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ಹಾಗೂ ಗೋವಾ ರಾಜ್ಯಗಳಿಂದ ಸಾವಿರಾರು ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಜನರಿಗೆ ಹಣಕಾಸು ವ್ಯವಹಾರ ನಡೆಸುವುದು ತುಂಬಾ ಕಷ್ಟವಾಗುತ್ತಿದೆ ಎಂದು ಅಶೋಕ ಕೊಪ್ಪದ ಹೇಳಿದರು.
ಪಟ್ಟಣಧಲ್ಲಿ 70% ರೈತಾಪಿ ಜನರಿದ್ದು ಪಟ್ಟನದಿಂದ ಕಳಿಸುವ ಕಬ್ಬಿಣ ಬಿಲ್‌ಗಳಿಗಾಗಿ ಪಕ್ಕದ ಹಾರೂಗೇರಿ, ಮೂಡಲಗಿ, ಸೈದಾಪೂರ, ರಬಕವಿ ಹಾಗೂ ರಾಯಭಾಗದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪಟ್ಟಣದಲ್ಲಿ ಸರಕಾರಿ ಶಾಲೆಗಳು ಹಾಗೂ ಅನೇಕ ಖಾಸಗಿ ಶಾಲಾ ಕಾಲೇಜುಗಳಿದ್ದು ಶಿಷ್ಯ ವೇತನಕ್ಕಾಗಿ, ಖಾತೆ ತೆರೆಯಲು ಶಾಲಾ, ಕಾಲೇಜುಗಳಿಗೆ ರಜೆ ಹಾಕಿ ಬ್ಯಾಂಕ್‌ಗಳ ಮುಂದೆ ನಿಲ್ಲುವಂತಾಗಿದೆ. ಎಂದು ಹಸಿರು ಸೇನೆಯ ಪುರಸಭಾ ಘಟಕದ ಅಧ್ಯಕ್ಷ ಜ್ಞಾನೇಶ್ವರ ಅಳಗವಾಡಿ ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುಗಳಖೋಡ ಪಟ್ಟಣದಲ್ಲಿ ರಾಷ್ರೀಕೃತ ಬ್ಯಾಕ್‌ ತೆರೆಯುವಂತೆ ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ರಾಜ್ಯ ರೈತ ಸಂಘದ ಹಸೀರು ಸೇನೆ ಪಟ್ಟಣ ಶಾಖೆ ಅಧ್ಯಕ್ಷ ಜ್ಞಾನೇಶ್ವರ ಅಳಗವಾಡಿ ಮಾತನಾಡಿ ಮುಗಳಖೋಡ ಪಟ್ಟಣಕ್ಕೆ ಯಾವುದಾದರೊಂದು ರಾಷ್ಟ್ರೀಕೃತ ಬ್ಯಾಂಕ್‌ನ ಅವಶ್ಯಕತೆಯಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವ ಮೂಲಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪಟ್ಟಣದಲ್ಲಿ ಯಾವುದಾದರೊಂದು ರಾಷ್ಟ್ರೀಕೃತ ಬ್ಯಾಂಕ್‌ ತೆರೆಯಲು ಆದೇಶ ನೀಡುವಂತೆ ಪುರಸಭೆಯ ಮುಖ್ಯಧಿಕಾರಿ ಎಸ್‌.ಒ.ವಡೇರ ಮುಖಾಂತರ ಜಿಲ್ಲಾಧಿಕಾರಿಗಳ ಬೆಳಗಾವಿ ಇವರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಹಾಗೂ ಪಟ್ಟಣದ ನಾಗರಿಕರು ಮನವಿಸಲ್ಲಿಸಿದರು. ಅರ್ಜಿ ಸ್ವೀಕರಿಸಿ ಮಾತನಾಡಿದ ಮುಖ್ಯಧಿಕಾರಿ ಎಸ್‌.ಓ.ವಡೇರ ಉನ್ನತ ಬ್ಯಾಂಕಿನ ಮುಖ್ಯ ವ್ಯವಸ್ಥಾಕರ ಬೆಳಗಾವಿ ಹಾಗೂ ಜಿಲ್ಲಾಧಿಕಾರಿಗಳ ಗನಮಕ್ಕೆ ತರವುದಾಗಿ ತಿಳಿಸಿದರು.
ಸಿದ್ರಾಮ ಅಳಗವಾಡಿ, ಜ್ಞಾನೇಶ್ವರ ಅಳಗವಾಡಿ, ರಾಯಗೌಡ ಖೇತಗೌಡರ, ಅಶೋಕ ಕೊಪ್ಪದ, ಪುರಸಭೆ ಸದಸ್ಯ ಗೌಡಪ್ಪ ಖೆತಗೌಡರ ಚಂದ್ರಕಾಂತ ಗೌಲತ್ತಿನ್ನವರ, ಜ್ಯೋತೆಪ್ಪ ಮೆಕ್ಕಳಕಿ ರಾಮು ಪಾಟೀಲ, ಶಿವಪ್ಪ ಜಂಬಗಿ, ಸಿದ್ರಾಮ ಯರಡತ್ತಿ, ರಾಜೇಂದ್ರ ಬಾಬಣ್ಣವರ, ಮಲ್ಲಪ್ಪ ಮುಧೋಳ, ಸಂಗಪ್ಪ ಹಿಪ್ಪರಗಿ, ಮಾರುತಿ ನಾವಿ, ಸಂಜು ಬಾಬಣ್ಣವರ, ಬಸಪ್ಪ ಗೋಕಾಕ, ಸಂತೋಷ ಕಾಂಬಳೆ ಇದ್ದರು.

loading...

LEAVE A REPLY

Please enter your comment!
Please enter your name here