ರೈತರನ್ನು ಕಡೆಗಣಿಸಿದರೆ ಆಂದೋಲನ ನಿಶ್ಚಿತ: ಬಾಬಾಗೌಡ

0
40
loading...

ಚನ್ನಮ್ಮ ಕಿತ್ತೂರು : ಜಿಲ್ಲೆಯ ಕೆಲವು ತಾಲೂಕಿನ ಹಳ್ಳಿಗಳಲ್ಲಿ ಖಾಸಗಿ ಲೇವಾದೇವಿ ಸಂಘ ಹಾಗೂ ಬ್ಯಾಂಕನವರು ಸಾಲ ವಸೂಲಾತಿಗಾಗಿ ಜಿಲ್ಲಾಧಿಕಾರಿಗಳು ನಡೆಸಿದ ಪತ್ರಿಕಾ ಹೇಳಿಕೆ ನಮಗೆ ಬಂಧನಕಾರಿಯಲ್ಲವೆಂದು ಹೇಳುತ್ತಾ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ ಆರೋಪಿಸಿದ್ದಾರೆ.

ಸಮೀಪದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಥಣಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಖಾಸಗಿ ಲೇವಾದೇವಿ ಸಂಘ ಹಾಗೂ ಬ್ಯಾಂಕನವರು ಸಾಲ ವಸೂಲಾತಿಗಾಗಿ ತೆರಳಿದಾಗ ಸಾಲ ಮರುಪಾವತಿಯ ಬಗ್ಗೆ ಜಿಲ್ಲಾಧಿಕಾರಿಗಳ ಯಾವ ಪತ್ರಿಕಾ ಹೇಳಿಕೆಯೂ ನಮಗೆ ಬಂಧನಕಾರಿಯಲ್ಲವೆಂದು ಉದ್ದಟತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗದೇ ಪರದಾಡುತ್ತಿದ್ದಾರೆ ಬೆಲೆ ರಕ್ಷಣೆ ಮಾಡುವಂತೆ ಕೃಷಿಕರು ಅನೇಕ ಚಳುವಳಿಗಳನ್ನು ಮಾಡಿದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಿವಿಗೊಡದೆ ಬೇಜವಾಬ್ದಾರಿ ಪÀ್ರsÀದರ್ಶಿಸುತ್ತಿವೆ ಎಂದ ಅವರು, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದು ಕನಿಷ್ಟವಾಗಿ ಬೆಳೆದ ಬೆಳೆಗಳಿಗೂ ಸಹ ಸರಿಯಾದ ಬೆಲೆ ಸಿಗುತ್ತಿಲ್ಲ ಇದರ ಪರಿಣಾಮ ಗ್ರಾಮೀಣರ ಕೈಯಲ್ಲಿ ದುಡ್ಡಿಲ್ಲದೇ ಜೀವನ ನಿಭಾಯಿಸುವ ಜವಾಬ್ದಾರಿ ಅವರ ಹೆಗಲೇೆರುತ್ತಿದೆ, ಇಂತಹ ಸಮಯದಲ್ಲಿ ಖಾಸಗಿ ಬ್ಯಾಂಕುಗಳು ಸಹ ಜಬರದಸ್ತಿ ಸಾಲ ಮಸೂಲಿ ಮಾಡುವ ಪ್ರಯತ್ನಕ್ಕೆ ಕೈ ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಖಾಸಗಿ ಬ್ಯಾಂಕುಗಳಲ್ಲಿ ಅನೇಕ ಜನ ರೈತರು ಸಾಲ ಮಾಡಿ ಕೃಷಿಗೆ ಸಂಬಂಧಿಸಿದ ಉಪಕರಣ ಹಾಗೂ ವಾಹನಗಳನ್ನು ತೆಗೆದುಕೊಂಡಿದ್ದಾರೆ ಬರಗಾಲದ ಸಮಯದಲ್ಲಿ ಸಾಲ ಮರುಪಾವತಿ ಮಾಡಲು ಸಹ ಅವರಿಂದ ಕಷ್ಟವಾಗುತ್ತಿದೆ ಆದರೇ ಖಾಸಗಿ ಬ್ಯಾಂಕುಗಳು ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ರೈತರ ಟ್ರ್ಯಾಕ್ಟರ್‌ಗಳನ್ನು ಸಹ ಜಪ್ತಿ ಮಾಡುವ ಮುಖಾಂತರ ರೈತರನ್ನು ಇನ್ನಷ್ಟು ಪಾತಾಳಕ್ಕೆ ತುಳಿಯುತ್ತಿದ್ದಾರೆ ಅಷ್ಟೇ ಅಲ್ಲದೆ, ಖಾಸಗಿ ಬ್ಯಾಂಕನವರು ಸಿಕ್ಕಾಪಟ್ಟೆ ಬಡ್ಡಿ ಆಕರಣೆ ಮಾಡಿ ಸಾಲ ತೆಗೆದುಕೊಂಡಿರುವ ಬಡವರ ಹಾಗೂ ರೈತ ಮಹಿಳೆಯರಿಗೆ ಒತ್ತಾಯ ಪೂರ್ವಕವಾಗಿ ಸಾಲ ವಸೂಲಿಗಾಗಿ ಬೆದರಿಕೆ ಹಾಕುತ್ತಿದ್ದರೆ ಮತ್ತು ಕೆಲವರ ಮನೆಗಳನ್ನು ಬೀಗ ಹಾಕಿ ಕಬ್ಜಾ ತೆಗೆದುಕೊಳ್ಳುವ ಬೆದರಿಕೆಯನ್ನು ಸಹ ಒಡ್ಡುತ್ತಿದ್ದಾರೆ, ಈ ಸಾಲಕ್ಕೆ ಒಳಗಾದ ರೈತರು ಹಾಗೂ ಬಡ ಜನರು ತಹಶೀಲ್ದಾರ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ತೆರಳಿ ತಮ್ಮ ಅಳಲನ್ನು ತೊಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇಂತಹ ಪರಿಸ್ಥಿತಿಯಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕ್ಯಾಬೀಜ್‌, ಟೊಮ್ಯಾಟೊ, ಹಸಿಮೆಣಸಿನಕಾಯಿ, ಸೇರಿದಂತೆ ತರಕಾರಿಗಳು ರಸ್ತೆ ಪಾಲಾಗುತ್ತಿದ್ದು ರೈತನ ಪರಿಸ್ಥಿತಿ ಹೇಳತಿರದಾಗಿದೆ, ಹಾಗೂ ಕೇಂದ್ರ ಸರ್ಕಾರ ಹತ್ತಿ ಬೆಳೆಯ ರಪ್ತು ನಿಷೇಧ ಮಾಡಿದ್ದರಿಂದ ಕ್ವಿಂಟಾಲ್‌ಗೆ ಎಂಟು ಸಾವಿರ ಇದ್ದ ಧಾರಣಿ ಕುಸಿತ ಕಂಡು ಐದು ಸಾವಿರಕ್ಕಿಂತಲೂ ಕಡಿಮೆ ಹಾಗೂ ಈಗ ಪ್ರಾರಂಭವಾದ ತೊಗರೆ ಬೆಳೆಯ ಧಾರಣಿಯು ಸಹ ಎಂಟು ಸಾವಿರದಿಂದ ಮೂರು ಸಾವಿರಕ್ಕೆ ಬಂದು ತಲುಪಿದೆ ಎಂದು ವಿಷಾದ ವ್ಯಕ್ತ ಪಡಿಸಿದರು. ಈ ಎಲ್ಲ ದುರಂತಕ್ಕೆ ಯಾವ ಶಾಸಕರು ಹಾಗೂ ಸಂಸದರು ಮಾತನಾಡಲು ಸಿದ್ದರಿಲ್ಲ ಶೋಕಿಲಾಲ್‌ಗಳಾದ ಇವರುಗಳನ್ನು ಬೀದಿಗೆಳೆಯಲು ರೈತರ ಹಾಗೂ ಜನಸಾಮಾನ್ಯರ ಪಕ್ಷಾತೀತವಾದ ಆಂದೋಲನವನ್ನು ಹಮ್ಮಿಕೊಳ್ಳಲು ಅಖಂಡ ಕರ್ನಾಟಕ ರೈತ ಸಂಘದಿಂದ ಇದೇ ತಿಂಗಳು 23 ರಂದು ಬೆಳಿಗ್ಗೆ 11 ಘಂಟೆಗೆ ಚಿಕ್ಕಬಾಗೇವಾಡಿಯ ಅವರ ತೋಟದ ಮನೆಯಲ್ಲಿ ಚಿಂತನಾ ಸಭೆ ನಡೆಸಲಾಗುವುದು ಈ ಕುರಿತು ರೈತರು ಹಾಗೂ ಜನಸಾಮಾನ್ಯರು ಆಸಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

loading...

LEAVE A REPLY

Please enter your comment!
Please enter your name here